ಅನುದಾನ ಪಡೆಯಲು ಸರ್ಕಾರಕ್ಕೆ ಪರ್ಸೆಂಟೇಜ್ ನೀಡಬೇಕು.; ಶಾಸಕ ಎಸ್.ಭೀಮಾನಾಯ್ಕ..!!

0
346

ಕೊಟ್ಟೂರು:21:ಏ:-ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಬಿಜೆಪಿಯೇತರ ಕಾಂಗ್ರೇಸ್ ಮತ್ತು ಜೆಡಿಎಸ್ ಶಾಸಕರುಗಳ ಕ್ಷೇತ್ರಗಳ ಅಭಿವೃದ್ದಿಗೆ ಅನುದಾನ ಮಂಜೂರು ಮಾಡಲು ತಾರತಮ್ಯ ನೀತಿ ಅನುಸರಿಸುತ್ತಿದೆ. ಕಾಂಗ್ರೇಸ್, ಜೆಡಿಎಸ್ ಶಾಸಕರುಗಳು ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯಲು ಸರ್ಕಾರಕ್ಕೆ ಪರ್ಸೆಂಟೇಜ್ ನೀಡಬೇಕಾಗಿರುವ ಸಂದರ್ಭ ಒದಗಿ ಬಂದಿದೆ. ಸರ್ಕಾರಕ್ಕೆ ಪರ್ಸೆಂಟೇಜ್ ನೀಡಿದರಷ್ಟೇ ಅನುದಾನ ಬಿಡುಗಡೆಯಾಗುತ್ತದೆ ಎಂಬ ಮಾತನ್ನು ಸ್ವತಃ ಬಿಜೆಪಿ ಶಾಸಕರುಗಳೇ ಹೇಳುತ್ತಿದ್ದಾರೆ ಎಂದರೇ ರಾಜ್ಯದಲ್ಲಿನ ಸರ್ಕಾರದ ನಡೆ ಎತ್ತ ಸಾಗಿದೆ ಎಂದು ತೋರುತ್ತಿದೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಎಸ್.ಭೀಮಾನಾಯ್ಕ ಹೇಳಿದರು.
ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ, ಬಡವರಿಗೆ ಮನೆ ನೀಡುವ ಸಂಬಂಧ ಸ್ಥಳೀಯ ಜನರ ಸಭೆಯನ್ನು ಬುಧವಾರ ದಿನವಿಡೀ ನಡೆಸಿ ನಂತರ ಸಂಜೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಕಾಮಗಾರಿಗಳ ಬಿಲ್ ಪಡೆಯಲು 40% ನೀಡಬೇಕೆಂಬ ಪರಿಸ್ಥಿತಿ ಇರುವುದರ ಬಗ್ಗೆ ದಿಂಗಾಲೇಶ್ವರ ಸ್ವಾಮಿಜಿ ಮಾತನಾಡಿದರುವುದು ಮತ್ತು ಗುತ್ತಿಗೆದಾರರ ಸಂಘದ ರಾಜ್ಯದ್ಯಕ್ಷ ಕೆಂಪಣ್ಣ ಮಾತನಾಡಿರುವುರಲ್ಲಿ ಸತ್ಯ ಇದೆ ಎಂದ ಅವರು ಗ್ರಾಮೀಣಾಭಿವೃದ್ದಿ ಪಂಚಾಯಿತ್‌ರಾಜ್ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ, ತಮ್ಮ ಇಲಾಖಾ ವ್ಯಾಪ್ತಿಯ ಕಾಮಗಾರಿಗಳಿಗೆ ಇಂತಿಷ್ಟು ಪ್ರಮಾಣದಲ್ಲಿ ಪರ್ಸೆಂಟೇಜ್ ನೀಡಬೇಕೆಂಬ ಅಲಿಖಿತ ಆದೇಶ ನೀಡಿದ್ದರು. ಈ ಸಂಬಂಧ ಪರ್ಸೆಂಟೇಜ್ ಸಂಗ್ರಹ ಮಾಡಲೆಂದೇ ಬಳ್ಳಾರಿ ಜಿಲ್ಲೆಯಲ್ಲಿ ಈಶ್ವರಪ್ಪನವರ ಏಜೆಂಟರ್‌ಗಳು ಯರ‍್ಯಾರಿದ್ದರೂ ಎಂಬುದು ಎಲ್ಲಾರಿಗೂ ಜಗ್ಗಜಾಹೀರವಾಗಿತ್ತು ಎಂದು ಅವರು ಹೇಳಿದರು.
ಕೊಟ್ಟೂರು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ 1 ಕೋಟಿ 49 ಲಕ್ಷ ರೂ ವೆಚ್ಚದ ಸಿ.ಸಿ.ರಸ್ತೆ ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಯೋಜನೆ ರೂಪಿಸಿದ್ದೇವೆ ಎಂದ ಅವರು ಪಟ್ಟಣ ಪಂಚಾಯಿತಿ ನೂತನ ಕಛೇರಿ ಮತ್ತು ಪೊಲೀಸ್ ಠಾಣೆಯ ನೂತನ ಕಛೇರಿ ನಿರ್ಮಾಣ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದ್ದು ಶೀಘ್ರದಲ್ಲೇ ಇದರ ಉದ್ಘಾಟನೆಯನ್ನು ನೆರೆವೇರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು. ಕೊಟ್ಟೂರು ಪಟ್ಟಣದ ವಿವಿಧ 9 ವಾರ್ಡ್ಗಳನ್ನು ಕೊಳಚೆ ನಿರ್ಮೂಲನಾ ಮಂಡಳಿ ಆಯ್ಕೆ ಮಾಡಿಕೊಂಡಿದ್ದು ಈ ಪ್ರದೇಶದಲ್ಲಿನ ಬಡ ಜನರಿಗೆ ಮನೆಗಳನ್ನು ನಿರ್ಮಿಸಿಕೊಡಲು ಈಗಾಗಲೇ ಯೋಜನೆ ಸಿದ್ದಗೊಂಡಿದೆ. ಪಟ್ಟಣದ 1, 2, 20, 19, 15, 9, 11, 6, 5, 4 ಈ ವಾರ್ಡ್ಗಳಲ್ಲಿ ಮನೆ ನಿರ್ಮಿಸಿ ಕೊಡುವ ಸಂಬಂಧ ಬಡ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ಇಂದು ಸ್ಥಳೀಯ ಜನಪ್ರತಿನಿಗಳೊಂದಿಗೆ ಈ ಪ್ರದೇಶಗಳಿಗೆ ಭೇಟಿ ನೀಡಿ ಅವರುಗಳಿಂದ ಅರ್ಜಿ ಪಡೆದುಕೊಂಡಿರುವೆ. ಶೀಘ್ರದಲ್ಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಪ್ರಕಟಿಸುತ್ತೇವೆ. ಈ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ಕೊಳಚೆ ನಿರ್ಮೂಲನಾ ಮಂಡಳಿ ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸುವುದಕ್ಕೆ ಮುಂದಾಗಲಿದೆ ಎಂದು ಅವರು ಹೇಳಿದರು. ಮನೆಗಳ ಫಲಾನುಭವಿಗಳನ್ನು ಪಾರದರ್ಶಕವಾಗಿ ಮಾಡಲಾಗುತ್ತಿದ್ದು ಯಾರೊಬ್ಬರು ಮಧ್ಯವರ್ತಿಗಳಿಗೆ ದುಡ್ಡು ಕೊಡಬಾರದು ಎಂದು ಅವರು ಹೇಳಿದರು.
ಕೊಟ್ಟೂರು ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾರಂಭಿಸಲು ಸರ್ಕಾರ ಈಗಾಗಲೇ ಸಂಬಂಧಪಟ್ಟವರಿಂದ ವರದಿ ತರಿಸಿಕೊಂಡಿದೆ. ಈ ಸಂಬಂಧ ವಿಧಾನ ಸಭಾ ಅವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೆ ಎಂದರು. ಪಟ್ಟಣದ ಚಿರಿಬಿ, ಗಂಗಮ್ಮನಹಳ್ಳಿ ರಸ್ತೆ ದುರಸ್ಥಿ ಕಾರ್ಯ ಕಾಮಗಾರಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಯೋಜನೆ ರೂಪಿಸಿದ್ದು ಈ ಸಂಬಂಧ ಶನಿವಾರ ಭೂಮಿ ಪೂಜೆ ನೆರೆವೇರಿಸಲಾಗುವುದು ಎಂದು ಅವರು ಹೇಳಿದರು.
ಕೊಟ್ಟೂರಿನಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಿಸಲು ಈಗಾಗಲೇ ಅನುದಾನ ಬಿಡುಗಡೆಗೊಂಡಿದ್ದು ಇದರ ಚಾಲನೆಯೂ ಸಹ ಮುಂಬರುವ ದಿನಗಳಲ್ಲಿ ಆಗಲಿದೆ ಎಂದರು. ಕೊಟ್ಟೂರು ಕೆರೆ ಸೇರಿದಂತೆ ಕ್ಷೇತ್ರದ ಇತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಇನ್ನೊಂದು ತಿಂಗಳಲ್ಲಿ ಮಂಜೂರಾತಿ ನೀಡುವ ಆಶ್ವಾಸನೆ ನೀಡಿದ್ದು ಸಚಿವ ಗೋವಿಂದ್ ಕಾರಜೋಳ ಈ ಸಂಬಂಧ ತಮಗೆ ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದರು.
ಡಿಸೆಂಬರ್ ವೇಳೆಗೆ ಕೊಟ್ಟೂರು ಪಟ್ಟಣವನ್ನು ಮೇಲ್ದರ್ಜೆಗೇರಿಸಿ ಪುರಸಭಾ ಆಡಳಿತ ಜಾರಿಗೆ ಬರಲಿದೆ. ಈ ಸಂಬಂಧ ಈಗಾಗಲೇ ಸರ್ಕಾರಿ ಪ್ರಕ್ರಿಯೆಗಳು ಜರುಗಿವೆ ಎಂದು ಅವರು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಪ.ಪಂ.ಸದಸ್ಯರುಗಳಾದ ಜಗದೀಶ, ಕೊಟ್ಟೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಐ.ದಾರುಕೇಶ, ಎನ್.ಎಸ್.ಯು.ಅಧ್ಯಕ್ಷ, ಪ್ರಸಾದ್ ಅರಮನಿ, ಕೊಟ್ಟೂರಿನಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಿಸಲು ಈಗಾಗಲೇ ಅನುದಾನ ಬಿಡುಗಡೆಗೊಂಡಿದ್ದು ಇದರ ಚಾಲನೆಯೂ ಸಹ ಮುಂಬರುವ ದಿನಗಳಲ್ಲಿ ಆಗಲಿದೆ ಎಂದರು. ಕೊಟ್ಟೂರು ಕೆರೆ ಸೇರಿದಂತೆ ಕ್ಷೇತ್ರದ ಇತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಇನ್ನೊಂದು ತಿಂಗಳಲ್ಲಿ ಮಂಜೂರಾತಿ ನೀಡುವ ಆಶ್ವಾಸನೆ ನೀಡಿದ್ದು ಸಚಿವ ಗೋವಿಂದ್ ಕಾರಜೋಳ ಈ ಸಂಬಂಧ ತಮಗೆ ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದರು.
ಡಿಸೆಂಬರ್ ವೇಳೆಗೆ ಕೊಟ್ಟೂರು ಪಟ್ಟಣವನ್ನು ಮೇಲ್ದರ್ಜೆಗೇರಿಸಿ ಪುರಸಭಾ ಆಡಳಿತ ಜಾರಿಗೆ ಬರಲಿದೆ. ಈ ಸಂಬಂಧ ಈಗಾಗಲೇ ಸರ್ಕಾರಿ ಪ್ರಕ್ರಿಯೆಗಳು ಜರುಗಿವೆ ಎಂದು ಅವರು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಪ.ಪಂ.ಸದಸ್ಯರುಗಳಾದ ಜಗದೀಶ, ಕೊಟ್ಟೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಐ.ದಾರುಕೇಶ, ಎನ್.ಎಸ್.ಯು.ಅಧ್ಯಕ್ಷ, ಪ್ರಸಾದ್ ಅರಮನಿ, ಯುವಕಾಂಗ್ರೇಸ್ ಅಧ್ಯಕ್ಷ ಆಕರ್ಷ ಮೂಲಿಮನಿ ಮತ್ತಿತರರು ಇದ್ದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here