ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ಶತಾಯಿಷಿ ಮತದಾರರಿಗೆ ಸನ್ಮಾನ

0
216

ಕೊಟ್ಟೂರು: ಅಕ್ಟೋಬರ್ 1 ರಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಆಚರಣೆ ಮಾಡಿ ಶತಾಯಿಷಿ ಮತದಾರರಿಗೆ ಸಂಬಂಧಪಟ್ಟ ಅಧಿಕಾರಿಗಳು ಗೌರವಯುತವಾಗಿ ಭಾನುವಾರ ದಂದು ಅಭಿನಂದಿಸುವ ಕಾರ್ಯ‌ ನಿರ್ವಹಿಸಿದರು.

ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರು ಆದೇಶದ ಮೇರೆಗೆ ಪಟ್ಟಣದ ಹಳ್ಳಿ ನಾಗಮ್ಮ, ಎಂ ಶಂಕ್ರಮ್ಮ, ಇವರನ್ನು ಸನ್ಮಾನಿಸಲಾಯಿತು.

ಅಕ್ಟೋಬರ್ 1 ರಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು .ಭಾರತ ಚುನಾವಣಾ ಆಯೋಗವು ಈ ಬಗ್ಗೆ ವಿಶೇಷವಾಗಿ ಆಚರಿಸಿ. ಈ ಸಂಬಂಧ 100+ ವರ್ಷ ಪೂರೈಸಿದ ಶತಾಯುಷಿ ಮತದಾರರ ಬಗ್ಗೆ ಪರಿಶೀಲಿಸಿ, ಅವರ ಹಿನ್ನೆಲೆ ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳು ಗೌರವಯುತವಾಗಿ ಅಭಿನಂದಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಎ ನಸರುಲ್ಲಾ  ಹಾಗೂ ತಾಲೂಕು ಸ್ತ್ರೀಪ್ ನೋಡಲ್ ಅಧಿಕಾರಿಗಳು  ಮೈದುರ್ ಶಶಿಧರ್, ಪಟ್ಟಣ ಪಂಚಾಯತಿ ಆರ್ ಐ ಕೊಟ್ರೇಶ್, ಪರಶುರಾಮ್ , ಮಂಜುನಾಥ್ , ವಿಜಯ್ ಕುಮಾರ್ ,ಸಿಬ್ಬಂದಿ ವರ್ಗ ಹಾಗೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here