ಹುಬ್ಬಳ್ಳಿಯ ವಿಬಾಗ ರೈಲ್ವೆ ವ್ಯವಸ್ಥಾಪಕರಿಗೆ ರಾಜ್ಯ ರೈಲ್ವೆ ಕ್ರಿಯಾಸಮಿತಿಯಿಂದ ತೋರಣಗಲ್ಲುನಲ್ಲಿ ಪ್ರಯಾಣಿಕರ ರೈಲ್ವೆಗಾಗಿ ಮನವಿ

0
93

ಹಾಯ್ ಸಂಡೂರ್, ನ್ಯೂಸ್.
ಸಂಡೂರು. ಜುಲೈ.21.ಹುಬ್ಬಳ್ಳಿಯ ವಿಭಾಗ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಅರವಿಂದ್ ಮಳಖೇಡ್ ಇವರನ್ನು ಇಂದು 21.7.2021 ರಾಜ್ಯ ರೈಲ್ವೆ ಕ್ರಿಯಾಸಮಿತಿಯ ಅಧ್ಯಕ್ಷರಾದ ಕೆ.ಎಂ.ಮಹೇಶ್ವರ ಸ್ವಾಮಿ ಇವರ ನೇತೃತ್ವದ ನಿಯೋಗದಲ್ಲಿ ಸಂಡೂರು ಘಟಕದ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಶಿವಕುಮಾರ್ ಟಿ.ಎಂ, ಜಿ ವೀರೇಶ್, ಶ್ರೀಶೈಲ ಆಲದಹಳ್ಳಿ , ಬಳ್ಳಾರಿ ಘಟಕದ ಮಾಜಿ ಜೋನಲ್ ರೈಲ್ವೆ ಕಮಿಟಿಯ ಸದಸ್ಯ ಮಹಮ್ಮದ್ ಗೌಸ್, ದತ್ತಾತ್ರೇಯ ರೆಡ್ಡಿ, ಹೆಚ್ ಕೆ ಗೌರೀಶಂಕರ್ ಇವರುಗಳ ನಿಯೋಗವು ಇಂದು ಮನವಿ ಪತ್ರವನ್ನು ತೋರಣಗಲ್ಲಿನಲ್ಲಿ ಸಲ್ಲಿಸಲಾಯಿತು.

ಚರ್ಚೆಯ ಸಮಯದಲ್ಲಿ ಪ್ರಮುಖವಾಗಿ ಸಂಡೂರು ಹತ್ತಿರವಿರುವ ಲಕ್ಷೀಪುರದಿಂದ ತೊರಣಗಲ್ಲಿಗೆ ಪ್ರಯಾಣಿಕರ ರೈಲು ಆರಂಭಿಸಲು ಒತ್ತಾಯಿಸಲಾಯಿತು,

ಗಂಗಾವತಿಯಿಂದ ಕಂಪ್ಲಿ ಮಾರ್ಗವಾಗಿ ದರೋಜಿಗೆ ಬ್ರಾಡ್ ಗೇಜ್ ರೈಲ್ವೆ ಮಾರ್ಗಕ್ಕಾಗಿ ಒತ್ತಾಯಿಸಲಾಯಿತು.

ಕಂಪ್ಲಿ ಹತ್ತಿರದ ತುಂಗಭದ್ರಾ ನದಿಗೆ ಎರಡು ಮಹಡಿಯ ಬಹುಉಪಯೋಗಿ (ರೈಲು ಮತ್ತು ವಾಹನ) ರೈಲ್ವೆ ಸೇತುವೆಯನ್ನ ನಿರ್ಮಿಸಲು ಒತ್ತಾಯಿಸಲಾಯಿತು

ಮೈಸೂರು ವಾರಣಾಸಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ ಬಳ್ಳಾರಿ ಮಾರ್ಗವಾಗಿ ಸಂಚರಿಸುವ ಎಲ್ಲಾ 40 ರೈಲುಗಳನ್ನು ಯಥಾವತ್ತಾಗಿ ಪುನರ್ ಆರಂಭಿಸಲು ಒತ್ತಾಯಿಸಲಾಯಿತು.

ಇದೇ ಸಂಧರ್ಭದಲ್ಲಿ ಸುಶೀಲ್ ನೋವೇಲ್ ಜೋನಲ್ ರೈಲ್ವೆ ಕಮಿಟಿ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಲಾಯಿತು, ಸದರಿ ವಿಷಯವನ್ನು ರೈಲ್ವೆಯ ಇಲಾಖೆಯ ಸಭೆಯಲ್ಲಿ ಮಂಡಿಸಲು ಕೋರಲಾಯಿತು.

LEAVE A REPLY

Please enter your comment!
Please enter your name here