ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಧೃಡರಾಗಬೇಕು: ಮೇಯರ್ ರಾಜೇಶ್ವರಿ

0
36

ಬಳ್ಳಾರಿ,ನ.16 : ಮಹಿಳಾ ಸಬಲೀಕರಣದ ಕುರಿತಾಗಿ ಮಹಿಳೆಯರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳು ಸಿಗುತ್ತಿದ್ದು ಅದರ ಉಪಯೋಗ ಪಡೆದುಕೊಂಡು ಸದೃಢರಾಗಬೇಕು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ರಾಜೇಶ್ವರಿ ಅವರು ಹೇಳಿದರು.
ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಭಾರತದ ಪಿತಾಮಹ ರಾಜಾ ರಾಮ್ ಮೋಹನ್ ರಾಯ್‍ರವರ 250ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಚಯ ಆವರಣದ ಹೊಂಗಿರಣದಲ್ಲಿ “ಮಹಿಳಾ ಸಬಲೀಕರಣ” ಹಾಗೂ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2022”ರ ಅಂಗವಾಗಿ ಮಂಗಳವಾರ ಏರ್ಪಡಿಸಿದಂತಹ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದೇ ರೀತಿಯಾಗಿ ನಗರದ ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಬಿ.ಕೆ.ಲಕ್ಷ್ಮಿಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯದ ಉಪಯೋಗವನ್ನು ಪಡೆದು ಜ್ಞಾನ ಬೆಳೆಸಿಕೊಂಡು ಒಳ್ಳೆಯ ಸಾಧನೆ ಮಾಡಬೇಕು. ಡಿಜಿಟಲ್ ಗ್ರಂಥಾಲಯದಲ್ಲಿ ಎಲ್ಲರೂ ಸದಸ್ಯತ್ವ ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿಗಳ ಜೀವನದಲ್ಲಿ ಗ್ರಂಥಾಲಯಗಳ ಪಾತ್ರ” ಪ್ರಬಂಧ ಸ್ಪರ್ದೆ ಏರ್ಪಡಿಸಿ ಪ್ರಶಸ್ತಿಯನ್ನು ವಿತರಿಸಲಾಯಿತು. ಮತ್ತು ಗ್ರಂಥಾಲಯದ ಉತ್ತಮ ಓದುಗರಲ್ಲಿ ಇಬ್ಬರಿಗೆ ಉತ್ತಮ ಓದುಗರ ಪ್ರಶಸ್ತಿ ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸಾಧನೆ ಮಾಡಿದ ಸಂಡೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಬೀರಪ್ಪ.ಹೆಚ್, ಮೌಲಾನಾ ಅಜಾದ್ ಮಾದರಿ ಪ್ರೌಢಶಾಲಾ ಶಿಕ್ಷಕರಾದ ಸುಂಕಪ್ಪ ಇವರಿಗೆ ಸಾಧಕ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಉಪವಿಭಾಗ ಡಿ.ವೈ.ಎಸ್.ಪಿ ಶೇಖರಪ್ಪ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಾಹಿತಿಗಳು ಹಾಗೂ ಸದಸ್ಯರಾದ ಕೆ.ಬಿ.ಸಿದ್ದಲಿಂಗಪ್ಪ, ಗಂಗಾಧರ್ ಪತ್ತಾರ್, ನಿವೃತ್ತ ಗ್ರಂಥಪಾಲಕರಾದ ಡಾ.ಬಿ.ಆರ್.ಗದಗಿನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ರಂಗಣ್ಣನವರ್, ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ, ಗ್ರಂಥಾಲಯ ಸಹಾಯಕರಾದ ಕೆ.ಸಿದ್ದಪ್ಪ, ಎಸ್. ಸಂತೋಷ್ ಕುಮಾರ್, ಗ್ರಂಥಪಾಲಕರಾದ ಆರ್.ಶಾರದ, ಸಹ ಗ್ರಂಥಪಾಲಕರಾದ ಎಸ್.ಟಿ.ಪ್ರಭಾಕರ್, ವಾಹನ ಚಾಲಕ ಶ್ರೀನಿವಾಸ, ದ್ವಿ.ದ.ಸ ಮಜ್ಜಿಗಿ ವೀರೇಶ, ಸೇರಿದಂತೆ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯದ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here