ಅನಿಮಿಯ ಮುಕ್ತ ಭಾರತ ನಿರ್ಮಾಣ ಜಾಗೃತಿ ಕಾರ್ಯಕ್ರಮ.

0
595

ಸಂಡೂರು: ಜು:27: ರಕ್ತ ಹೀನತೆ ಮುಕ್ತ ರಾಷ್ಟ್ರ ನಿರ್ಮಾಣದೆಡೆ ಶಾಲಾ ಮಕ್ಕಳಿಗೆ ಪ್ರತಿ ವಾರಕ್ಕೊಮ್ಮೆ ಐರನ್ ಆಂಡ್ ಪೋಲಿಕ್ ಆಸಿಡ್ ಮಾತ್ರೆ ನೀಡಲು ಚಾಲನೆಯನ್ನು ನೀಡಲಾಯಿತು.

ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ “ಅನಿಮಿಯ ಮುಕ್ತ ಭಾರತ ನಿರ್ಮಾಣ” ಜಾಗೃತಿ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮಕ್ಕಳಲ್ಲಿ ಕಾಡುವ ಸಾಮಾನ್ಯ ನ್ಯೂನತೆ ಎಂದರೆ ಅದು ರಕ್ತಹೀನತೆ, ರಕ್ತಹೀನತೆ ತಡೆಯಲು ಸರ್ಕಾರ ಆರ್.ಕೆ.ಎಸ್.ಕೆ ಕಾರ್ಯಕ್ರಮದಡಿ ಶಾಲೆಗಳಲ್ಲೆ ಪ್ರತಿ ಸೋಮವಾರ ಮಧ್ಯಾಹ್ನ ಊಟದ ನಂತರ ತರಗತಿಯ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರತಿ ಮಗುವಿಗೂ ಮಾತ್ರೆಯನ್ನು ನುಂಗಿಸ ಬೇಕು, ಮಾತ್ರೆಯಿಂದ ಯಾವುದೆ ಅಡ್ಡ ಪರಿಣಾಮಗಳಿಲ್ಲ, ಇದರಿಂದ ಮಕ್ಕಳ ರಕ್ತಹೀನತೆ ದೂರ ಮಾಡಬಹುದು, ಒಂದನೇ ತರಗತಿಯಿಂದ ಐದನೇ ತರಗತಿ ವರಗೆ ಜೂನಿಯರ್ ಪಿಂಕ್ ಬಣ್ಣದ ಮಾತ್ರೆ, ಆರರಿಂದ ಹನ್ನೆರಡನೇ ತರಗತಿವರೆಗೆ ಲಾರ್ಜ್ ನೀಲಿ ಬಣ್ಣದ ಮಾತ್ರೆ ಪ್ರತ್ಯೇಕಿಸಲಾಗಿದೆ, ಮಕ್ಕಳು ತಪ್ಪದೇ ಮಾತ್ರೆ ಸೇವನೆ ಮಾಡಬೇಕು ಎಂದು ಅವರು ತಿಳಿಸಿದರು,

ಮಕ್ಕಳು ಸಹ ತಮ್ಮ ವೈಯಕ್ತಿಕ ಸುಚಿತ್ವದ ಕಡೆ ಹೆಚ್ಚು ಗಮನ ಕೊಡಬೇಕು, ಕೈಗಳನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಬೇಕು, ಊಟಕ್ಕೆ ಮೊದಲು, ಶೌಚಾಲಯದ ನಂತರ ತಪ್ಪದೇ ಸೋಪಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳ ಬೇಕು, ಮುಖ್ಯವಾಗಿ ರಕ್ತಹೀನತೆ ಅಪೌಷ್ಟಿಕತೆಯಿಂದ ಉಂಟಾಗುತ್ತದೆ, ರಕ್ತಹೀನತೆ ದೂರ ಮಾಡಲು ತರಕಾರಿ ಯುಕ್ತ ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ಬಿಸಿ ಊಟದಲ್ಲಿ ಇರುವ ತರಕಾರಿಗಳನ್ನು ಬಿಸಾಡ ಬಾರದು, ಮನೆಯಲ್ಲಿಯೂ ಕುಟುಂಬ ಭೋಜನ ಅಂದರೆ ಎಲ್ಲರೂ ಒಟ್ಟಿಗೆ ಕುಳಿತು ಸಹ ಭೋಜನ ಮಾಡುವ ಅಭ್ಯಾಸವನ್ನು ಮಾಡಬೇಕು, ಹೀಗೆ ಮಾಡಿದರೆ ಸಮ ತೋಲಿತ ಆಹಾರ ಎಲ್ಲರಿಗೂ ಲಭಿಸುವುದು ಎಂದು ತಿಳಿಸಿದರು,

ಕಾರ್ಯಕ್ರಮವನ್ನು ಅರ್.ಕೆ.ಎಸ್.ಕೆ ಕೌನ್ಸಿಲರ್ ಪ್ರಶಾಂತ್ ನಡೆಸಿಕೊಟ್ಟರು, ಶಾಲೆಯ ಶಿಕ್ಷಕರು ಮಕ್ಕಳ ಕುರಿತು ಮಾತನಾಡಿದರು, ನಂತರ ಶಾಲೆಯ ಮುಖ್ಯಸ್ಥರಿಗೆ ಮಾತ್ರಗಳನ್ನು ವಿತರಿಸಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಅರ್.ಕೆ.ಎಸ್.ಕೆ ಕೌನ್ಸಿಲರ್ ಪ್ರಶಾಂತ್, ಶಾಲೆಯ ಶಿಕ್ಷಕರಾದ ನವಕುಮಾರ್, ರಜನಿ,ಜಯಶ್ರೀ, ಮಲ್ಲೇಶ್, ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಿ,ರೇಖಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here