ಬಗರ್ ಹುಕುಂ ಸಭೆ ನಡೆಸದಿದ್ದರೆ ಜ.28ರಂದು ಮುಷ್ಕರ

0
111

ಸಂಡೂರು:ಜ:24: ತಾಲೂಕಿನಲ್ಲಿ ಬಗರ್ ಹುಕುಂ ಸಮಿತಿ ರಚನೆಯಾಗಿ 2 ವರ್ಷ ಕಳೆದರು ಪ್ರಯೋಜನವಾಗಿಲ್ಲ, ಸಂಡೂರು ತಹಶೀಲ್ದಾರ್ ರನ್ನು ನಾವುಗಳು ಸಮಿತಿಯ ಸಭೆಯನ್ನು ಕರೆಯಲು ಮನವಿ ಮಾಡಿಕೊಂಡಾಗ ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾದ ಶಾಸಕ ಈ. ತುಕಾರಾಂ ಸಭೆ ಕರೆಯಲು ದಿನಾಂಕವನ್ನು ನೀಡಬೇಕಾಗಿದೆ ಎಂದು ಶಾಸಕರನ್ನು ಕೇಳಿದಾಗ ತಹಶೀಲ್ದಾರ್ ರರು ಸಭೆಯ ದಿನಾಂಕವನ್ನು ನಿಗದಿ ಮಾಡಬೇಕೆಂದು ಒಬ್ಬರಿಗೊಬ್ಬರು ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತ ಕುಂಟುನೆಪ ಹೇಳುತ್ತಿದ್ದಾರೆ.

ಸಂಡೂರು,ಚೋರನೂರು,ತೋರಣಗಲ್ಲು ಹೋಬಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಸರ್ವೆಯರ್ ಈ ಮೂವರು ಸಾಗುವಳಿ ಮಾಡುತ್ತಿರುವ ರೈತರ ಹೊಲಗಳಿಗೆ ಹೋಗಿ ಸರ್ವೆ ಮಾಡಿ ವರದಿ ನೀಡಬೇಕಾಗಿದೆ.ಪ್ರತಿಯೊಂದು ಹೋಬಳಿಯಲ್ಲೂ ಟೀಂ ಮಾಡಿ ಎಂದರೂ ಮಾಡಿಲ್ಲ, ಈ ತಿಂಗಳ 28ರ ಒಳಗಾಗಿ ಪ್ರತಿ ಹೋಬಳಿಯಲ್ಲಿ ಟೀಂ ಮಾಡಿ ವರದಿ ನೀಡದಿದ್ದರೆ ದಿ.28ರಂದು ತಾಲೂಕು ದಂಡಾಧಿಕಾರಿಗಳರವರ ಕಚೇರಿಯ ಮುಂದೆ ಅನಿರ್ದಿಷ್ಠ ಮುಷ್ಕರವನ್ನು ಪ್ರಾರಂಭಿಸಲಾಗುವುದು ಎಂದು ಬಗರ್ ಹುಕುಂ ಸಮಿತಿಯ ಸದಸ್ಯರಾದ ವಿ.ಎಸ್. ಶಂಕರ್ ತಿಳಿಸಿದರು.

ಸಂಡೂರಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಾಲೂಕು ಕಛೇರಿ ಮುಂದೆ ನಡೆಸುವ ಧರಣಿ ಕೋವಿಡ್-19 ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಕಾನೂನಿಗೆ ತೊಡಕಾಗಬಾರದು ಎನ್ನುವ ಉದ್ದೇಶದಿಂದ ಬಗರ್ ಹುಕುಂ ಸದಸ್ಯರಾದ ಸಿದ್ದನ ಗೌಡ,ವಿಜಯಲಕ್ಷ್ಮಿ,ಹಾಗೂ ಭೂ ನ್ಯಾಯ ಮಂಡಳಿ ಸದಸ್ಯರಾದ ಕಾಲಿಂಗೇರಿ ದೇವೇಂದ್ರಪ್ಪ,ಅವರುಗಳೊಂದಿಗೆ ದರಣಿಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಅಕ್ರಮ ಸಕ್ರಮದ ಅಡಿಯಲ್ಲಿ 18 -19ನೇ ಸಾಲಿನಲ್ಲಿ 57ರ ಪಾರಂ ಅರ್ಜಿ ಪ್ರಕಾರ 10 ಸಾವಿರ ರೈತರು ಅರ್ಜಿಗಳನ್ನು ಸಲ್ಲಿಸಿದ್ದು, ರೈತರು ಸರ್ಕಾರದ ಆದೇಶದ ಪ್ರಕಾರ ಸಾಗುವಳಿ ಮಾಡುತ್ತಿರುವ ಅಕ್ರಮಸಕ್ರಮ ಸಮಿತಿ ರಚನೆಯಾಗಿ 2 ವರ್ಷ ಕಳೆದರೂ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಫಲರಾಗಿದ್ದಾರೆ, 3 ವರ್ಷವಾದರೂ ಬಡ ಕುಟುಂಬಸ್ಥರು ಸಾಗುವಳಿ ಮಾಡುತ್ತಿರುವ ಜಮೀನಿನ ವರದಿಯನ್ನು ಯಾವ ರೈತರು ಮಾಡಿರುವುದಿಲ್ಲ ,ಸಂಡೂರು ಚೋರನೂರು, ತೋರಣಗಲ್ಲು, 3 ಹೋಬಳಿಯಲ್ಲಿ ಸರ್ವೆರನ್ನು ನೇಮಕ ಮಾಡಬೇಕಾಗಿದ್ದು ಪ್ರತಿ 10 ಜನ ರೈತರ ವರದಿಯನ್ನು ತಯಾರು ಮಾಡಿರುತ್ತಾರೆ ತೋರಣಗಲ್ಲು ಹೋಬಳಿ, ಸಂಡೂರು ಹೋಬಳಿ ಯಾವುದೇ ವರದಿಯನ್ನು ಮಾಡಲಿಕ್ಕೆ ಟೀಂ ಮಾಡಿರುವುದಿಲ್ಲ ಎಂದು ಶಂಕರ್ ತಿಳಿಸಿದರು

ಟಿ.ಪಿ.ಸಿದ್ದನಗೌಡ 14 ಹಳ್ಳಿಗಳ ಸರ್ವೆಯಾಗಿದೆ ಸೇಟ್ಲಮೆಂಟ್ ಆಗಿಲ್ಲ, ಅದರಲ್ಲಿ ತಿಪ್ಪನಮರಡಿ ಗ್ರಾಮವು ಕೂಡ ಸೇರಿದ್ದು ಆದಷ್ಟು ಬೇಗನೆ ಸಮಿತಿ ರಚನೆ ಮಾಡಲು ಹೇಳಿದರು, ಹಾಗೇ ಬಗರ್ ಹುಕುಂ ಸದಸ್ಯೆ ವಿಜಯಲಕ್ಷ್ಮಿ ಮಾತನಾಡಿ ಗ್ರಾಮಗಳ ರೈತರು ಅರ್ಜಿ ಸಲ್ಲಿಸಲು ತಾಲೂಕು ಕಚೇರಿಗೆ ಬರುತ್ತಿದ್ದು, ಇಲ್ಲಿಗೆ ಬಂದು ಮಾಹಿತಿಯಿಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಕಾಲ ವಿಳಂಭಮಾಡದೆ ಇತ್ಯರ್ಥ ಪಡಿಸಬೇಕೆಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here