ಮಡಿಕೇರಿ ನಗರಸಭೆ ; 170 ಲಕ್ಷ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಪ್ಪಚ್ಚು ರಂಜನ್ ಚಾಲನೆ

0
70

ಮಡಿಕೇರಿ ಜ.14:-ಪ್ರಸಕ್ತ ಸಾಲಿನ 15ನೇ ಹಣಕಾಸು ಆಯೋಗದಡಿ ಸುಮಾರು 148 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಮತ್ತು ನಗರಸಭಾ ನಿಧಿ ಆಯೋಗ ಅನುದಾನದಡಿ ಸುಮಾರು 111.72 ಲಕ್ಷ ರೂ. ಕಾಮಗಾರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ವಾರ್ಡ್ ನಂಬರ್ 2 ಭಗವತಿ ನಗರದ ಹೌಸಿಂಗ್ ಬೋರ್ಡ್‍ನಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.10 ರಲ್ಲಿ ಕಾಲೇಜು ರಸ್ತೆಯ ಐಡಿಬಿಐ ಬ್ಯಾಂಕ್ ಹತ್ತಿರ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.16 ರಲ್ಲಿ ಕುಮಾರವಿಲಾಸ ರಸ್ತೆಯ ಮೈಲಾರಿ ಹೋಟೆಲ್ ಮುಂಭಾಗ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.1 ರಲ್ಲಿ ವಿದ್ಯಾನಗರದ ಹೌಸಿಂಗ್ ಬೋರ್ಡ್‍ನಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ವಾರ್ಡ್ ನಂಬರ್ 8 ರಲ್ಲಿ ಮಾರುಕಟ್ಟೆ ಬಳಿ ರಾಣಿಪೇಟೆ ಸಂಪರ್ಕ ಕಲ್ಪಿಸುವ ರಸ್ತೆ ಪಾದಚಾರಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.6 ರ ಕನ್ನಂಡ ಬಾಣೆ ಪಂಪ್‍ಹೌಸ್ ಹಿಂಭಾಗ ಫುಟ್‍ಪಾತ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.14 ರಲ್ಲಿ ಜಿ.ಟಿ.ಶಾಲೆ ಮುಂಭಾಗ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.15 ರಲ್ಲಿ ದೇಚೂರಿನ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಹಿಂಭಾಗ ಪಾದಚಾರಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ವಾರ್ಡ್ ನಂ.09ರ ಕಾನ್ವೆಂಟ್ ರಸ್ತೆಯಿಂದ ರಾಣಿಪೇಟೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೀಕ್ಷಾ ಪ್ಯಾಬ್ರಿಕೇಷನ್ ಹತ್ತಿರ ಕಲ್ವರ್ಟ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.13 ರಲ್ಲಿ ಡಾ.ನಾರಾಯಣ ಅವರ ಮನೆಯಿಂದ ದೇವಯ್ಯ ಮನೆವರೆಗೆ ಚರಂಡಿ ನಿರ್ಮಾಣ, ವಾರ್ಡ್ ನಂ.23 ರ ಅಶೋಕ್‍ಪುರಂನಲ್ಲಿ ರೋಟರಿ ಕ್ಲಬ್ ಮುಂಭಾಗ ಚರಂಡಿ ನಿರ್ಮಾಣ, ವಾರ್ಡ್ ನಂ20 ರಲ್ಲಿ ಜ್ಯೋತಿ ನಗರದಲ್ಲಿ ಚರಂಡಿ ನಿರ್ಮಾಣ.
ಹಾಗೆಯೇ ಮೂರ್ನಾಡು ರಸ್ತೆಯಲ್ಲಿ ಸಾರ್ವಜನಿಕ ಬಸ್ ನಿಲ್ದಾಣ ಕಾಮಗಾರಿ, ಮಡಿಕೇರಿ ನಗರಸಭೆ ವ್ಯಾಪ್ತಿಯ ಅಗ್ನಿ ಶಾಮಕ ಕಚೇರಿ ಎದುರುಗಡೆ ಸ್ಮಶಾನ ನಿರ್ಮಾಣ ಕಾಮಗಾರಿ, ಸಂಪಿಗೆ ಕಟ್ಟೆ ರಸ್ತೆ ಬಳಿ ಅಂಗನವಾಡಿ ದುರಸ್ತಿ ಕಾಮಗಾರಿ, ವಾರ್ಡ್ ನಂ.23 ರಲ್ಲಿ ಎಲ್‍ಇಡಿ ಬೀದಿ ದೀಪ ಅಳವಡಿಸುವ ಕಾಮಗಾರಿ ಹೀಗೆ ಸುಮಾರು 59.2 ಲಕ್ಷ ರೂ. ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಹಾಗೆಯೇ ನಗರಸಭಾ ನಿಧಿ ಆಯೋಗದ ಅನುದಾನದಡಿ ವಾರ್ಡ್ ನಂ.1 ರ ವಿದ್ಯಾನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ವಾರ್ಡ್ ನಂ.2ರ ಭಗವತಿ ನಗರದ ಹೌಸಿಂಗ್ ಬೋರ್ಡ್‍ನಲ್ಲಿ ಮರುಡಾಮರೀಕರಣ ಕಾಮಗಾರಿ, ವಾರ್ಡ್ ನಂ.5 ರಲ್ಲಿ ಸಿಸಿ ರಸ್ತೆ ನಿರ್ಮಾಣ, ವಾರ್ಡ್ ನಂ.6 ರ ಕನ್ನಂಡ ಬಾಣೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ವಾರ್ಡ್ ನಂ.10 ರಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.11 ರಲ್ಲಿ ಫುಟ್‍ಪಾತ್ ನಿರ್ಮಾಣ, ವಾರ್ಡ್ ನಂ.12 ರಲ್ಲಿ ಇಂಟರ್ ಲಾಕ್ ನಿರ್ಮಾಣ, ವಾರ್ಡ್ ನಂ.13 ರಲ್ಲಿ ತಡೆಗೋಡೆ ನಿರ್ಮಾಣ, ವಾರ್ಡ್ ನಂ.14 ರಲ್ಲಿ ಪಿಡಬ್ಲ್ಯುಡಿ ಕ್ವಾರ್ಟಸ್ ಹಿಂಭಾಗ ಚರಂಡಿ ನಿರ್ಮಾಣ, ವಾರ್ಡ್‍ನಂ. 15 ರಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.18 ರಲ್ಲಿ ಕಲ್ವರ್ಟ್ ನಿರ್ಮಾಣ, ವಾರ್ಡ್ ನಂ.19 ರಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ.20 ರಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.22 ರಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ವಾರ್ಡ್ ನಂ.23 ರಲ್ಲಿ ಸೇತುವೆ ನಿರ್ಮಾಣ, ವಾರ್ಡ್ ನಂ.3 ರಲ್ಲಿ ಮೆಟ್ಟಿಲು ನಿರ್ಮಾಣ, ವಾರ್ಡ್ ನಂ.4 ರಲ್ಲಿ ತಡೆಗೋಡೆ ನಿರ್ಮಾಣ, ವಾರ್ಡ್ ನಂ.7 ಮತ್ತು 8 ರಲ್ಲಿ ಚರಂಡಿ ನಿರ್ಮಾಣ, ವಾರ್ಡ್ ನಂ.09 ರಲ್ಲಿ ತಡೆಗೋಡೆ ನಿರ್ಮಾಣ, ವಾರ್ಡ್ ನಂ.16 ರಲ್ಲಿ ಸಿಸಿ ರಸ್ತೆ ನಿರ್ಮಾಣ, ವಾರ್ಡ್ ನಂ.17 ರಲ್ಲಿ ರಸ್ತೆ ಮರು ಡಾಮರೀಕರಣ, ವಾರ್ಡ್ ನಂ.21 ರಲ್ಲಿ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಡಿಕೇರಿ ನಗರ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರದ ವಿವಿಧ ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿದ್ದು ಸರಿಪಡಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ 15ನೇ ಹಣಕಾಸು ಆಯೋಗದಡಿ ಹಾಗೂ ನಗರಸಭಾ ನಿಧಿಯಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಎಲ್ಲಾ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಪೌರಾಯುಕ್ತರಾದ ವಿಜಯ, ಎಂಜಿನಿಯರ್ ಶಮಂತ್ ಕುಮಾರ್, ವಿವಿಧ ವಾರ್ಡ್‍ನ ನಗರಸಭಾ ಸದಸ್ಯರು ಇತರರು ಇದ್ದರು.

LEAVE A REPLY

Please enter your comment!
Please enter your name here