ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ಮತ್ತು ಸ್ವಾಭಿಮಾನದ ಸಂಕೇತವಾದ ನಾಡದ್ವಜವನ್ನು ಸುಟ್ಟಿರುವರನ್ನ ಬಂಧಿಸಿ:ಕನ್ನಡಪರ ಸಂಘಟನೆಗಳಿಂದ ಮನವಿ

0
98

ಸಂಡೂರು:ಡಿ:22:-ಸಂಡೂರು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಹಾಗೂ ಕರ್ನಾಟಕ ಜನ್ಮಭೂಮಿ ಕನ್ನಡಿಗರ ಸೇನೆ ಸಂಘಟನೆಗಳಿಂದ ಮಾನ್ಯ ಮುಖ್ಯಮಂತ್ರಿಯರಿಗೆ ಮಾನ್ಯ ಸಂಡೂರು ತಹಶೀಲ್ದಾರ್ ರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು

ದಿನೇ-ದಿನೇ ಕರ್ನಾಟಕದ ಗಡಿ ಬಾಗವಾದ ಬೆಳಗಾವಿಯಲ್ಲಿ ಕನ್ನಡಿಗರ ಹಾಗೂ ಅನ್ಯಬಾಷಿಗರ ನಡುವೆ ದ್ವೇಷ ಬಿತ್ತುವ ಕೆಲ ರಾಜ್ಯದ್ರೋಹಿಗಳ ಗುಂಪು ಪುಂಡಾಟಿಕೆ ನಡೆಸುತ್ತಿದ್ದು ಅನೇಕ ರಾಜ್ಯದ್ರೋಹಿ ಕೆಲಸಗಳಾದ ನಮ್ಮ ಹೆಮ್ಮೆಯ ರಾಜ್ಯೋತ್ಸವದ ದಿನ ಕರಾಳದಿನವಾಗಿ ಆಚರಣೆ ಮಾಡುವುದು, ಕನ್ನಡಪರ ಹೋರಾಟಗಾರರಿಗೆ ಕಿರುಕುಳ ನೀಡುವ ದುಷ್ಕೃತ್ಯಕ್ಕೆ ಕೈ ಹಾಕುತ್ತಲೇ ಇದ್ದು, ಇದರಿಂದ ಗಡಿಬಾಗಗಳಲ್ಲಿನ ಸಾಮರಸ್ಯ, ಶಾಂತಿಗೆ ಭಂಗ ಬಂದಿರುವುದಲ್ಲದೆ ಹೊರ ರಾಜ್ಯಗಳ ರಾಜಕೀಯ ಮೇಲ್ನೋಟಗಳ ಕುಮ್ಮಕ್ಕಿನಿಂದ ರಾಜ್ಯದ್ರೋಹಿ ಕೆಲಸಗಳಿಗೂ ಕೆಲವರು ಮುಂದಾಗಿ ಅಮಾಯಕ ಕನ್ನಡಿಗರನ್ನು ಬಲಿತೆಗೆದುಕೊಳ್ಳುತ್ತಿರುವುದು ದುರ್ದೈವದ ಸಂಗತಿ.

ಹಾಗೆಯೇ ನಾಡಧ್ವಜಕ್ಕೆ ಅಡಚಣೆ ಮಾಡಿ ನಾಡ ಧ್ವಜವನ್ನು ಸುಟ್ಟಿರುವ ಎಂ.ಇ.ಎಸ್.ಪುಂಡಾಟಿಕೆಯನ್ನು ಬಗ್ಗುಬಡಿದು ಅಂತವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ಎಂ ಇ ಎಸ್ ಸಂಘಟನೆಯನ್ನು ನಮ್ಮ ರಾಜ್ಯದಿಂದ ನಿಷೇದಗೊಳಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿಮಾಡಿಕೊಂಡರು

ಈ ಸಂಧರ್ಭದಲ್ಲಿ “ಕರ್ನಾಟಕ ರಕ್ಷಣಾ ವೇದಿಕೆ”ಯ ತಾಲೂಕು ಅಧ್ಯಕ್ಷರಾದ ಟಿ. ನರಸಿಂಹ, ಉಪಾಧ್ಯಕ್ಷರಾದ ಶಪಿವುಲ್ಲಾ,ಹಾಗೂ ಸುಬಾನ್ ಸಾಬ್ ಬಾಬನಹಳ್ಳಿ, ಪ್ರದಾನ ಕಾರ್ಯದರ್ಶಿ ಆರ್ ಸಿ ನಾಗರಾಜ್, ಖಜಾಂಚಿ ಮಂಜುನಾಥ್ ಮತ್ತು “ಕರ್ನಾಟಕ ಜನ್ಮಭೂಮಿ ಕನ್ನಡಿಗರ ಸೇನೆ” ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಫೀಕ್, ತಾಲೂಕು ಅಧ್ಯಕ್ಷರಾದ ಬಿ. ರಹಮತ್ ದಿವಾನಾಯ್ಕ್, ಉಪಾಧ್ಯಕ್ಷರಾದ ವಡೇರಹಳ್ಳಿ ಪಿ ಎಸ್ ಮಾರೆಪ್ಪ ಗೌರವಾದ್ಯಕ್ಷರಾದ ವಿ. ಗಂಗಾಧರ, ವಕೀಲರಾದ ರಾಮಚಂದ್ರ, ಪ್ರದಾನ ಕಾರ್ಯದರ್ಶಿಗಳಾದ ಜಿ. ಅಂಜಿನಪ್ಪ ಹಾಗೂ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here