ಘೋರ್ಪಡೆ ನಗರದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಶಿಬಿರ

0
300

ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಘೋರ್ಪಡೆ ನಗರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಹಕಾರದಲ್ಲಿ ಪೌಷ್ಟಿಕ ಆಹಾರ ಶಿಬಿರ ಏರ್ಪಡಿಸಲಾಗಿತ್ತು, ಕುರೇಕುಪ್ಪ ಪುರಸಭೆ ಸದಸ್ಯ ಎಸ್.ಕೆ ಬಾಷ ಶಿಬಿರದ ಜ್ಯೋತಿ ಬೆಳಗಿಸಿ ಮಾತನಾಡಿ ಅಂಗನವಾಡಿ ಮಕ್ಕಳ ಅಭಿವೃದ್ಧಿಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಫ್ಯಾನ್, ಫಿಡ್ಜ್ ನಂತಹ ಹೈಟೆಕ್ ವ್ಯವಸ್ಥೆಗಳನ್ನು ಮಾಡಲು ಶ್ರಮ ವಹಿಸುತ್ತೇನೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಿಬಿರ ಉದ್ದೇಶಿಸಿ ಸಿ.ಡಿ.ಪಿ.ಓ ಎಳೆ ನಾಗಪ್ಪ ಅವರು ಮಾತನಾಡಿ ಸದೃಢ ಮಗು ಪಡೆಯಲು ಗರ್ಭಿಣಿಯರು ಉತ್ತಮ ಪೌಷ್ಟಿಕ ಆಹಾರ ಸೇವಿಸುವುದು ಅತೀ ಮುಖ್ಯ ಎಂದು ತಿಳಿಸಿದರು, ಆರೋಗ್ಯವಂತ ತಾಯಿ-ಆರೋಗ್ಯವಂತ ಮಗು ದೇಶದ ಸಂಪತ್ತು, ದೇಶದ ಅಭಿವೃದ್ಧಿ ಕಾಣ ಬೇಕಾದರೆ ಆರೋಗ್ಯವಂತ ಮಗುವನ್ನು ದೇಶದ ಕೊಡುಗೆಯಾಗಿ ನೀಡಿರಿ, ಸ್ಥಳೀಯವಾಗಿ ದೊರೆಯುವ ಎಲ್ಲಾ ತರಕಾರಿ,ಹಣ್ಣುಗಳನ್ನು ಸೇವಿಸಬೇಕು, ಎಂದು ತಿಳಿಸಿದರು,

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಅಪೌಷ್ಟಿಕತೆಯಿಂದ ರಕ್ತಹೀನತೆ ಉಂಟಾಗುತ್ತದೆ, ರಕ್ತಹೀನತೆಯಿಂದ ಅಪೌಷ್ಟಿಕ ಮಕ್ಕಳು ಜನಿಸುವರು, ನಂತರ ಒಂದೊಂದೆ ಸಮಸ್ಯೆ ಉಂಟಾಗಿ ಸಾವು ಸಂಭವಿಸುತ್ತದೆ ಇದನ್ನು ತಪ್ಪಿಸಲು ಗರ್ಭಿಣಿ ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಬೇಕು, ಸಿರಿ ಧಾನ್ಯಗಳನ್ನು ಹೆಚ್ಚಾಗಿ ಬಳಸಿ ಆಹಾರ ತಯಾರಿಸಿ, ಮತ್ತು ಸೊಪ್ಪು, ಬೇಳೆ ಕಾಳುಗಳನ್ನು ಸೇರಿಸಿ ರೊಟ್ಟಿ, ಚಪಾತಿ ತಯಾರಿಸಿ ಮಕ್ಕಳಿಗೆ ನೀಡಿ ಎಂದು ತಿಳಿಸಿದರು,
ನಂತರ ಆರು ತಿಂಗಳ ಮಕ್ಕಳಿಗೆ ಅನ್ನ ಪ್ರಾಶನ ಮಾಡಲಾಯಿತು, ಹಾಗೆ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ನಡೆಸಿ ಕೊಟ್ಟರು, ಹುಟ್ಟು ಹಬ್ಬ ವಿರುವ ಮಕ್ಕಳಿಗೆ ಶುಭಾಶಯ ಕೋರಲಾಯಿತು, ಹಾಗೆ
ಸಿ.ಡಿ.ಪಿ.ಒ ಶ್ರೀ ಎಳೆ ನಾಗಪ್ಪ ಮತ್ತು ಶಾಲೆಯ ಮುಖ್ಯ ಗುರುಗಳಾದ ಹೆಚ್.ಎಮ್ ಮಂಗಮ್ಮ,ಹಾಗೂ ಬಿ.ಹೆಚ್.ಇ.ಒ ಶಿವಪ್ಪ ಅವರಿಗೆ ಸನ್ಮಾನ ಮಾಡಿದರು, ಕಾರ್ಯಕ್ರಮವನ್ನು ಶಿಕ್ಷಕ ಪ್ರಕಾಶ್ ನಡೆಸಿ ಕೊಟ್ಟರು,

ಈ ಸಂದರ್ಭದಲ್ಲಿ ಕುರೇಕುಪ್ಪ ಪುರಸಭೆಯ ಏಳನೇ ವಾರ್ಡಿನ ಅಬ್ದುಲ್ ಕರೀಂ, ಹತ್ತನೇ ವಾರ್ಡಿನ ಕೆ ನಾಗರಾಜ್, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಮಾಬುನ್ನು, ಅರುಣ, ಶಾಲ ಪೂರ್ವ ಶಿಕ್ಷಣ ಅಧಿಕಾರಿ ಕೊಟ್ರಪ್ಪ,ನಾಗೇಶ, ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here