ಸಂಗಮೇಶ್ವರ ಗ್ರಾಮದಲ್ಲಿ ಮಳೆಯಿಂದ ಹಾನಿ!

0
631

ಕೊಟ್ಟೂರು ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಂದ ಬೆಳಗಿನವರೆಗೂ ಸುರಿದ ಧಾರಾಕಾರ ಮಳೆಯಿಂದ ಸಂಗಮೇಶ್ವರ ಗ್ರಾಮದ ಹಳ್ಳ ತುಂಬಿ ಹರಿದಿದ್ದು ಗ್ರಾಮದಲ್ಲೆಲ್ಲಾ ನೀರು ಆವರಿಸಿಕೊಂಡಿದೆ. ಮಳೆಯ ನೀರಿಗೆ ಆಸ್ತಿ-ಪಾಸ್ತಿಗಳು ನೀರು ಪಾಲಾಗಿವೆ. ಐದಾರು ಮನೆಗಳು ಕುಸಿದಿದ್ದು, ಹೋಟೆಲ್, ಅಂಗಡಿಗಳ ತುಂಬೆಲ್ಲ ನೀರು ನಿಂತು ಜನರು ಓಡಾಡದಂತಹ ಪರಿಸ್ಥಿತಿ ಎದುರಾಗಿದೆ. ಬೆಳಗಿನ ಜಾವ ೫-೭ ರವರೆಗೆ ಸುರಿದ ಧಾರಾಕಾರ ಮಳೆಯೇ ಇದಕ್ಕೆಲ್ಲ ಕಾರಣವಾಗಿದೆ. ಗ್ರಾಮದ ಜನರು ಮಳೆಯ ನೀರಿಗೆ ಬೇಸತ್ತು ಹೀಗೇ ಮಳೆ ಸುರಿದರೆ ಗ್ರಾಮದಲ್ಲಿರುವ ಮನೆಗಳೆಲ್ಲ ನೆಲಸಮವಾಗುವುದಂತೂ ಖಂಡಿತ ಎಂದು ತಮ್ಮ ತಳಮಳವನ್ನು ವ್ಯಕ್ತಪಡಿಸಿದರು. ಈ ಕೂಡಲೇ ತಾಲ್ಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ,ನಾಗಮ್ಮ ಬಿ.ಗಂಗಮ್ಮ ಟಿ.ಬೆಣ್ಣಿಹಳ್ಳಿಕೆಂಚ್ಚಪ್ಪ.ಜಿ ಪರಮೇಶಿ.ಬಸವನಗೌಡ ಬಿ. ಬಾಗಳಿ ಸಂಕಪ್ಪ.ಬಿ ಕೆಂಚಮ್ಮ. ನಷ್ಟವಾಗಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುಮಾರು 15ರಿಂದ 20 ಮನೆಗಳು ಹಾನಿ ಯಾಗಿದ್ದು ಐದು ಮನೆಯ ಗೋಡೆಗಳು ಬಿದ್ದಿವೆ. ಆರು ಗಂಟೆ ನೀರಿನಿಂದ ಜಲ ವೃತ್ತ ಗೊಂಡಿದೆ. ಹಗರಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸಬೇಕು. ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಕೊಡುಬೇಕು -ಎಲ್ ಮಂಜುನಾಥ್

LEAVE A REPLY

Please enter your comment!
Please enter your name here