ಬಸ್ ಗಾಗಿ ವಿದ್ಯಾರ್ಥಿಗಳು ಪರದಾಟ..!

0
358

ಕೊಟ್ಟೂರು : ತಾಲೂಕಿನ ಯರಲಕಟ್ಟೆ, ಸೊಕ್ಕೆ, ಚಿಕ್ಕ ಬಂಟನಹಳ್ಳಿ, ಮತ್ತು ಬೆನಕನಹಳ್ಳಿ, ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.

ಬಸ್‌ ಬಾರದೆ ಹೋದರೆ ಶಾಲೆ, ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಂದ ವಂಚಿತರಾಗಬೇಕಾಗಿದೆ. ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಮನೆಗೆ ತೆರಳಬೇಕಾದರೂ ಬಸ್‌ಗಳಿಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕಷ್ಟ ಪಡುತ್ತಿದ್ದಾರೆ.

ಈ ಬಗ್ಗೆ ಯರಲಕಟ್ಟೆ, ಸೊಕ್ಕೆ, ಚಿಕ್ಕಬಂಟನಹಳ್ಳಿ, ಮತ್ತು ಬೆನಕನಹಳ್ಳಿ, ಸೇರಿ ಹಲವು ಗ್ರಾಮಗಳ ವಿದ್ಯಾರ್ಥಿಗಳು ಕೊಟ್ಟೂರು ಸ್ಥಳೀಯ ಸರಕಾರಿ ಬಸ್ ವ್ಯವಸ್ಥಾಪಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಗ್ರಾಮೀಣ ಭಾಗಗಳಿಗೆ ಒಂದೊಂದೆ ಬಸ್‌ಗಳು ಸಂಚರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಆ ಬಸ್‌ ತಪ್ಪಿದರೆ ಅಂದು ತರಗತಿಗೇ ಗೈರಾಗಬೇಕಿದೆ. ಕೆಲವು ಕಡೆಗಳಲ್ಲಿ ಪರ್ಯಾಯ ವಾಹನಗಳು ಬಾರದೆ ಗ್ರಾಮದಿಂದ ರಸ್ತೆಯವರೆಗೂ ನಡೆದುಕೊಂಡು ಬಂದು ಬಸ್‌ ಹಿಡಿಯಬೇಕು. ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here