ವಡ್ಡು ಗ್ರಾಮದಲ್ಲಿ ವಿಶ್ವ ನ್ಯುಮೋನಿಯಾ ದಿನ ಜಾಗೃತಿ ಕಾರ್ಯಕ್ರಮ,

0
200

ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೆ.ಹೆಚ್.ಪಿ.ಟಿ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ನ್ಯುಮೋನಿಯಾ ದಿನವನ್ನು ಆಚರಿಸಲಾಯಿತು,

ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಐದು ವರ್ಷದೊಳಗಿನ ಮಕ್ಕಳಲ್ಲಿ ಸಹಜವಾಗಿ ಕಾಡುವ ಎರಡು ಕಾಯಿಲೆಗಳಲ್ಲಿ ನ್ಯುಮೋನಿಯಾವೂ ಒಂದಾಗಿದ್ದು, ನ್ಯುಮೋನಿಯಾ ಕಾಯಿಲೆ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗೈಗಳ ಮೂಲಕ ಉಂಟಾಗುತ್ತದೆ, ಸೂಕ್ತ ಆರೈಕೆ ಮತ್ತು ಸೂಕ್ತ ಚಿಕಿತ್ಸೆ ಚಿಕಿತ್ಸೆಯಿಂದ ನ್ಯುಮೋನಿಯಾ ಮರಣಗಳನ್ನು ತಡೆಗಟ್ಟ ಬಹುದು, ಆರು ತಿಂಗಳ ವರೆಗೆ ಸರಿಯಾದ ರೀತಿಯಲ್ಲಿ ಶಿಶುಗಳಿಗೆ ತಾಯಿಯ ಎದೆ ಹಾಲು ಮಾತ್ರವೇ ಕೊಡುವುದರ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನ್ಯುಮೋನಿಯಾವನ್ನು ತಡೆಯಬಹುದು, ನ್ಯುಮೋನಿಯಾದಿಂದ ಶಿಶುಗಳನ್ನು ರಕ್ಷಿಸಲು ಲಘು ಉಷ್ಣತೆಯಿಂದ ಬೆಚ್ಚಗಿಡಬೇಕು, ಉಸಿರಾಟಕ್ಕೆ ತೊಂದರೆಯಾಗುವ ಹೊಗೆ ರಹಿತ ಕೋಣೆ ಇಡಬೇಕು,ಶಿಶುಗಳಿಗೆ ಸಾಮ್ರಾಣಿ ಹೊಗೆ ಹಾಕುವುದು ಬಿಡಬೇಕು, ಶಿಶು ಬೆಚ್ಚಗಿರಲು ಕಾಂಗೊರೋ ಕೇರ್ ನಲ್ಲಿ ಇಡಬೇಕು ತಾಯಿಯ ಚರ್ಮದ ಉಷ್ಣತೆಗೆ ಹೊಂದಿಕೊಳ್ಳುವ ಹಾಗೆ ಬಿಸಿಯಾಗಿ ಇಡಬೇಕು, ನ್ಯುಮೋನಿಯಾ ಸೋಂಕಿನ ಲಕ್ಷಣಗಳು ಕಂಡಕೂಡಲೇ ವೈದ್ಯರ ಬಳಿ ತಪಾಸಣೆಗೆ ಒಳ ಪಡಿಸಬೇಕು, ನ್ಯುಮೋನಿಯಾ ದಿಂದ ಉಂಟಾಗುವ ಸಾವುಗಳನ್ನು ಮೂರಕ್ಕೆ ಇಳಿಸುವ ಗುರಿಯನ್ನು ಇಟ್ಟುಕೊಂಡು ನ್ಯುಮೋನಿಯಾ ತಟಸ್ಥ ಗೊಳಿಸಲು ಜಾಗೃತಿ ಮೂಡಿಸುವುದು,ಮತ್ತು ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮಾಡಿದಲ್ಲಿ ನ್ಯುಮೋನಿಯಾ ತಡೆಗಟ್ಟುಬಹುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ವಯಸ್ಕರಿಗೆ ನ್ಯುಮೋನಿಯಾ ಇದ್ದವರಿಗೂ ಕ್ಷಯರೋಗ ಇರಬಹುದು, ತಪಾಸಣೆ ಮಾಡಿಸಿ ಕೊಳ್ಳುವಂತೆ ಸೂಚಿಸಿ, 2025 ಕ್ಕೆ ಕ್ಷಯರೋಗ ‌ಮುಕ್ತ ಭಾರತ ಮಾಡುವ ಕುರಿತು ಮಾಹಿತಿ ನೀಡಲಾಯಿತು, ದೇಹಕ್ಕೆ ಪ್ರೋಟೀನ್ ಗಳ ಅವಶ್ಯಕತೆ ಇದ್ದು ನಿತ್ಯ ಬಳಸಲು ಸೂಚಿಸಲಾಯಿತು, ತಾಯಂದಿರು ಮತ್ತು ಮಕ್ಕಳು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ನಿತ್ಯ ಸೇವಿಸಲು ಸಲಹೆ ನೀಡಲಾಯಿತು ಅದಕ್ಕಾಗಿ ಕೆ.ಹೆಚ್.ಪಿ.ಟಿ ಸಂಸ್ಥೆಯಿಂದ ತಾಯಂದಿರಿಗೆ 500 ಗ್ರಾಮ್ ಹೆಸರು ಕಾಳುಗಳನ್ನು ವಿತರಣೆ ಮಾಡಲಾಯಿತು, ಹಾಗೇ ಎಲ್ಲರೂ ಆಯುಷ್ಮಾನ್ ಕಾರ್ಡ್ (ಅಭಾ) ಮಾಡಿಸಿಕೊಳ್ಳಲು ತಿಳಿಸಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಆಶಾ ಕಾರ್ಯಕರ್ತೆ ಲಕ್ಷ್ಮಿ, ಶಿವಲೀಲಾ, ಮಂಜುಳಾ, ಸಾವಿತ್ರಿ, ಕೆ.ಹೆಚ್.ಪಿ.ಟಿ ಕೋಅರ್ಡಿನೇಟರ್ ಆಶಾ, ವಿನೋಧ, ಅಭಾ ಕಾರ್ಡ್ ನೊಂದಣಿ ಮಾಡಲು ನೇಮಕ ಮಾಡಿದ ಧರ್ಮಸ್ಥಳ ಸಂಘದ ಕೋ ಅರ್ಡಿನೇಟರ್ ಪುಷ್ಪಲತಾ, ಪ್ರಮೀಳಾ, ಗರ್ಭಿಣಿ ಮಹಿಳೆಯರಾದ ಅಂಬಿಕಾ,ಶ್ವೇತಾ, ಶಾಂತ, ದೇವಮ್ಮ, ರಿಯಾನ್, ರಂಜಿತಾ, ರೋಜಾ, ಮಹಾಲಕ್ಷ್ಮಿ, ರುದ್ರಮ್ಮ,ನೀಲಮ್ಮ, ನಿಕಿತ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here