ಸುಟ್ಟಕೋಡಿಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೆ ಮುಂದಾಗದ ಅಧಿಕಾರಿಗಳು.

0
242

ಕೊಟ್ಟೂರು:ಜುಲೈ:08:-ತಾಲೂಕಿನ ರಾಂಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸುಟ್ಟಕೋಡಿಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಮುಂದಾಗದ ತಾಲೂಕು ಪಂಚಾಯಿತಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ

ಸರ್ಕಾರವು ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ ಸಾಕಷ್ಟು ಅನುದಾನ ನೀಡುತ್ತದೆ ಆದರೆ ಆ ಯೋಜನೆಗಳು ಸರಿಯಾದ ರೀತಿ ಸಮರ್ಪಕ ಕೊರತೆಯಿಂದ ಹಾಳಾಗುತ್ತವೆ ಸುಟ್ಟಕೊಡಿಹಳ್ಳಿಯಲ್ಲಿ ಐದಾರು ತಿಂಗಳು ಶುದ್ಧ ಕುಡಿಯುವ ನೀರು ಇಲ್ಲ ಅಶುದ್ಧವಾದ ನೀರನ್ನು ಕುಡಿದು ಗ್ರಾಮದ ಮಕ್ಕಳು ವೃದ್ಧರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರುತ್ತಿದ್ದಾರೆ ಈ ನೀರು ಕುಡಿದರೆ ಕೆಮ್ಮು ನೆಗಡಿ ಜ್ವರ ಹಾಗೂ ಮುಂತಾದ ರೋಗಗಳು ಬರುತ್ತವೆ ಹಾಗೂ ಈ ಶುದ್ಧ ಘಟಕ ನೀರಿನ ವೇಸ್ಟ್ ನೀರು ಹೊರಗಡೆ ಹೋಗದೆ ಘಟಕದ ಒಳಗಡೆ ನಿಲ್ಲುತ್ತವೆ ಇದರಿಂದ ಸಾಂಕ್ರಾಮಿಕ ರೋಗಗಳು ಬರುತ್ತವೆ

ಪಕ್ಕದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಶೌಚಾಲಯ ಇಲ್ಲ ಶಾಲೆಗೆ ಕಾಂಪೌಂಡ್ ವ್ಯವಸ್ಥೆಯು ಇಲ್ಲ ಇದರ ಬಗ್ಗೆ ಗ್ರಾಮದ ಗ್ರಾಮಸ್ಥರು ರಾಂಪುರ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಪತ್ರವನ್ನು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಯಾವುದೇ ಅಧಿಕಾರಿ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಹೀಗೆ ಮಾಡಿದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಗ್ರಾಮಸ್ಥರು ಪತ್ರಿಕೆಯ ಮುಂದೆ ತಮ್ಮ ಅಳಲನ್ನು ಹೇಳಿಕೊಂಡರು

ಪ್ರತಿಕ್ರಿಯೆ

ಮೂಲಭೂತ ಸೌಕರ್ಯಗಳಲ್ಲಿ ಬಹು ಮುಖ್ಯವಾದದ್ದು ನೀರು ಈ ಕುಡಿಯುವ ನೀರಿಗಾಗಿ ಪ್ರತಿದಿನ ಪರದಾಡುತ್ತಿದ್ದೇವೆ ಈ ನೀರು ಕುಡಿದು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಬೇಕು ತಮ್ಮ ಸಮಸ್ಯೆ ಆಲಿಸದ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು.

-ಜಿ.ಮಲ್ಲಿಕಾರ್ಜುನ
ತಾಲೂಕು ಕರವೇ ರಕ್ಷಣಾ ವೇದಿಕೆಯ ಕಾರ್ಯದರ್ಶಿ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here