ಅಪೌಷ್ಟಿಕ ಮಕ್ಕಳ ಪತ್ತೆಗೆ ಜಂಟಿ ತಪಾಸಣೆ;ಡಿ.ಹೆಚ್.ಓ ಡಾ.ವೈ. ರಮೇಶ್ ಬಾಬು,

0
54

ಸಂಡೂರು:ಫೆ:14: ತಾಲೂಕಿನ ಬಂಡ್ರಿ ವ್ಯಾಪ್ತಿಯ 45 ಅಂಗನವಾಡಿ ಕೇಂದ್ರಗಳ ಅಪೌಷ್ಟಿಕ ಮಕ್ಕಳನ್ನು ಪತ್ತಹಚ್ಚುವ ವಿಶೇಷ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,ಶಿಬಿರಕ್ಕೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಮಾತನಾಡುತ್ತಾ
ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿನ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರ್ತಿಸಿ ಚಿಕಿತ್ಸೆಗೆ ಒಳಪಡಿಸಲು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಬಳ್ಳಾರಿ ರವರ ನಿರ್ದೇಶನ ನೀಡಿದ್ದು ಅದರಂತೆ ಸಂಡೂರು ತಾಲೂಕಿನ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ, ಈ ತಪಾಸಣೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ, 45 ಅಂಗನವಾಡಿ ಕೇಂದ್ರ ವ್ಯಾಪ್ತಿಯ ಹುಟ್ಟಿನಿಂದ 06 ವರ್ಷದೊಳಗಿನ 3600 ಮಕ್ಕಳ ತಪಾಸಣೆ ಕೈಗೊಳ್ಳಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ, ವಯಸ್ಸಿಗೆ ತಕ್ಕ ತೂಕ, ಎತ್ತರಕ್ಕೆ ತಕ್ಕ ತೂಕ, ತೊಳಿನ ಸುತ್ತಳತೆ ಮೂಲಕ ಮಕ್ಕಳ ಅಪೌಷ್ಟಿಕತೆಯನ್ನು ಗುರ್ತಿಸಲಾಗುತ್ತಿದ್ದು 9 ಆರ್‌ಬಿಎಸ್‌ಕೆ ಮೂರು ಸಂಚಾರಿ ಆರೋಗ್ಯ ಘಟಕಗಳು 45 ಅಂಗನವಾಡಿ, 36 ಆಶಾ ಕಾರ್ಯಕರ್ತೆಯರು, ಜಂಟಿಯಾಗಿ ತಪಾಸಣೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸಮೀಕ್ಷೆಯ ನೇತ್ರತ್ವವನ್ನು ಡಾ.ವೈ ರಮೇಶ್ ಬಾಬು,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮತ್ತು ವಿಜಯಕುಮಾರ್, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ. ಅನೀಲ್ ಕುಮಾರ್, ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿಗಳು, ರಾಮಕೃಷ್ಣ ನಿರೂಪಣಾಧಿಕಾರಿಗಳು, ಡಾ ಭರತ್‌ ತಾಲೂಕಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ನಾಗರಾಜ, ಎಳೆನಾಗಪ್ಪ, ಮೋಹನಕುಮಾರಿ, ಪ್ರದೀಪ್‌, ಡಾ ಸುನೀತಾ,ಡಾ ಅಕ್ಷಯ್‌ ಶಿವಪೂರೆ, ಡಾ ಚಂದ್ರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಈಶ್ವರ ದಾಸಪ್ಪನವರ, ಗಿರೀಶ್‌ ಡಿಎನ್‌ಓ, ಸೇರಿದಂತೆ 30 ಐಸಿಡಿಎಸ್‌ ಮೇಲ್ವಿಚಾರಕಿಯರು, 5 ಆರೋಗ್ಯ ನಿರೀಕ್ಷಣಾಧಿಕಾರಿಗಳು ಭಾಗಿಯಾಗಿದ್ದರು

LEAVE A REPLY

Please enter your comment!
Please enter your name here