ಬಳ್ಳಾರಿ ಕೋಟೆಗೆ ರೋಪ್ ವೇ: ಶಾಸಕ ಸೋಮಶೇಖರ ರೆಡ್ಡಿ,ಬಿ.ನಾಗೇಂದ್ರ ಅವರಿಂದ ಸ್ಥಳ ಪರಿಶೀಲನೆ

0
139

ಬಳ್ಳಾರಿ,ಜು.07 : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ಬಳ್ಳಾರಿ ಕೋಟೆಗೆ ರೋಪ್ ವೇ (ಕೇಬಲ್ ಕಾರ್) ನಿರ್ಮಾಣ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕರಾದ ನಾಗೇಂದ್ರ ಅವರು ನಗರದ ಕೋಟೆ ಮಲ್ಲೇಶ್ವರ ದೇವಾಲಯದ ಆವರಣಕ್ಕೆ ಭೇಟಿ ನೀಡಿ ರೋಪ್ ವೇ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳವನ್ನು ಬುಧವಾರ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಇದಕ್ಕೆ ಸಂಬಂಧಿಸಿದ ಅಗತ್ಯ ವಿವರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಭಾರತ ಪುರಾತತ್ವ ಇಲಾಖೆಯ ಹಂಪಿ ವಿಭಾಗದ ಅಧಿಕಾರಿಯಾದ ಕಾಳಿಮುತ್ತು ಹಾಗೂ ಪುರಾತತ್ವ ಇಲಾಖೆಯ ಸೋಮಲ್ ನಾಯ್ಕ್, ಇಂಜನಿಯರ್ ಪ್ರಶಾಂತ್‍ರೆಡ್ಡಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಪೂಜಾರ್, ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಕಾಶ್ ರಾವ್ ಹಾಗೂ ಬುಡಾ ಆಯುಕ್ತ ವೀರೇಂದ್ರ ಕುಂದಗೋಳ ಹಾಗೂ ಪ್ರಾಧಿಕಾರದ ಸಹಾಯಕ ಅಭಿಯಂತರರಾದ ರವಿಶಂಕರ್, ರಾಬಕೊ ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ ಮತ್ತು ಮಹಾನಗರ ಪಾಲಿಕೆಯ ಸದಸ್ಯರುಗಳಾದ ಗೋವಿಂದರಾಜುಲು, ಮಲ್ಲನಗೌಡ, ಜಗನ್ನಾಥ್ ಹಾಗೂ ಮುಖಂಡರುಗಳಾದ ಎ.ಸಂಜಯ್,ಕೃಷ್ಣಾರೆಡ್ಡಿ ಇತರರು ಇದ್ದರು.

LEAVE A REPLY

Please enter your comment!
Please enter your name here