ನ,9 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ-ಹಗರಿ ಬೊಮ್ಮನಹಳ್ಳಿ ತಹಶಿಲ್ದಾರ ವಿ.ಕಾರ್ತಿಕ್

0
207

ಹಗರಿಬೊಮ್ಮನಹಳ್ಳಿ, ನ,8
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2022ರ ಅನ್ವಯ ಇದೇ
ನವಂವರ್ 9 ರಂದು ಮತದಾರರ ಕರಡು ಪಟ್ಟಿ ಪ್ರಕಟಣೆಗೊಳ್ಳಲಿದೆ ಎಂದು ಹಗರಿಬೊಮ್ಮನಹಳ್ಳಿ ತಹಶಿಲ್ದಾರ ವಿ.ಕಾರ್ತೀಕ ರವರು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಡು ಪಟ್ಟಿಯನ್ನು ಪರೀಕ್ಷಿಸಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು, ತಿದ್ದುಪಡಿ ಮಾಡಲು, ಹೆಸರನ್ನು ತೆಗೆದುಹಾಕಲು ಅಥವಾ ವರ್ಗಾವಣೆ ಮಾಡಲು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳ(ಬಿಎಲ್ಓ) ಬಳಿ ಅವಶ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದೆಂದು ಪ್ರಕಟಣೆ ಮೂಲಕ ತಹಶೀಲ್ದಾರ ಕಾರ್ತೀಕ ಅವರು ನಾಗರೀಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನವಂಬರ್ 9 ರಿಂದ ಡಿಸೆಂಬರ್ 8, 2022ರ ತನಕ ಕಾಲವಧಿಯನ್ನು ನಿಗದಿಪಡಿಸಲಾಗಿದೆ. ಕಾಲ ಮಿತಿ ಒಳಗೇನೆ ನಾಗರೀಕರು ಪ್ರಯೋಜನಾ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ.

ಆಗೇನೆ ನವೆಂಬರ್ 12 ಹಾಗೂ 20, ಡಿಸೆಂಬರ್ 3 ಹಾಗೂ 4 ಈ ನಾಲ್ಕು ದಿನ ಮತದಾರರ ಪಟ್ಟಿಯ ವಿಶೇಷ ಅಭಿಯಾನ ನಡೆಸಲಾಗುವುದು. ಜನವರಿ 5, 2023 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದೆಂದು ತಹಶಿಲ್ದಾರ ಕಾರ್ತೀಕ ಅವರು ಮತದಾರರ ಕರಡು ಪಟ್ಟಿ ಪ್ರಕಟಣೆ ಯಿಂದ ಅಂತಿಮ ಪಟ್ಟಿ ಪ್ರಕಟಣೆ ತನಕದ ವಿವರಗಳನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here