ಗೌರಿ ಹಬ್ಬಕ್ಕೆ ಬಣ್ಣದ ಸಕ್ಕರೆ ಆರತಿ ಸಜ್ಜು

0
208

ಕೊಟ್ಟೂರು: ಉತ್ತರ ಕರ್ನಾಟಕದಲ್ಲಿ ಗೌರಿ ಹಬ್ಬ ಬಂದರೆ ಸಾಕು ಹೆಣ್ಣು ಮಕ್ಕಳಿಗೆ ಸಂಭ್ರಮವೋ ಸಂಭ್ರಮ ಸೀಗಿ ಹುಣ್ಣಿಮೆಯಂದು ಸಣ್ಣ ಗೌರಿ ಹಬ್ಬ, ಗೌರಿ ಹುಣ್ಣಿಮೆಗೆ ದೊಡ್ಡ ಗೌರಿ ಹಬ್ಬವೆಂದು ಎರಡು ಬಾರಿ ಆಚರಿಸು ಇಲ್ಲಿನ ಪದ್ಧತಿ.

ಈ ಹಬ್ಬದ ವಿಶೇಷವೆಂದರೆ ರಂಗುರಂಗಿನ ಸಕ್ಕರೆ ಆರತಿಗಳು ಹೆಣ್ಣು ಮಕ್ಕಳು ಸಕ್ಕರೆ ಆರತಿ ತಟ್ಟೆಯಲ್ಲಿ ಇಟ್ಟುಕೊಂಡು ಗೌರಿಗೆ ಬೆಳಗುತ್ತಾರೆ. ಆರತಿ ಬೆಳಗಿದ ಹೆಣ್ಣು ಮಕ್ಕಳಿಗೆ ಸೋದರರು, ಮಾವಂದಿರು ಹಣ ಒಡವೆ ವಸ್ತ್ರವನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಹುಡುಗಿಯರು ಸೀರೆ ಉಟ್ಟುಕೊಂಡು ಗೌರಿ ಮಕ್ಕಳಾಗಿ ಊರಿನ ದ್ವಾರಬಾಗಿಲು ರಸ್ತೆಯಲ್ಲಿ ಬಣ್ಣದ ಕೋಲುಗಳೊಂದಿಗೆ ಗೌರಿ ಪದಗಳನ್ನು ಹಾಡುತ್ತ ಕುಣಿಯುತ್ತ ಗ್ರಾಮಕ್ಕೆ ಬಂದು ಹೋಗುವ ಪ್ರಯಾಣಿಕರನ್ನು ತಡೆಗಟ್ಟಿ ಅವರಿಂದ ಹಣವನ್ನು ಪಡೆಯುತ್ತಾರೆ.

ಕಟಿಗಳಿಂದ ನಿರ್ಮಿಸಿದ ಅಚ್ಚು ಪಡಿಗಳಲ್ಲಿ ಅದವಾದ ಸಕ್ಕರೆ ಪಾನಕ ಹಾಕುವುದರ ಮೂಲಕ ಆರತಿಗಳನ್ನು ತಯಾರು ಮಾಡುತ್ತಾರೆ. ವಿವಿಧ ರೀತಿಯ ಅಚ್ಚುಗಳಿಂದ ವೈವಿಧ್ಯಮಯ ಆಕಾರಗಳ ಬಣ್ಣ ಬಣ್ಣದ ಗೊಂಬೆಗಳನ್ನು ತಯಾರಿಸುತ್ತೇವೆ, ಎನ್ನುತ್ತಾರೆ ಮಾಂತೇಶ್.

ಹಬ್ಬಕ್ಕೆ ಎರಡು ಮೂರು ದಿನಗಳು ಇರುವಾಗಲೇ ಈ ಆರತಿಗಳನ್ನು ತಯಾರಿಸಲು ಆರಂಭಿಸುತ್ತೇವೆ. ಪ್ರತಿ ತಯಾರಕರು ಸುಮಾರು 20ರಿಂದ 30 ಕ್ವಿಂಟಲ್ ಸಕ್ಕರೆಯಿಂದ ಆರತಿ ತಯಾರಿಸುತ್ತೇವೆ. ಒಂದು ಕ್ವಿಂಟಲ್ ಗೆ ಸಕ್ಕರೆಗೆ 90 ಕೆಜಿ ಸಕ್ಕರೆ ಆರತಿಗಳಾಗುತ್ತಿದ್ದು.

ಒಂದು ಕೆಜಿ ಆರುತಿಗೆ 150ರಂತೆ ಮಾರುತ್ತೇವೆ ಸಕ್ಕರೆ ಬೆಲೆ ಹೆಚ್ಚಾಗಿರುವುದು ಇದರಿಂದ ಕಾರ್ಮಿಕರ ಅಭಾವದಿಂದ ಆರತಿಗಳ ಮೇಲೆ ಹೆಚ್ಚಾಗಿದೆ. ಎಂದು ತಿಳಿಸಿದರು.

ಗೌರಿ ಹುಣಿಮೆ ನಂತರ ಐದನೇ ದಿನ ಸಜ್ಜಿ ರೊಟ್ಟಿ ಪುಡಿ ಚಟ್ನಿ ಬುತ್ತಿ ಹಾಗೂ ಸಿ ತಿನಿಸುಗಳನ್ನು ತಯಾರಿಸಿ ಬೆಳದಿಂಗಳಿನಲ್ಲಿ ಮನೆಯ ಮಾಳಿಗೆಗಳ ಮೇಲೆ ಸಹ ಭೋಜನ ಮಾಡಲಾಗುತ್ತದೆ ಇದಕ್ಕೆ ಕುಂತಿ ರೊಟ್ಟಿ ಹಬ್ಬ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಹಬ್ಬದ ಆಚರಣೆ ಸಂಪನ್ನ ಗೊಳ್ಳುತ್ತದೆ.

ಗ್ರಾಮೀಣ ಪ್ರದೇಶದ ಇಂತಹ ಹಬ್ಬದ ಆಚರಣೆಗಳು ಕಾಲಕ್ರಮೇಣ ಕಣ್ಮರೆ ಯಾಗುತ್ತಿದೆ ಆಧುನಿಕತೆಗೆ ಮಾರು ಹೋಗುತ್ತಿರುವ ಈಗಿನ ಜನರೇಷನ್ ಮಕ್ಕಳು ಇಂಥ ಹಬ್ಬಗಳನ್ನು ಪರಿಚಯಿಸುವ ಮೂಲಕ ಮುಂದಿನ ಪೀಳಿಗೆಗಳಿಗೆ ಪರಿಚಯಿಸಬೇಕಿದೆ .

  • ಟಿ. ಮೈಲಾಪ್ಪ
    ಗ್ರಾಹಕ ಕೊಟ್ಟೂರು.

ಕಟ್ಟಿಗೆಗಳಿಂದ ನಿರ್ಮಿಸಿದ 10 ಪೆಂಡೆಗಳಿಂದ ಸಕ್ಕರೆ ಆರತಿ ತಯಾರಿಸುತ್ತೇವೆ ಕುಂಟಲ್ ಗೆ ಸಕ್ಕರೆ 90 ಕೆ.ಜಿ ಸಕ್ಕರೆ ಆರತಿ ಸಿದ್ದ ಮಾಡುತ್ತೇವೆ ಈ ಸಲ ಸಕ್ಕರೆ ಬೆಲೆ ಹೆಚ್ಚಳವಾದ ಕಾರಣ ಮಧ್ಯಮ ಕುಟುಂಬದ ವರ್ಗದವರೆಗೆ ಸ್ವಲ್ಪ ಅಭಾವ ವಾಗಿದೆ.

-ಮಹಾಂತೇಶ
ಸಕ್ಕರೆ ಆರತಿ ತಯಾರಕರು
ಕೊಟ್ಟೂರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here