ಡೆಂಗೀ ಜ್ವರ ಕುರಿತು ನಿರ್ಲಕ್ಷ ಬೇಡ, ಎಚ್ಚರ ಇರಲಿ; ಡಾ.ಸುಮಿತ್ರಾ,

0
410

ಸಂಡೂರು:ನ24:- ತಾಲೂಕಿನ ಹಳೇ ಮಾದಾಪುರ ಗ್ರಾಮದಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಡೆಂಗೀ ಜ್ವರ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಡಾ.ಸುಮಿತ್ರಾ ಮಾತನಾಡಿ ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಎಲ್ಲರೂ ತಿಳಿದು ಕೊಂಡಿರಬೇಕು, ಹಾಗದರೆ ಮಾತ್ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಾಧ್ಯ ಎಂದು ತಿಳಿಸುತ್ತಾ ಹಾಗೇ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ನ್ಯೂನತೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಗ್ರಾಮದ ಸುತ್ತಲೂ ನೀರು ಇರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಇರುತ್ತದೆ, ಸೊಳ್ಳೆಗಳಿಂದ ಡೆಂಗೀ, ಚಿಕಿತ್ಸೆ ಗುನ್ಯಾ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗಗಳು ಹರಡುತ್ತವೆ, ಈ ಎಲ್ಲಾ ರೋಗಗಳು ಬಾರದಂತೆ ಮುಖ್ಯವಾಗಿ ಸ್ವಯಂ ರಕ್ಷಣಾ ವಿಧಾನಗಳಾದ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು, ಸದಾ ಮೈತುಂಬ ಹಾಕ ಬೇಕು, ಸೊಳ್ಳೆಗಳು ಮನೆಯಲ್ಲಿ ಇದ್ದರೆ ಮಸ್ಕಿಟೋ ಕಾಯಿಲ್ ಗಳನ್ನು ಹಚ್ಚಬೇಕು, ಸೊಳ್ಳೆಗಳು ಉತ್ಪತ್ತಿ ಯಾಗದಂತೆ ನೀರು ಶೇಖರಣಾ ತೊಟ್ಟಿ, ಡ್ರಮ್, ಗಚ್ಚು ಇವುಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ನೀರು ತುಂಬಿಸಿ ಮುಚ್ಚಳದಿಂದ ಮುಚ್ಚಬೇಕು, ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡ ಬೇಕು, ಜ್ವರದ ಯಾವುದೇ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ತಪಾಸಣೆ ಮಾಡಿಸ ಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ರಜ್ಜು ಶೆಕ್ಷಾವಲಿ, ಮುಖ್ಯ ಶಿಕ್ಷಕ ರಾಜೇಶ್, ಸಹ ಶಿಕ್ಷಕರಾದ ರಾಮಕೃಷ್ಣಯ್ಯ, ಬಸವರಾಜ, ನಾಗರಾಜ, ಡಾ.ದಿಲೀಪ್ ಕುಮಾರ್, ಡಾ.ಸುಮಿತ್ರಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಶಾಲೆಯ ಮಕ್ಕಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here