ಅವಧಿ ಮುಗಿದರೂ ಮುಗಿಯದ ಜಲಜೀವನ್ ಮಷಿನ್ ಕಾಮಗಾರಿ!!

0
139

ಕಂಪ್ಲಿ: ಅವಧಿ ಮುಗಿದರು ಮುಗಿಯದ ಬೆಳಗೊಡು ಹಾಳ್ ಗ್ರಾಮದ, ಜಲಜೀವನ್ ಮಿಷನ್ ಕಾಮಗಾರಿ, ಗ್ರಾಮೀಣ ಭಾಗದ ಎಲ್ಲಾ ಮನೆಮನೆಗಳಿಗೆ ನೀರು ಪೂರೈಕೆ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಕಾಮಗಾರಿ ಕೋಟಿ ಕೋಟಿ ವೆಚ್ಚದಲ್ಲಿ ಯೋಜನೆ ಆರಂಭಿಸಿದೆ,

ಕಂಪ್ಲಿ ತಾಲೂಕಿನ ವಿವಿಧೆಡೆ ಜಲಜೀವನ್ ಮಿಷನ್ ಕಾಮಗಾರಿ ಕುಂಟುತ್ತಾ ತೆವಳುತ್ತಾ ಸಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಬೆಳಗೊಡು ಹಾಳ್ ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ವಿಳಂಬವಾಗುತ್ತಿದೆ ಈಗಾಗಲೇ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಆಗೆದು ನೀರು ಪೂರೈಕೆಗಾಗಿ ಪೈಪ್ ಲೈನ್ ಗಳನ್ನು ಹಾಕಲಾಗುತ್ತಿದ್ದು, ಕಾಮಗಾರಿ ಆರಂಭವಾದ ಆರು ತಿಂಗಳ ಒಳಗಾಗಿ ಕೆಲಸ ಮುಗಿಸಲು ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಗುತ್ತಿದಾರರಿಗೆ ಆದೇಶಿಸಿದೆ,

ಬೆಳಗೊಡು ಹಾಳ್ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ಆರಂಭವಾದ ಜಲಜೀವನ್ ಮಷೀನ್ ಯೋಜನೆ, ಕಾಮಗಾರಿ ನಿರ್ಮಾಣ ಹಂತದಲ್ಲಿ ಇದ್ದು ಎಲ್ಲಡೆ ರಸ್ತೆಗಳನ್ನು ಆಗೆದ ಪರಿಣಾಮ ಸಾರ್ವಜನಿಕರ ಸಂಚಾರ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದೆ, ಇನ್ನು ಮಳೆಗಾಲ ಆರಂಭವಾದರೆ ಈ ಜಲಜೀವನ್ ಮಿಷನ್ ಕಾಮಗಾರಿ ಪರಿಣಾಮ ಹಳ್ಳಿ ರಸ್ತೆ ಸಂಚಾರವೇ ಬಂದಾಗುವ ಹಂತದಲ್ಲಿ ರಸ್ತೆ ಅಗೆಯಲಾಗಿದೆ, ಜಿಲ್ಲಾ ಪಂಚಾಯತಿ ಶುದ್ಧ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆ ಆದೇಶದಂತೆ ಗುತ್ತಿಗೆದಾರ ಆರು ತಿಂಗಳ ಕಾಲಾವಕಾಶದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಕಳೆದ ನಾಲ್ಕೈದು ತಿಂಗಳಿಂದ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿ ಯಾವಾಗ ಮುಗಿಯುತ್ತೆ ಎಂಬುದನ್ನು ಜಲ ಜೀವನ್ ಮಷೀನ್ ಅಧಿಕಾರಿಗಳೇ ಹೇಳಬೇಕಿದೆ,

ವರದಿ:- ದೊಡ್ಡ ಬಸವರಾಜ್ ಬಡಗಿ,

LEAVE A REPLY

Please enter your comment!
Please enter your name here