ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ: ಎಂ. ಎಸ್.ಶಿವನ ಗುತ್ತಿ

0
338

ಕೊಟ್ಟೂರು ಗಂಗೋತ್ರಿ ಬಿ.ಎಸ್.ಡಬ್ಲ್ಯೂ. ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶ್ರೀ ಎಂ.ಎಸ್. ಶಿವನ ಗುತ್ತಿ ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಡು ಮುಟ್ಟದ ಸೊಪ್ಪಿಲ್ಲ,ಸಮಾಜಕಾರ್ಯಕರ್ತ ಮಾಡದ ಕೆಲಸವಿಲ್ಲ. ಎಂಬ ನುಡಿಯಂತೆ ಸಮಾಜ ಕಾರ್ಯದ ವೈಶಿಷ್ಟತೆಯನ್ನು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡಿಯುತ್ತಿರುವುದು ನಿಮ್ಮೆಲ್ಲರ ಭಾಗ್ಯ ಏಕೆಂದರೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಸಂಸ್ಕಾರ, ಸಾಮರಸ್ಯದ ಜೀವನದ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಕನಸನ್ನು ನನಸಾಗಲು ಬೆನ್ನೆಲುಬಾಗಿ ನಿಲ್ಲುತ್ತದೆ. ಎಂದು ಉದ್ಘಾಟನಾ ನುಡಿಗಳನ್ನು ಆಡಿದರು.

ನಂತರ ಕಾರ್ಯಕ್ರಮವನ್ನೂ ಉದ್ದೇಶಿಸಿ ಶ್ರೀಮತಿ ರಚನಾ ರಜತ್ ನಿರ್ದೇಶಕರು ಶ್ರೀ ಗುರು ಬಸವೇಶ್ವರ ವಿಧ್ಯಾಭಿರುದ್ಧಿ ಸಂಸ್ಥೆ ಇವರು ಮಾತನಾಡಿ ಇಂದಿನ ಯುವ ಸಮೂಹ ಉನ್ನತ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ನಮ್ಮ ಶಿಕ್ಷಣ ಸಂಸ್ಥೆಯು ಸದಾಕಾಲ ನಿಮ್ಮೊಂದಿಗೆ ಇದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ನಿರ್ಮಲ ಶಿವನ ಗುತ್ತಿ ಪ್ರಾಂಶುಪಾಲರು ಭಾಗೀರಥಿ ಪದವಿ ಪೂರ್ವ ಕಾಲೇಜು ಇವರು ವಿದ್ಯಾರ್ಥಿಗಳ ಕುರಿತು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು ಮೊಬೈಲ್ ದಾಸರಗುತಿದ್ದಾರೆ, ಮೊಬೈಲ್ ಉತ್ತಮ ಕೆಲಸಗಳಿಗೆ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುಬಸವರಾಜ ಎ.ಎಂ.ಎಂ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ಮರುಳಪ್ಪ ಕೆ, ಶ್ಯಾಮರಾಜ್ ಟಿ, ಶಶಿಕಿರಣ ಕೆ, ಕೊಟ್ರೇಶ ಪಿ.ಕೆ.ಎಂ, ಉಪಸ್ಥಿತಿ ಇದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಚಂದನ ಕೆ.ಜಿ. ಸ್ವಾಗತಿಸಿದರು, ಪ್ರಿಯಾಂಕ ವಂದಿಸಿದರು,ಸೂರ್ಯ ಆರ್. ನಿರೂಪಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here