ಕುಷ್ಠರೋಗ ಪ್ರಕರಣಗಳ ಪತ್ತೆಹಚ್ಚುವ ಸಮೀಕ್ಷೆ ಯಶಸ್ವಿಗೊಳಿಸಿ; ಡಾ. ನವೀನ್ ಕುಮಾರ್

0
532

ಸಂಡೂರು:ಸೆ: 06:-ಕುಷ್ಠರೋಗ ಪ್ರಕರಣಗಳ ಪತ್ತೆಹಚ್ಚುವ ಸಮೀಕ್ಷೆ ಯಶಸ್ವಿಗೊಳಿಸಿ ಎಂದು ಡಾ.ನವೀನ್ ಕುಮಾರ್ ತಿಳಿಸಿದರು
ಅವರು ತಾಲೂಕಿನ ವಿಠಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನವೀನ್ ಕುಮಾರ್ ಮಾತನಾಡಿ ಇದೇ ತಿಂಗಳು 12 ರಿಂದ 29 ರ ವರೆಗೆ ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚುವ ಸಮೀಕ್ಷೆ ನಡೆಯಲಿದೆ, ಎಲ್ಲಾ ಆಶಾ ಕಾರ್ಯಕರ್ತೆಯರು ಮನೆಮನೆಗಳಿಗೆ ಭೇಟಿ ನೀಡಿ ಪ್ರತಿಯೊಂದು ವ್ಯಕ್ತಿಗಳನ್ನು ತಪಾಸಣೆ ಮಾಡಲಿದ್ದಾರೆ, ಅವರಿಗೆ ಬೆಂಬಲ ಮೇಲ್ವಿಚಾರಣೆಯನ್ನು ಸಿಬ್ಬಂದಿಯವರು ಮಾಡಬೇಕಿದೆ, ಚರ್ಮದ ಮೇಲೆ ಯಾವುದಾದರೂ ತಿಳಿಬಿಳಿ ತಾಮ್ರ ವರ್ಣ ಅಥವಾ ಯಾವುದೇ ರೀತಿಯ ಮಚ್ಚೆಗಳು ಕಂಡು ಬಂದರೆ,ಕೈಕಾಲುಗಳಲ್ಲಿ ಜೋಮು, ಕಣ್ಣು ರೆಪ್ಪೆ ಮುಚ್ಚಲು ಸಾಧ್ಯವಾಗದಿದ್ದರೆ, ಮೂಗು,ಕಿವಿಯ ಮೇಲೆ ಹೊಳಪು ಇರುವ ಚರ್ಮ, ದೀರ್ಘಕಾಲದ ಗಾಯಗಳು, ಬಿಸಿಯ ಶಾಖ ಗೊತ್ತಾಗದಿದ್ದರೆ, ಮುಳ್ಳು, ಬೆಂಕಿ ತುಳಿದರೂ ಗೊತ್ತಾಗದಿದ್ದರೆ, ಮತ್ತು ಅಲ್ನಾರ್ ನರಗಳು ಗಡಸುತನ ಹೊಂದಿರುವಂತ ಸಂಶಯಾಸ್ಪದ ಲಕ್ಷಣಗಳು ಇದ್ದವರನ್ನು ಪತ್ತೆಹಚ್ಚಿ ಹೆಸರು ಮತ್ತು ಮೊಬೈಲ್ ನಂಬರ್ ದಾಖಲೆ ಮಾಡಿಕೊಳ್ಳಬೇಕು, ಹಾಗೆ ಅಂತಹ ಸಂಶಯಾಸ್ಪದ ರೋಗಿಗಳನ್ನು ಮೇಲ್ವಿಚಾರಕರು ಒಮ್ಮೆ ಸ್ಥಳದಲ್ಲಿಯೇ ಪರೀಕ್ಷೆ ಮಾಡಿ ನಂತರ ಆರೋಗ್ಯ ಕೇಂದ್ರಕ್ಕೆ ಕಳಿಸಿಕೊಡಬೇಕು, ನಂತರ ದೃಡಪಟ್ಟರೆ ಆರು ತಿಂಗಳಿಂದ ಒಂದು ವರ್ಷ ಸೂಕ್ತ ಎಮ್.ಡಿ.ಟಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು,

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮಾತನಾಡಿ ಭಾರತ ದೇಶವನ್ನು ಕುಷ್ಠರೋಗ ಮುಕ್ತ ಮಾಡುವ ಹಾದಿಯಲ್ಲಿ ಆರೋಗ್ಯ ಇಲಾಖೆ ಇದೆ, ಈ ರೀತಿಯ ಸಮೀಕ್ಷೆಗಳಿಂದ ಅಲ್ಲೊಂದು ಇಲ್ಲೊಂದು ಕಂಡು ಬರುವ ಕುಷ್ಠರೋಗಿಗಳಿಂದ ಇತರರಿಗೆ ಹರಡಿರುವ ಸಂಭವವಿರುತ್ತದೆ, ಅಂತವರನ್ನು ಬೇಗನೆ ಪತ್ತೆ ಹಚ್ಚಲು ಈ ಸಮೀಕ್ಷೆ ಅನುಕೂಲವಾಗುತ್ತದೆ, ಮತ್ತು ಕುಷ್ಠರೋಗ ಮುಕ್ತ ರಾಷ್ಟ್ರ ಮಾಡುವ ಮಹಾತ್ಮ ಗಾಂಧಿಜಿಯವರ ಕನಸು ನನಸು ಮಾಡಲು ಸರ್ವರೂ ಕೈಜೋಡಿಸಬೇಕಿದೆ, ಎಲ್ಲರೂ ಸಮೀಕ್ಷೆಯನ್ನು ಯಶಸ್ವಿಗೊಳಿಸೋಣ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಡಾ.ನವೀನ್ ಕುಮಾರ್, ಆಯುಷ್ ವೈದ್ಯಾಧಿಕಾರಿ ಡಾ. ಸಾಯಿರಾಂ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಹೇಶ್, ಅನಿಲ್ ಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಮರಿಬಸವನ ಗೌಡ, ಗೌರಮ್ಮ, ನಾಗವೇಣಿ, ಮಂಜುಳಾ, ಸತ್ಯವ್ವ, ವೀರಬಸಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಲೋಕಿನಾಯ್ಕ, ಎರ್ರಿಸ್ವಾಮಿ, ರೇಣುಕಾ, ಆಶಾ ಫೆಸಿಲಿಟೇಟರ್ ಈರಮ್ಮ, ನವೀನ್, ಅಂಜನಪ್ಪ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here