ಬಸವಣ್ಣ ಕಾಲುವೆ,: ನಗರಸಭೆ ನಿರ್ಲಕ್ಷ ಕೊಳಕು ನಾರುತ್ತಾ ನಿಂತ ನೀರು,

0
28

ಹೊಸಪೇಟೆ (ವಿಜಯ ನಗರ ) ಏಪ್ರಿಲ್.23 : ನಗರದ ಕೊಳಚೆ ನೀರನ್ನು ತೆರೆದ ಚರಂಡಿಗಳ ಮೂಲಕ ಬಸವಣ್ಣ ಕೆನಾಲ್ ಗೆ ಹರಿ ಬಿಡಲಾಗುತ್ತಿದೆ. ನಗರಸಭೆಯಿಂದ ಕಸ ತ್ಯಾಜ್ಯಗಳ ಸಂಗ್ರಹ ಘಟಕಗಳನ್ನು ಪ್ರಾರಂಭಿಸಿ ಕೆಲವು ದಿನಗಳಲ್ಲಿ ಮುಚ್ಚಲಾಯಿತು. ತೆರಿಗೆ ಹಣ ಪೋಲು ಕೆಲವು ವ್ಯಾಪಾರಿಗಳು ಅವೈಜ್ಞಾನಿಕವಾಗಿ ಕಸವನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಾರೆ.ಈ ಕಸವು ಮತ್ತೆ ಗಾಳಿಯಲ್ಲಿ ಹರಿದು ಬಂದು ನೀರಿನೊಳಗೆ ಸೇರಿ ಮಲಿನವಾಗುತ್ತದೆ.
ತುಂಗಭದ್ರಾ ನದಿಯಿಂದ
17 ಕಿ.ಮೀ ಉದ್ದ 3,000 ಸಾವಿರಕ್ಕೂ ಹೆಚ್ಚು ಎಕರೆ ಹೊಲ ಗದ್ದೆಗಳಿಗೆ ನೀರು ಹರಿಯುವ ಬಸವಣ್ಣ ಕೆನೆಲ್ ಗೆ 3 ತಿಂಗಳಿಂದ ಕಾಮಗಾರಿ ಮತ್ತು ಬರಗಾಲ ಹಿನ್ನೆಲೆಯಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ
ಮನೆಗಳ ಚರಂಡಿ ನೀರು ಕಾಲುವೆಗೆ ಬಂದು ಸೇರುತ್ತದೆ. ಸಾರ್ವಜನಿಕರು ಕಸವನ್ನು ದಿನ ನಿತ್ಯದ ತಂದು ಸುರಿದಿದ್ದರಿಂದ ಕಾಲುವೆ ಅಶುದ್ಧವಾಗಿದ್ದು. ನಗರದ ಚರಂಡಿಗಳನ್ನು ಸಕಾಲದಲ್ಲಿ ಸ್ವಚ್ಛಗೊಳಿಸದೇ ಇರುವುದರಿಂದ ದುರ್ವಾಸನೆ ಬೀರುತ್ತಿದೆ ಕೂಡಲೇ ಸ್ವಚ್ಛಗೊಳಿಸುವಂತೆ ನಗರದ ನಾಗರಿಕರು ಆಗ್ರಹಿಸಿದ್ದಾರೆ ನಗರಸಭೆಯಿಂದ ಕಾಲಕಾಲಕ್ಕೆ ಬಂದು ಚರಂಡಿಗಳನ್ನು ಸ್ವಚ್ಛಗೊಳಿಸುವುದಿಲ್ಲ ಇದರಿಂದ ಚರಂಡಿಗಳು ತುಂಬಿ ಕೊಂಡು ಗಬ್ಬು ವಾಸನೆ ಬರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬಾರಿ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರು. ಸಣ್ಣ ಕಾಲುವೆಯಲ್ಲಿ ಕಸ ತುಂಬಿಕೊಂಡು ಧ್ರುವಸನೆ ಬೀರುತ್ತಿದ್ದು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ ಆದ್ದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು ಇದರಿಂದ ಆಗುವ ಅನಾಹುತಕ್ಕೆ ಯಾರು ಹೊಣೆ?ಸಾರ್ವಜನಿಕರ ಜನರಿಂದ ಮತ ಪಡೆದ ಚುನಾಯಿತ ಪ್ರತಿನಿಧಿಗಳು ಕೂಡ ನಗರದ ಸ್ವಚ್ಛತೆ ಹಾಗೂ ವಾರ್ಡುಗಳ ಸ್ವಚ್ಛತೆ ಬಗ್ಗೆ ಗಮನ ಹರಿಸದಿರುವುದು ಜನರ ಸಮಸ್ಯೆಗಳನ್ನು ನಿವಾರಣೆಗೆ ಈ ಜನಪ್ರತಿನಿಧಿಗಳು ಮುಂದಾಗದಿರುವುದು ಬೇಸರ ಮೂಡಿಸುತ್ತದೆ ಸ್ಥಳೀಯರ ಆರೋಪವಾಗಿದೆ.ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸ್ವಚ್ಛತೆ ಆದ್ಯತೆ ಕೊಟ್ಟು ರೈತರ ಭೂಮಿಯ ಫಲವತ್ತತೆಗೆ ದಕ್ಕೆ ಬರೆದ ಹಾಗೆ.ಕೂಡಲೇ ನಗರ ಸಭೆ ಮುಂದಾಗಬೇಕು. ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಇರುವುದು ಶೋಚನೀಯ ಸಂಗತಿ ನಗರವಾಸಿಗಳಿಗೆ ಗಬ್ಬುನಾತ ವಾಸನೆಯಿಂದ ತೊಂದರೆಯಾಗುವುದನ್ನು ತಪ್ಪಿಸಬೇಕೆಂದು ಸಾರ್ವಜನಿಕರ ಅಳಲು .

ನಗರಸಭೆ ಪೌರಾಯುಕ್ತರು ವಾರ್ಡಗಳಲ್ಲಿ ಸಂಚರಿಸಿ ಜನರ ಸಮಸ್ಯೆಯನ್ನು ಆಲಿಸಬೇಕು ಅಂದಾಗ ಮಾತ್ರ ನಗರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುವುದು ಎಂಬುದು ಜನರ ಅಭಿಪ್ರಾಯವಾಗಿದೆ. ಕೂಡಲೇ ನಗರಸಭೆಯ ಆರೋಗ್ಯ ಇಲಾಖೆಯಿಂದ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳಬೇಕು ಸೊಳ್ಳೆಗಳು ಹೆಚ್ಚಾಗಿ ರೋಗ ಬರುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.

■ಹೊಸಪೇಟೆಯ ಮಧ್ಯಭಾಗದಲ್ಲಿ ಹರಿಯುವ ಬಸವಣ್ಣ ಕೆನಲ್ ಚರಂಡಿ ದುರ್ವಾಸನೆಯಿಂದ ಕೂಡಿದೆ ನಮಗೆ ಸ್ಟ್ಯಾಂಡ್ ಗೆ ಜಾಗ ಕೊಟ್ಟಿಲ್ಲ ಇಲ್ಲೇ ನಾವು ಇರುತ್ತೇವೆ. ನಮಗೆ ಇಲ್ಲಿ ಕೂರಲು ಆಗುತ್ತಿಲ್ಲ ಗಬ್ಬು ವಾಸನೆ ಬರುತ್ತಿದೆ.

—–ಶರೀಫ್ ಸಾಬ್
ಅಧ್ಯಕ್ಷರು
ಟಾಟಾ ಎಸಿ ಘಟಕ.
ಲಘು ವಾಹನ ಚಾಲಕರ ಸಂಘ.

■ನನ್ನ ಗಮನದಲ್ಲಿ ಈ ಎಲ್ಲಾ ವಿಷಯಗಳು ಇವೆ. ಒಳಚರಂಡಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಚುನಾವಣೆ ನಂತರ ಸರಿಪಡಿಸುತ್ತೇವೆ.

—–ಚಂದ್ರಪ್ಪ
ನಗರಸಭೆ ಪೌರಾಯುಕ್ತರು ವಿಜಯನಗರ ಜಿಲ್ಲೆ

LEAVE A REPLY

Please enter your comment!
Please enter your name here