“ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ” ತರಬೇತಿ

0
533

ಸಂಡೂರು:ಪೆ:07:-ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ತಳ ಸಮುದಾಯದ ಮನೆ ಬಾಗಿಲಿಗೆ ಆರೋಗ್ಯ ಒದಗಿಸುವ ಮತ್ತು ಆರೋಗ್ಯ ವಂತ ಗ್ರಾಮ ನಿರ್ಮಾಣ ರೂಪಿಸಲು ಕೆ.ಹೆಚ್.ಪಿ.ಟಿ ಸಂಸ್ಥೆ, ಬೆಂಗಳೂರು, ಪಂಚಾಯತ್ ರಾಜ್ ವ್ಯವಸ್ಥೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮೊದಲನೇದಾಗಿ ಅಪೌಷ್ಟಿಕತೆ ಮುಕ್ತತೆ, ರಕ್ತಹೀನತೆ ಮುಕ್ತತೆ, ಮುಟ್ಟಿನ ಸ್ವಚ್ಛತೆ, ಕ್ಷಯ ಮುಕ್ತ ಗ್ರಾಮ ಪಂಚಾಯತ್, ಬಾಲ್ಯ ವಿವಾಹ ತಡೆ, ಮಕ್ಕಳು ಮತ್ತು ಮಹಿಳೆಯರ ಮೇಲೀನ ದೌರ್ಜನ್ಯ ತಡೆ, ಮಾನಸಿಕ ಆರೋಗ್ಯ, ಹಾಗೂ ಅಸಾಂಕ್ರಾಮಿಕ ರೋಗಗಳ ಪತ್ತೆ ಹಚ್ಚುವ ವಿಯಷಗಳ ಆಧಾರದ ಮೇಲೆ ಕ್ಲಿನಿಕ್ ಗಳನ್ನು ಆಯೋಜಿಸುವ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಹೇಶ್ವರಿ ಕಟ್ಟೆಪ್ಪ ಅವರು ಉದ್ಘಾಟಿಸಿ ಮಾತನಾಡಿ ಇದೊಂದು ಅತ್ಯುತ್ತಮವಾದ ಕಾರ್ಯಕ್ರಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು,
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಚೇತನಾಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಅವರು ಪಿ.ಪಿ.ಟಿ ಗಳ ಮೂಲಕ ನಡೆಸಿಕೊಟ್ಟರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿಲಾನ್ ಸಾಬ್, ಸದಸ್ಯರಾದ ಕೆ. ಮೌನೇಶ, ಬಾಷ, ಮುಖಂಡರಾದ ಕಟ್ಟೆಪ್ಪ, ಆಶಾ ಕಾರ್ಯಕರ್ತೆಯರಾದ ನೀಲಮ್ಮ, ಮೇಘನಾ,ಅನಸೂಯಾ, ಶಿವಲಿಂಗಮ್ಮ,ಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಸ್ವಾತಿ,ತಿಮ್ಮಕ್ಕ,ಮಲ್ಲಮ್ಮ, ಪ್ರತಿಭಾ,ಶಂಕ್ರಮ್ಮ,ಜಯಪ್ರದ, ರೀಡ್ಸ್ ಸಂಸ್ಥೆಯ ಯಲ್ಲಮ್ಮ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here