ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ

0
117

ವಿಜಯನಗರ:ಜುಲೈ:21:-ಕಮಲಾಪುರದ ಜೈಭೀಮ್ ನಗರದಲ್ಲಿ ಇಂದು ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ, ವಿದ್ಯಾರಣ್ಯ, NSS ಕೋಶ ಮತ್ತು ಕಮಲಾಪುರ ಪಟ್ಟಣ ಪಂಚಾಯತಿಯು ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಾನಂದ ಎಸ್ ವಿರಕ್ತಮಠ ಅವರು “ಮಹಿಳೆಯರ ಸಮಸ್ಯೆ ಮತ್ತು ಸವಾಲುಗಳು” ಎಂಬ ವಿಷಯದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಮತಾ ಅವರು ವಹಿಸಿದ್ದರು.

ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಶ್ರೀ ನಾಗೇಶ್, ಅಧ್ಯಕ್ಷರಾದ ಶ್ರೀ ಸೈಯದ್ ಅಮುನುಲ್ಲಾಖಾನ್, ಸದಸ್ಯರಾದ ಶ್ರೀ ರಾಜಾ, ಶ್ರೀ ರಾಮಸ್ವಾಮಿ, ಪಟ್ಟಣ ಪಂಚಾಯತಿಯ ಸಿಬ್ಬಂದಿಯವರು,
ಕಮಲಾಪುರದ ಪೋಲಿಸ್ ಇಲಾಖೆಯ ASI , ಶ್ರೀ ಹಂಪಿ ವಿರುಪಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ ಸುರೇಂದ್ರ ಮಾನೇಮಿ, ಉಪನ್ಯಾಸಕರಾದ ತಾಜಾದ್ದಿನ್, ಕಛೇರಿ ಅಧೀಕ್ಷಕರಾದ ಕರಿಬಸವರಾಜ್, ದ್ವೀತಿಯ ದರ್ಜೆ ಸಹಾಯಕರಾದ ಪಂಪಾಪತಿ ಎಂ, ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್ ಎಸ್ ಎಸ್ ನ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ವೀಣಾ.ಕೆ , ರಾ.ಸೇ.ಯೋಜನೆಯ ಶಿಬಿರಾರ್ಥಿಗಳು ಮತ್ತು ಜೈಭೀಮ ನಗರದ ನಾಗರೀಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

-ಪಿವಿ ಕಾವ್ಯ

LEAVE A REPLY

Please enter your comment!
Please enter your name here