ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣದಲ್ಲಿ ಶೀಘ್ರದಲ್ಲಿಯೇ ಪ್ಲಾಟ್ ಫಾರ್ಂ ಕಾಮಗಾರಿ ಆರಂಭ;ಸಂಸದ ವೈ.ದೇವೆಂದ್ರಪ್ಪ ಭರವಸೆ

0
468

ವಿಜಯಪುರ-ಯಶವಂತಪುರ ಪ್ರಯಾಣಿಕರ ರೈಲು ಓಡಾಟ ಪುನಾರಂಭಿಸುವ ಬಗ್ಗೆ , ಹೊಸಪೇಟೆ- ಹರಿಹರ ರೈಲಿಗೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಎರಡು ಲಿಂಕ್ ಬೋಗಿಗಳ ಜೋಡಣೆ ಕುರಿತಂತೆ ಅ..19 ರಂದು ಹುಬ್ಬಳ್ಳಿಯಲ್ಲಿ ಜರುಗುವ ಸಭೆಯಲ್ಲಿ ಪ್ರಸ್ತಾಪ.

ಹಗರಿಬೊಮ್ಮನಹಳ್ಳಿ, ಅ.11
ಹಗರಿಬೊಮ್ಮನಹಳ್ಳಿ ಪಟ್ಟಣದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪ್ಲಾಟ್ ಫಾರಂ ನಿರ್ಮಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಅತಿ ಶೀಘ್ರದಲ್ಲಿಯೆ ಕಾಮಗಾರಿ ಆರಂಭಕ್ಕೆ ಅನುಮೊದನೆ ಸಿಗಲಿದೆ ಎಂದು ನೈರುತ್ಯ ರೈಲ್ವೆ
ಇಲಾಖೆಯ ಮಹಾಪ್ರಬಂಧಕರು ತಿಳಿಸಿದ್ದು,
ಈ ಕಾಮಗಾರಿ ಆರಂಭದೊಂದಿಗೆ ಪ್ಲಾಟ್ ಫಾರಂ ಸಮಸ್ಯೆ ಶಾಶ್ವತ ಪರಿಹಾರವಾಗಲಿದೆ ಎಂದು ಬಳ್ಳಾರಿ ಲೋಕಸಭಾ ಸದಸ್ಯರಾದ ವೈ.ದೇವೆಂದ್ರಪ್ಪ ರವರು ಪಟ್ಟಣದ ಜನತೆಗೆ ಭರವಸೆ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದಲ್ಲಿ ತಾಲೂಕ ರೈಲ್ವೆ ಪ್ರಯಾಣಿಕರ ಹಿತಾರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿಯ ಮುಖಂಡರೊಟ್ಟಿಗೆ ನಡೆದ ” ಟೀ ಟೇಬಲ್ ಸಂವಾದದಲ್ಲಿ ” ಇಲ್ಲಿನ ರೈಲು ನಿಲ್ದಾಣದ ಅಭಿವೃದ್ಧಿ ಮತ್ತು ಹೆಚ್ಚಿನ ಪ್ರಯಾಣಿಕರ ರೈಲು ಗಾಡಿಗಳ ಸಂಚಾರದ ಸೌಲಭ್ಯ ಕಲ್ಪಿಸುವ ಕುರಿತಂತೆ ಸಂವಾದದಲ್ಲಿ ಸಮಿತಿಯ ಸದಸ್ಯರ ಮನವಿಗಳಿಗೆ ಸಂಸದರು ಉತ್ತರಿಸಿದರು.

ಹೊಸಪೇಟೆ ಯಿಂದ ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ನೇರ ರೈಲ್ವೆ ಸಂಪರ್ಕದ ಸೌಲಭ್ಯ ಕಲ್ಪಿಸಿದ ಬಳಿಕ ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಗಾಡಿಗಳ ಓಡಾಟ ಆರಂಭವಾಗಿದೆ. ಆದರೆ ಹಗರಿಬೊಮ್ಮನಹಳ್ಳಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಂ ಸೌಲಭ್ಯ ಇಲ್ಲ. ಹೀಗಾಗಿ ರೈಲು ಹತ್ತಿಳಿಯಲು ಎಲ್ಲ ವಯೋಮಾನದವರಿಗೆ ನಿತ್ಯ ತೊಂದರೆ ಆಗುತ್ತಿದೆ. ವಯಸ್ಸದವರ ಪರಿಸ್ಥಿತಿ ಕಷ್ಟಕರವಾಗಿದೆ. ಸ್ವತಃ ನನಗೇನೆ ಇದು ಅನುಭವಕ್ಕೆ ಬಂದಿದೆ ಎಂದರು.

ಈ ಸಂಬಂಧಿಸಿದಂತೆ ಆಧುನಿಕ ಪ್ಲಾಟ್ ಫಾರ್ಂ ನಿರ್ಮಿಸಲು ಈಗಾಗಲೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿರುವೆ. ಅತಿ ಶೀಘ್ರದಲ್ಲಿಯೇ ಸಲ್ಲಿಸಿರುವ ಕಾಮಗಾರಿಗೆ ಅನುಮೊದನೆ ಸಿಗಲಿದೆ ಎಂದು ನೈರುತ್ಯ ರೈಲ್ವೆಯ ಮಹಾಪ್ರಬಂಧಕರು ತಿಳಿಸಿದ್ದಾರೆಂದರು.

ರೈಲ್ವೆ ಹೋರಾಟಗಾರರ ಸತತ ಪ್ರಯತ್ನ ಮತ್ತು ನಮ್ಮ ಸರ್ಕಾರದ ಇಚ್ಚಾಶಕ್ತಿ ಯಿಂದಾಗಿ ಬಹು ದಿನಗಳಿಂದಲೂ ನೆನೆಗುದಿಗೆ ಬಿದಿದ್ದ ಈ ಮಾರ್ಗ 2019ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಯಾಣಿಕರ ರೈಲು ಗಾಡಿ ಓಡಾಟಕ್ಕೆ ಮುಕ್ತವಾಯಿತು. ಆರಂಭದಲ್ಲಿ ವಿಜಯಪುರ-ಯಶವಂತಪುರ ಪ್ರಯಾಅನುಕೂಲವಾಗಲಿದೆ ಆರಂಭವಾಗಿತ್ತು ಆದರೆ ಕೊರೊನಾ ದಿಂದಾಗಿ ಅದು ನಿಂತಿದೆ. ಅ.19 ರಂದು ನೈರುತ್ಯ ರೈಲ್ವೆ ಮಂಡಲ ಹುಬ್ಬಳ್ಳಿ ಯಲ್ಲಿ ಸಭೆ ನಡೆಯಲಿದ್ದು ಆ ಸಭೆಯಲ್ಲಿ ಪುನಃ ಈ ಮಾರ್ಗದಲ್ಲಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ರೈಲು ಗಾಡಿ ಓಡಿಸಲು ಒತ್ತಾಯಿಸುವೆ, ನೀವು ಕೂಡ ಹುಬ್ಬಳ್ಳಿಗೆ ನನ್ನ ಜೊತೆಗೆ ಬನ್ನಿ ಎಂದು ಆಹ್ವಾನಿಸಿದರು.

ಲಿಂಕ್ ರೈಲಿಗೆ ಮನವಿ: ವಿಜಯಪುರ-ಯಶವಂತಪುರ ರೈಲು ಓಡಾಟ ಆರಂಭವಾಗುವ ತನಕ ಈಗ ಸಂಚಾರಿಸುತ್ತಿರುವ ಹೊಸಪೇಟೆ- ಹರಿಹರ ಪ್ಯಾಸೆಂಜರ್ ರೈಲಿಗೆ ಬೆಂಗಳೂರಿಗೆ ಹೊಗುವ ಎರಡು ಬೋಗಿಗಳ ಲಿಂಕ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಮಿತಿಯ ಸಂಚಾಲಕರು, ಪತ್ರಕರ್ತ ಹುಳ್ಳಿಪ್ರಕಾಶ ಸಂಸದರಲ್ಲಿ ಭಿನ್ನವಿಸಿಕೊಂಡರು. ಇದು ಒಳ್ಳೆಯ ಸಲಹೆ ಎಂದ ಸಂಸದರು ಅ.19ರ ಸಭೆಯಲ್ಲಿ ಇದನ್ನು ಚರ್ಚಿಸುವೆ ಎಂದರು.

ಹೊಸಪೇಟೆ ಯಿಂದ ಸಂಜೆ ಐದು ಗಂಟೆಗೆ ಹರಿಹರ ಕಡೆಗೆ ಪ್ರಯಾಣಿಸುವ ರೈಲು ಹಗರಿಬೊಮ್ಮನಹಳ್ಳಿ ನಿಲ್ದಾಣಕ್ಕೆ ಸಂಜೆ ಆರು ಗಂಟೆಗೆ ಬರಲಿದೆ. ರಾತ್ರಿ ಎಂಟು ಗಂಟೆಗೆ ಈ ರೈಲು ದಾವಣಗೆರೆ ತಲುಪಲಿದ್ದು ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿಗೆ ರಾತ್ರಿ ವೇಳೆ ಹಲವು ರೈಲುಗಳು ಸಂಚರಿಸುತ್ತಿವೆ. ಆ ರೈಲಿಗೆ ಲಿಂಕ್ ಬೋಗಿಗಳನ್ನು ಲಿಂಕ್ ಮಾಡಿದರೆ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ತಾಲೂಕಿ ನಿಂದ ಬೆಂಗಳೂರಿಗೆ ಪ್ರಯಾಣಿಸುವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸದಸ್ಯರು ತಿಳಿಸಿದರು.

ವಾಲ್ಮೀಕಿ ನಾಯಕ ಸಂಘದ ನಿಕಟಪೂರ್ವ ತಾಲೂಕಾಧ್ಯಕ್ಷ ಚಿಂತ್ರಪಳ್ಳಿ ದೇವೆಂದ್ರಪ್ಪ
ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಬಡಿಗೆರ್ ಬಸವರಾಜ,
ತಾಲೂಕ ಗಂಗಾಮತ ಸಮಾಜದ ಹಿರಿಯ ಮುಖಂಡರಾದ ಬಾರಿಕರ ಬಾಪೂಜಿ, ತಾಲೂಕ ವೀರಶೈವ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ಹೆಚ್.ಪಿ.ಶಿವಶಂಕರ ಗೌಡ, ತಾಲೂಕಾ ವಾಲ್ಮೀಕಿ ನಾಯಕ ಸಂಘದ ಹಿರಿಯ ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ತಾಲೂಕಿನ ಯುವ ನಾಯಕರುಗಳಾದ ಬನ್ನಿಕಲ್ಲು ಗ್ರಾಮದ ಯುವ ಮುಖಂಡರಾದ ಪೂಜಾರ ಮಂಜುನಾಥ, ಬೆಣಕಲ್ಲು ಹನುಮಂತಪ್ಪ, ಹಂಪಾಪಟ್ಟಣ ಕುಬೇರ, ಚಿಕ್ಕಸೊಬಟಿ ಜಯಪ್ಪ ಸೇರಿದ್ದಂತೆ ಹಲವು ಮುಖಂಡರು ಟೀ ಟೇಬಲ್ ಸಂವಾದದಲ್ಲಿ ಸಂಸದರೊಂದಿಗೆ ತಾಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

–ಹುಳ್ಳಿಪ್ರಕಾಶ
ಸಂಪಾದಕರು
ಬಳ್ಳಾರಿ ಸುನಾಮಿಪತ್ರಿಕೆ
9448234961

LEAVE A REPLY

Please enter your comment!
Please enter your name here