ರಂಗು ರಂಗಿನ ಹೂವು ಗಳಲ್ಲಿ ಕಂಗೊಳಿಸಿದ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನ

0
441

ಕಾರ್ತೀಕ ಮಾಸದ ಸೋಮವಾರದಂದು ಪುಷ್ಪಗಳಿಂದ ಪುಷ್ಪಲಂಕಾರ

ಕೊಟ್ಟೂರು : ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರಸ್ವಾಮಿ ಹಿರೇಮಠದಲ್ಲಿ ಕಾರ್ತೀಕ ಮಾಸದ ಸೋಮವಾರದಂದು ಗರ್ಭಗುಡಿ ಹಾಗೂ ಮಠದ ಆವರಣವನ್ನು ಸಂಪೂರ್ಣವಾಗಿ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿರುವುದು ಭಕ್ತರ ಕಣ್ಮನ ಸೆಳೆಯಿತು.

ಪಟ್ಟಣದ ಸ್ವಾಮಿಯ ಭಕ್ತರಾದ ಬಣಕಾರ ಮೂಗಪ್ಪ ಮತ್ತು ಕೊಟ್ರೇಶ್ ಸಹೋದರರು ಸತತವಾಗಿ 7 ವರ್ಷಗಳಿಂದ ಒಂದು ಲಕ್ಷ ರೂ ವೆಚ್ಚದ ಹೂವುಗಳನ್ನು ಖರೀದಿಸಿ ಬೆಳಗಿನ ಪೂಜಾ ಕೈಂಕರ್ಯಕ್ಕೆ ಸರಿಯಾಗಿ ಹೂವುಗಳನ್ನು ಅಲಂಕರಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ.

ಬೆಳಗಿನ ಜಾವದಲ್ಲಿ ಅರ್ಚಕ ಬಳಗ ಪೂಜಾ ಪ್ರಕ್ರಿಯೆ ವಿಧಾನಗಳನ್ನು ನೆರವೇರಿಸುತ್ತಿದ್ದಂತೆ ಪುಷ್ಪಗಳಿಂದ ಅಲಂಕೃತಗೊಂಡಿರುವ ಸ್ವಾಮಿಯ ದರ್ಶನಕ್ಕೆ ಅಸಂಖ್ಯಾತ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here