“ಕ್ಷಯ ಮುಕ್ತ ಕರ್ನಾಟಕ” ರೂಪಿಸಲು ಗೋಡೆ ಬರಹದ ಮೂಲಕ ಜಾಗೃತಿ,

0
157

ಸಂಡೂರು:ಅ:08: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಜರುಗಿದ ಕ್ಷಯ ಮುಕ್ತ ಕರ್ನಾಟಕ ರೂಪಿಸಲು ಜನ ನಾಯಕ ಅಪ್ಪು ಟಿವಿ ಚಾನಲ್ ಸಂಸ್ಥೆಯವರು ಜಿಲ್ಲೆಯ ಒಟ್ಟು ನೂರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಹೊಸ ಬೆಳಕು ಯೋಜನೆಯಡಿ ನೂರು ಗ್ರಾಮಗಳಲ್ಲಿ ಗೊಡೆ ಬರಹದ ಮೂಲಕ ಕ್ಷಯ ರೋಗದ ಲಕ್ಷಣಗಳು, ತಪಾಸಣೆಗಾಗಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಲು ಬರುವಂತ ಮಾಹಿತಿಯನ್ನು ಒಳಗೊಂಡಿದ್ದು ಇಂತಹ ಬರಹಗಳ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಥಮವಾಗಿ ಗೋಡೆ ಬರಹವನ್ನು ತೋರಣಗಲ್ಲು ಆರೋಗ್ಯ ಕೇಂದ್ರದಿಂದ ಪ್ರಾರಂಭ ಮಾಡಲಾಗುತ್ತಿದ್ದು, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಾದಿಯಾ, ಮತ್ತು ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಡಾ.ಸಾದಿಯ ಅವರು ಮಾತನಾಡಿ ಅಪ್ಪು ಟಿವಿಯವರು ಸೋಶಿಯಲ್ ಮೀಡಿಯಾ ಅಲ್ಲದೇ ಕ್ಷಯ ನಿರ್ಮೂಲನೆಗೆ ಇಲಾಖೆಯೊಂದಿಗೆ ಕೈಜೋಡಿಸಿರುವುದು ಸಂತೋಷವಾಗಿದೆ, ಪ್ರತಿಯೊಬ್ಬರು ಕೈ ಜೋಡಿಸಿದರೆ 2025 ಕ್ಕೆ ಕ್ಷಯ ಮುಕ್ತ ಕರ್ನಾಟಕ ರೂಪಿಸಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಹೊನ್ನೂರಸ್ವಾಮಿ, ಪ್ರಸೂತಿ ತಜ್ಞೆ ಡಾ.ರಜಿಯಾ ಬೇಗಂ, ಆಯುಷ್ ವೈದ್ಯೆ ಡಾ.ಜಯಶ್ರೀ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಲ್ಯಾಬ್ ತಂತ್ರಜ್ಞಾಧಿಕಾರಿ ವೆಂಕಟೇಶ,ಅಬ್ದುಲ್ ಸುಕೂರ್ ಸಾಬ್,ಸಿದ್ದೇಶ್,ಮಾಬು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here