ಗುಂಪುಸಭೆಗಳ ಮೂಲಕ “ರಾಷ್ಟ್ರೀಯ ಪೌಷ್ಟಿಕ ಆಹಾರ ಮಾಸಾಚರಣೆ” ಕುರಿತು ಅರಿವು ಮೂಡಿಸುವ ಕಾರ್ಯಕ್ರಮ,

0
490

ಸಂಡೂರು:ಸೆ:02:-ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಗುಂಪುಸಭೆಗಳ ಮೂಲಕ ಪೌಷ್ಟಿಕ ಆಹಾರ ಮಾಸ ಆಚರಣೆಯ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮವನ್ನು ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪ್ರತಿವರ್ಷವೂ ಸೆಪ್ಟೆಂಬರ್ ತಿಂಗಳನ್ನು ಪೌಷ್ಟಿಕ ಆಹಾರ ಮಾಸಾಚರಣೆ ಎಂದು ಆಚರಿಸಲಾಗುತ್ತದೆ, ಅದರಂತೆ ಈ ವರ್ಷವೂ ಸೆಪ್ಟೆಂಬರ್ 1 ರಿಂದ 30 ರ ವರೆಗೆ ವಿಶೇಷವಾಗಿ ಆಚರಿಸಲಾಗುತ್ತದೆ, ಈ ವರ್ಷ ಮಳೆ ಹೆಚ್ಚು ಸುರಿದಿರುವುದರಿಂದ ಮುಂದಿನ ದಿನಗಳಲ್ಲಿ ಚಳಿಯೂ ಹೆಚ್ಚಾಗಿರುವ ಸಂಭವ ಹೆಚ್ಚಿರುತ್ತದೆ, ಆ ಚಳಿಯಿಂದ ರಕ್ಷಿಸಿಕೊಳ್ಳಲು ನಮ್ಮ ದೇಹಕ್ಕೆ ಹೆಚ್ಚು ಕೊಬ್ಬಿನಾಂಶ, ಪ್ರೋಟೀನ್, ಮಿಟಮಿನ್, ಕಾರ್ಬೋಹೈಡ್ರೇಟ್, ಮತ್ತು ಖನಿಜಾಂಶಗಳ ಅವಶ್ಯಕತೆ ಇರುತ್ತದೆ, ಹಾಗಾಗಿ ಈಗಿನಿಂದಲೇ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಟಿಕ ಆಹಾರದ ಅವಶ್ಯಕತೆ ಇದೆ, ಹಾಗೆ ಗರ್ಭಿಣಿಯರು, ಮಕ್ಕಳ ತಾಯಂದಿರು, ಮಕ್ಕಳಿಗೆ ರಕ್ತಹೀನತೆ ದೂರಮಾಡಲು ಹೆಚ್ಚು ಪೋಷಕಾಂಶಗಳ ಇರುವ ಆಹಾರ ಸೇವಿಸುವುದು ಸಹಾ ಅವಶ್ಯವಿದ್ದು, ಹೆಚ್ಚು ಪೋಷಾಕಾಂಶವುಳ್ಳ ಆಹಾರವನ್ನು ಸೇವಿಸುವ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಸೆಪ್ಟೆಂಬರ್ ತಿಂಗಳನ್ನು ಪೌಷ್ಟಿಕ ಆಹಾರ ಮಾಸಾಚರಣೆ ಎಂದು ಆಚರಿಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಶಿಬಿರಗಳನ್ನು ಆಯೋಜಿಸಿ ಸ್ಥಳೀಯ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಹೆಚ್ಚು ಪೌಷ್ಟಿಕಾಂಶ ಉಳ್ಳ ಆಹಾರದ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟು ಹೇಗೆ ತಯಾರಿಸ ಬೇಕು ಎಂಬುದನ್ನು ಮಹಿಳೆಯರಿಗೆ ತಿಳಿಸಿ, ಸ್ಥಳೀಯ ಆಹಾರ ಧಾನ್ಯಗಳಿಂದ ಮನೆಯಲ್ಲಿ ತಯಾರಿಸಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಕುಟುಂಬದ ಸದಸ್ಯರಿಗೆ ಉಣಬಡಿಸುವ ಬಗ್ಗೆ ಮನವರಿಕೆ ಮಾಡುವುದರ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು,

ಅದರಂತೆ ಪ್ರತಿದಿನವೂ ಏಕದಳ,ದ್ವಿದಳ, ಹಲವಾರು ಸೊಪ್ಪು, ತರಕಾರಿಗಳನ್ನು ಬಳಸಿಕೊಂಡು ಪೋಷಕಾಂಶಗಳು ನಷ್ಟ ವಾಗದ ರೀತಿಯಲ್ಲಿ ಜಾಣ್ಮೆಯಿಂದ ಆಹಾರ ತಯಾರಿಸುವುದು, ಹಾಲು, ಮೊಸರು, ತುಪ್ಪ,ಎಣ್ಣೆ,ಬೆಲ್ಲ, ಮೊಳಕೆ ಕಟ್ಟಿದಕಾಳು, ನುಗ್ಗೆಸೊಪ್ಪು, ಸಬಾಕ್ಷಿ ಸೊಪ್ಪುಗಳು ಬಳಸಿ ತಯಾರಿಸಿದ ಆಹಾರವನ್ನು, ಮತ್ತು ಮಾಂಸಾಹಾರಿಗಳು ‌ಮೊಟ್ಟೆ,ಮಾಂಸ, ಮೀನಿನ ಅಹಾರವನ್ನು ಚೆನ್ನಾಗಿ ಬೇಯಿಸಿ ಸೂಕ್ತ ಸಮಯದೊಳಗೆ ಸೇವನೆ ಮಾಡುವುದು ಮತ್ತು ಸ್ಥಳೀಯವಾಗಿ ದೊರೆಯುವ ಹಣ್ಣುಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ಮಹಿಳೆಯರು ಶ್ರಮವಹಿಸ ಬೇಕು ಎಂಬುದರ ಕುರಿತು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಶಾ ಕಾರ್ಯಕರ್ತೆ ತೇಜಮ್ಮ,ಮಂಜುಳಾ, ಗ್ರಾಮದ ಮಹಿಳೆಯರಾದ ಸರಸ್ವತಿ, ಜಯಲಕ್ಷ್ಮಿ, ಮಂಗಳಾ, ಕೈಸರ್ ಬಾನು, ರೇಹಾನಾ, ಅನಸೂಯಮ್ಮ,ಶಾರದಮ್ಮ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here