ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ,

0
428

ಸಂಡೂರು ತಾಲೂಕಿನ ಎನ್.ಎಮ್.ಡಿ.ಸಿ ಯ ಸಿ.ಎಸ್.ಆರ್ ಅನುದಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಬಳ್ಳಾರಿ, ರಾಷ್ಟ್ರೀಯ ಅಂಧತ್ವ ನಿವಾರಣೆ ಕಾರ್ಯಕ್ರಮದ ಸಹಯೋಗದಲ್ಲಿ ಬಳ್ಳಾರಿ “ಅಂಧತ್ವ ಮುಕ್ತ ಜಿಲ್ಲೆ ಅಭಿಯಾನ”ದ ಉದ್ದೇಶದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು,

ಶಿಬಿರವನ್ನು ಉದ್ದೇಶಿಸಿ ತಾಲೂಕಿನ ನೇತ್ರಾಧಿಕಾರಿ ಈಶ್ವರಪ್ಪ ಮಾತನಾಡಿ ಪ್ರತಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮಟ್ಟದಲ್ಲಿ ಶಿಬಿರ ಆಯೋಜನೆ ಮಾಡಿ ನೇತ್ರ ತಪಾಸಣೆ ಮಾಡಲಾಗುತ್ತಿದೆ, ಶಿಬಿರದಲ್ಲಿ ಸಮೀಪ ದೃಷ್ಟಿ ದೋಷ ಉಳ್ಳವರಿಗೆ ಉಚಿತವಾಗಿ ಕನ್ನಡಕವನ್ನು ವಿತರಣೆ ಮಾಡಲಾಗುತ್ತಿದೆ, ಕ್ಯಾಟರೆಟ್ (ಕಣ್ಣಿನ ಪೊರೆ) ಬಂದವರಿಗೆ ತಾಲೂಕು ಮಟ್ಟದ ಶಿಬಿರದಲ್ಲಿ ಕ್ಯಾಟರೆಟ್ ಸರ್ಜರಿ ಮಾಡಲಾಗುತ್ತದೆ ಮತ್ತು ದೂರ ದೃಷ್ಟಿ ಉಳ್ಳವರಿಗೆ ನೊಂದಣಿ ಮಾಡಿಕೊಂಡು ನಿಗದಿತ ದಿನದಂದು ಸೂಕ್ತ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು,

ಇದೇ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ನೇತ್ರಾಧಿಕಾರಿಗಳ ಲಭ್ಯತೆ ಮೇರೆಗೆ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ ಮಾಡಲು ವಿಳಂಬವಾಗಿದೆ, ಮುಂದಿನ ದಿನಗಳಲ್ಲಿ ನಮ್ಮ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಶಿಬಿರ ಅಯೋಜಿಸಿ ಅಂಧತ್ವ ಮುಕ್ತ ಜಿಲ್ಲೆ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು,
ತೋರಣಗಲ್ಲು ಮತ್ತು ರೈಲ್ವೆ ನಿಲ್ದಾಣ ಶಿಬಿರದಲ್ಲಿ ಒಟ್ಟು 89 ಹಿರಿಯ ನಾರೀಕರ ತಪಾಸಣೆ ಮಾಡಲಾಯಿತು, 26 ಜನರಿಗೆ ಕನ್ನಡಕಗಳನ್ನು ವಿತರಣೆ ಮಾಡಲಾಯಿತು, ಕ್ಯಾಟರೆಟ್ ಸರ್ಜರಿಗೆ 21 ಜನರನ್ನು ನೊಂದಣಿ ಮಾಡಿಕೊಳ್ಳಲಾಗಿದೆ, ಹಾಗೆ ದೂರ ದೃಷ್ಟಿ ದೋಷ ಉಳ್ಳ ಇಬ್ಬರನ್ನು ನೊಂದಣಿ ಮಾಡಿಕೊಳ್ಳಲಾಗಿದೆ ಅವರಿಗೆ ಮುಂದಿನ ದಿನಗಳಲ್ಲಿ ಕನ್ನಡಕ ನೀಡಲಾಗುವುದು ಎಂದು ಮಾಹಿತಿ ನೀಡಿದರು,

ಈ ಸಂದರ್ಭದಲ್ಲಿ ಡಾ.ದಿಲೀಪ್ ಕುಮಾರ್, ನೇತ್ರಾಧಿಕಾರಿಗಳಾದ ಈಶ್ವರಪ್ಪ, ಮತ್ತು ಸಾಯಿನಾಥ್, ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಆಶಾ ಕಾರ್ಯಕರ್ತೆ ಕಾವೇರಿ, ವೆಂಕಟಲಕ್ಷ್ಮಿ,ಆಶಾ, ಹುಲಿಗೆಮ್ಮ, ರೇಖಾ, ಮಂಜುಳಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here