ಉಜ್ಜಯಿನಿ ಪೀಠದ ಶ್ರೀಗಳಿಂದ -ಗಂಗಾ ಪೂಜೆ ಬಾಗಿನ ಅರ್ಪಣೆ ಕಾರ್ಯಕ್ರಮ

0
502

ಕೊಟ್ಟೂರು: ಉಜ್ಜಯಿನಿ ಪೀಠದ ಜಗದ್ಗುರುಗಳು ಶ್ರೀಗಳ ಇಂದು ಕೊಟ್ಟೂರು ಕೆರೆಗೆ ಗಂಗಾಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು ನೆರವೇರಿಸಿದ ನಂತರ ಮಾತನಾಡಿದ ಶ್ರೀಗಳು .

ಈ ಕೊಟ್ಟೂರಿನ ಕೆರೆಯು ಒಂದು ಐತಿಹಾಸಿಕ ಇತಿಹಾಸ ಹೊಂದಿದೆ ಕೆರೆಯಾಗಿದೆ ಈ ಪ್ರಕೃತಿಯ ಮಡಿಲಿನಲ್ಲಿ ನೀರಿನ ಮಹತ್ವ ಹಾಗೂ ಪ್ರತಿಯೊಂದು ಜೀವಿಗಳಿಗೂ ನೀರು ಬಹಳ ಮುಖ್ಯವಾದದ್ದು ಈ ಜಗತ್ತಿನ ಮೂಲ ಸೃಷ್ಟಿ ದಾತು ಎಂದರೆ ಅದು ಜಲ ಜಲದಿಂದಲೇ ಮೂಲ ಸೃಷ್ಟಿ ಆಯಿತು ಎಂದು ವೇದದಲ್ಲಿ ಉಲ್ಲೇಖಿಸಿದ್ದಾರೆ.

ಈ ಭೂ ಮಂಡಲದಲ್ಲಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದೆ ಆದರೆ ಮೂರು ಭಾಗ ಜಲವೇ ಇದೆ ಒಂದು ಭಾಗ ಮಾತ್ರ ಭೂಮಿ ಇದೆ 13 ವರ್ಷಗಳ ತರುವಾಯ ನಂತರ ನಮ್ಮ ಕೊಟ್ಟೂರು ಕೆರೆ ಕೋಡಿ ಬಿದ್ದಿದೆ ಕೆರೆ ತುಂಬಿ ರೈತ ವರ್ಗದ ಸಡಗರ ಸಂಭ್ರಮ ಮತ್ತು ಅಂತರ್ಜಲ ಹೆಚ್ಚಾಗುತ್ತದೆ ಸಕಲ ಜಲಚರ ಜೀವಿ ರಾಶಿಗಳು ಸಮೃದ್ಧಿ ಯಾಗಿ ಜೀವಿಸುತ್ತದೆ ಪ್ರತಿ ವರ್ಷ ಕೊಟ್ಟೂರಿನ ಕೆರೆಯು ತುಂಬಲಿ ಸಮೃದ್ಧಿ ಜೀವನ ಸಾಗಲಿ ಎಂದು ಶ್ರೀಗಳು ಹೇಳಿದರು .
ಈ ಗಂಗಾ ಪೂಜೆ ಮತ್ತು ಬಾಗಿನ ಸಮರ್ಪಥದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡೋನೂರು ಡಾಕ್ಟರ್ ಸಿದ್ದಲಿಂಗ ಶಿವಚಾರ ಸ್ವಾಮೀಜಿಗಳು ಕೀರ್ತಿ ಸಲ್ಲುತ್ತದೆ. ಮಹಾ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜ್ಯ ದೇಶ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಡೋನೂರು ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು, ಕೂಡ್ಲುಗಿಯ ಪ್ರಶಾಂತ್ ಶಿವಾಚಾರ್ಯಗಳು ,ನಂದಿಪುರದ ಮಹೇಶ್ವರ ಸ್ವಾಮೀಜಿಗಳು ,ಅಡಿವಿಹಳ್ಳಿಯ ಹಾಲಸ್ವಾಮಿ ಶ್ರೀಗಳು, ಜಿಲ್ಲಾ ಪಂ. ಮಾಜಿ ಸದಸ್ಯರಾದ ಎಂ.ಎಂ.ಜೆ .ಹರ್ಷವರ್ಧನ್, ಪ. ಪಂ. ಅಧ್ಯಕ್ಷರಾದ ಭಾರತೀಯ ಸುಧಾಕರ್ ಪಾಟೀಲ್, ಪ. ಪಂ. ಸದಸ್ಯರಗಳಾದ ವಿನಯ್ ಕುಮಾರ್, ತೆಗ್ಗಿನಕೇರಿ ಜಗದೀಶ್, ವಿದ್ಯಾಶ್ರೀ ಮೇಘರಾಜ್, ಹಾಗೂ ಅಡಿಕೆ ಮಂಜುನಾಥ , ಎ .ಸಂತೋಷ್ , ಮಂಗಳಮುಖಿಯರಾದ ರುದ್ರಮ್ಮ, ಹಾಗೂ ಕೊಟ್ಟೂರಿನ ಹಿರಿಯ ನಾಗರಿಕರು ರಾಮಲಿಂಗೇಶ್ವರ ದೇವಸ್ಥಾನದ ಪದಾಧಿಕಾರಿಗಳು ಸರ್ವರೂ ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here