ದೋಣಿಮಲೈ ಪ್ರಾದೇಶಿಕ ಪ್ರಸಾರ ವಾಹಿನಿ ಮರುಪ್ರಸಾರ ಸ್ಥಗಿತ

0
104

ಬಳ್ಳಾರಿ,ಆ.02: ಪ್ರಸಾರ ಭಾರತಿಯ ನಿರ್ಧಾರದ ಮೇರೆಗೆ ಜಿಲ್ಲೆಯ ಸಂಡೂರು ಹತ್ತಿರದ ದೋಣಿಮಲೈ ಎಚ್.ಟಿಯ ದೂರದರ್ಶನ ಲಘುಶಕ್ತಿ ಮರುಪ್ರಸಾರ ಕೇಂದ್ರದ ಮುಖಾಂತರ ಪ್ರಸಾರವಾಗುತ್ತಿರುವ ಮರುಪ್ರಸಾರ ಆ.31ರಿಂದ ಸ್ಥಗಿತಗೊಳಿಸಲಾಗುತ್ತಿದೆ.

ಕೇಂದ್ರ ಸರಕಾರದ ಪ್ರಸಾರ ಭಾರತಿ ನಿರ್ಧಾರದ ಮೇರೆಗೆ ಕರ್ನಾಟಕ ರಾಜ್ಯದ ಚಾನಲ್ ನಂ-6ರಲ್ಲಿ ತರಂಗ/ಫ್ರಿಕ್ವೆನ್ಸಿಯಲ್ಲಿ ಮರುಪ್ರಸಾರವಾಗುವ ದೂರದರ್ಶನ ಪ್ರಾದೇಶಿಕ ಪ್ರಸಾರ(ಚಂದನ ಡಿಡಿ-9)ರ ಸೇವೆಯನ್ನು ಇದೇ ತಿಂಗಳ ಆ.31ರಿಂದ ಸಂಪೂರ್ಣ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಆದ ಕಾರಣ ಸಾರ್ವಜನಿಕರು ರಾಷ್ಟ್ರೀಯ/ಪ್ರಾದೇಶಿಕ ಪ್ರಸಾರಗಳನ್ನು ದೂರದರ್ಶನ ಡಿಡಿ ಡೈರಕ್ಟ್ ಪ್ಲಸ್,ಡಿಟಿಎಚ್‌ನಲ್ಲಿ ಪ್ರಸಾರ ಆಗುತ್ತಿರುವುದರಿಂದ ಎಲ್ಲ ವೀಕ್ಷಕರು ಈ ಚಾನಲ್(ಡಿಡಿ ಡೈರೆಕ್ಟ್ ಪ್ಲಸ್)ನಲ್ಲಿ ವೀಕ್ಷಿಸಬಹುದು ಎಂದು ಸಂಡೂರು(ದೋಣಿಮಲೈ) ದೂರದರ್ಶನ ಮರುಪ್ರಸಾರ ಕೇಂದ್ರದ ಸಹಾಯಕ ಎಂಜಿನಿಯರ್ ವಿಜಯ್ ತನ್ನಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here