ಹೂಡೇಂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ “ರೈತ ಕ್ಷೇತ್ರ ಪಾಠಶಾಲೆ ಮಾಹಿತಿ ಕಾರ್ಯಕ್ರಮ”.!

0
150

ವಿಜಯನಗರ:ಆಗಸ್ಟ್:21: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ “ರೈತ ಕ್ಷೇತ್ರ ಪಾಠಶಾಲೆ ಮಾಹಿತಿ ಕಾರ್ಯಕ್ರಮ” ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಅಭಿವೃದ್ಧಿ ಸಂಘದ ಕೃಷಿ ಮೇಲ್ವಿಚಾರಕರಾದ ಮಹಾಲಿಂಗಯ್ಯ ಅವರು ಮಾತನಾಡಿ. ನಮ್ಮ ಸಂಸ್ಥೆಯ ಮುಖಾಂತರ ಸಾಕಷ್ಟು ಕೃಷಿಗೆ ಒತ್ತನ್ನು ಕೊಡಬೇಕೆಂದು ಮಾನ್ಯ ಶ್ರೀ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಯಾಕಂದರೆ ನಮ್ಮ ರಾಜ್ಯದಲ್ಲಿ ಕೃಷಿ ಪ್ರಧಾನವಾಗಿರುವಂತ ರಾಜ್ಯ ಅತಿ ಹೆಚ್ಚಾಗಿ ನಾವು ಕೃಷಿಗೆ ಒಲವನ್ನು ಮಾಡಬೇಕು. ಇವತ್ತು ನಮ್ಮ ರಾಜ್ಯದಲ್ಲಿ ನಾವು ನೋಡಬಹುದು ರೈತರು ಸಾಕಷ್ಟು ಕೃಷಿಯಲ್ಲಿ ನಷ್ಟ ಆಗುತ್ತಾರೆ. ಎಷ್ಟು ರೈತರು ಕೃಷಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಅದಕ್ಕಾಗಿ ನಮ್ಮ ಸಂಘದ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಮಾಡಲಾಗುವುದು.ಸಂಘದಿಂದ 5 ದಿನ ತರಬೇತಿ ಮಾಡಲಾಗುತ್ತೆ, ನಮ್ಮ ಸಂಘದ ಕಡೆಯಿಂದ ಕೃಷಿ ಹೊಂಡ, ಬೋರ್ವೆಲ್, ಪಂಪ್ಸೆಟ್, ಡ್ರಾಗನ್ ಬೆಳೆ, ಸೇರಿದಂತೆ ವಿವಿಧ ಬೆಳೆಗಳಿಗೆ ಸಬ್ಸಿಡಿ ಮುಖಾಂತರ ಕೊಡಲಾಗುತ್ತೆ. ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಮೇಲ್ವಿಚಾರಕರಾದ ರಂಗನಾಥ್ ಅವರು, ಹಾಗೂ ಟಿ ಲಕ್ಷ್ಮೀದೇವಿ ಸೇವಾ ಪ್ರತಿನಿಧಿ, ಜಯಮಾಲಾ, ನಾಗರತ್ನ, ಸುವರ್ಣಮ್ಮ, ಜಯಮ್ಮ, ಮಂಜಮ್ಮ, ಸೇರಿದಂತೆ ಸಂಘದ ಎಲ್ಲಾ ಸದಸ್ಯರುಗಳು, ರೈತರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here