ಇರುಳುಗಣ್ಣು ಹಾಗೂ ಕುರುಡು ತಪ್ಪಿಸಲು “ಎ” ಅನ್ನಾಂಗ ಕೊಡಿಸಿ; ಶಿವಪ್ಪ

0
280

ಸಂಡೂರು:ಡಿ: 18: ಡಿಸೆಂಬರ್ 17 ರಿಂದ 31 ರವರಗೆ ನಡೆಯುವ “ಎ” ಅನ್ನಾಂಗ ಪೂರಕ ಕಾರ್ಯಕ್ರಮಕ್ಕೆ ತಾಲೂಕಿನ ಹಳೆ ದರೋಜಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ “ಎ” ಅನ್ನಾಂಗ ಪೂರಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಇಂದಿನಿಂದ 31 ರ ವರೆಗೆ 15 ತಿಂಗಳಿಂದ 60 ತಿಂಗಳವರೆಗಿನ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆಯಂತೆ “ಎ” ಅನ್ನಾಂಗ ನೀಡಲಾಗುತ್ತಿದ್ದು, ಮಕ್ಕಳಿಗೆ ಇರುಳುಗಣ್ಣು ಅಥವಾ ರಾತ್ರಿ ಕುರುಡು ತಪ್ಪಿಸಲು ಕಡ್ಡಾಯವಾಗಿ ಎ ಅನ್ನಾಂಗ ಕೊಡಿಸಬೇಕು, ಹಾಗೆ ಡ್ರೈ ಕಣ್ಣಿನ ತೊಂದರೆ, ಗಂಟಲಿನ ಸೋಂಕು, ಡ್ರೈಸ್ಕಿನ್ ನಂತಹ ತೊಂದರೆಗಳನ್ನು ನಿವಾರಣೆ ಮಾಡುವುದರೊಂದಿಗೆ ದೃಷ್ಟಿಯನ್ನು ಸಂರಕ್ಷಣೆ ಮಾಡಲು ಎ ಅನ್ನಾಂಗ ತುಂಬ ಸಹಕಾರಿಯಾಗಿದೆ, ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಐದು ವರ್ಷ ತುಂಬುವುದರೊಳಗೆ ಒಟ್ಟು ಒಂಬತ್ತು ಡೋಸ್ ಎ ಅನ್ನಾಂಗ ನೀಡಲಾಗುತ್ತಿದೆ, ಈ ಸುತ್ತಿನಲ್ಲಿ ಕಡ್ಡಾಯವಾಗಿ ಕೊಡಿಸಬೇಕು, ಇದರೊಂದಿಗೆ “ಎ” ಅನ್ನಾಂಗ ಅಥವಾ ವಿಟಮಿನ್ “ಎ” ಹೇರಳವಾಗಿ ದೊರೆಯುವ ಆಹಾರ ಪದಾರ್ಥಗಳಾದ ಕಡು ಹಸಿರು ಬಣ್ಣದ ಸೊಪ್ಪುಗಳು, ಕ್ಯಾರೆಟ್ ನಂತಹ ತರಕಾರಿ ಮತ್ತು ಹಳದಿ ಬಣ್ಣದ ಆರೇಂಜ್, ಪಪ್ಪಾಯಿಯಂತಹ ಹಣ್ಣುಗಳು, ಹಾಲು, ಮೊಟ್ಟೆ, ಮೀನಿನ ಲಿವರ್ ಆಯಿಲ್ ಗಳನ್ನು ತಿನ್ನುವುದರೊಂದಿ “ಎ” ಅನ್ನಾಂಗದಿಂದ ಉಂಟಾಗುವ ನ್ಯೂನತೆಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಪುಷ್ಪವತಿ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಶಾ ಪೆಸಿಲಿಟೇಟರ್ ಈರಮ್ಮ, ಆಶಾ ಕಾರ್ಯಕರ್ತೆ ಮಾಂತಮ್ಮ, ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ ಹೊನ್ನೂರುಭಿ, ಮಕ್ಕಳ ತಾಯಂದಿರಾದ ಗೀತಾ, ಜಮುನಾ, ಅನ್ನಪೂರ್ಣ, ಶಿವಲಿಂಗಮ್ಮ, ಸಾವಿತ್ರಮ್ಮ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here