ಆಯುರ್ವೇದ ಪ್ರಕಾರ ಎಳ್ಳು-ಬೆಲ್ಲ ತಿಂದಾಗ ದೇಹದಲ್ಲಿ ಏನಾಗುತ್ತೆ ಗೊತ್ತೇ?

0
106

ಮಕರ ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲಕ್ಕೆ ತುಂಬಾನೇ ಮಹತ್ವವಿದೆ. ಮಕರ ಸಂಕ್ರಾಂತಿಯ ಪ್ರಮುಖ ತಿನಿಸು ಎಂದರೆ ಎಳ್ಳು-ಬೆಲ್ಲ. ಎಳ್ಳು ಬೆಲ್ಲ ತಿನ್ನಿ ಬಾಯಿ ತುಂಬಾ ಸಿಹಿ ಮಾತನಾಡಿ ಎಂದು ಹೇಳಲಾಗುವುದು. ನಮ್ಮ ಹಿರಿಯರು ತಂದಿರುವ ಆಚರಣೆಗಳು, ಪದ್ಧತಿಗಳ ಹಿಂದೆ ವೈಜ್ಞಾನಿಕ ಕಾರಣ ಕೂಡ ಇದೆ. ಮಕರ ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಬಳಸುವುದರ ಹಿಂದೆ ಕೂಡ ಆರೋಗ್ಯದ ಕಾಳಜಿ ಇದೆ. ಮಕರ ಸಂಕ್ರಾಂತಿಯಿಂದ ಉತ್ತಾರಾಯಣ ಕಾಲ ಪ್ರಾರಂಭವಾಗುವುದು. ಡಿಸೆಂಬರ್‌ನಿಂದ ಫೆಬ್ರವರಿ ತಿಂಗಳವರೆಗೆ ಚಳಿಗಾಲವಿರುತ್ತದೆ. ಈ ಚಳಿಗಾಲದಲ್ಲಿ ಈ ಕಾಲಕ್ಕೆ ಸೂಕ್ತವಾದ ಆಹಾರ ಬಳಸಿದರೆ ಆರೋಗ್ಯ ವೃದ್ಧಿಸುತ್ತದೆ, ಅಂಥ ಆಹಾರಗಳಲ್ಲಿ ಎಳ್ಳು ಹಾಗೂ ಬೆಲ್ಲ ಕೂಡ ಹೌದು.

ಆಯುರ್ವೇದದಲ್ಲಿ ಚಳಿಗಾಲದಲ್ಲಿ ಎಳ್ಳು-ಬೆಲ್ಲ ತಿನ್ನುವುದರಿಂದ ದೊರೆಯುವ ಪ್ರಯೊಜನಗಳ ಬಗ್ಗೆ ವಿವರಿಸಲಾಗಿದೆ ನೋಡಿ:

ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ
ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ
ಮಕರ ಸಂಕ್ರಾಂತಿಯಿಂದ ಉತ್ತರಾಯಣ ಕಾಲ ಪ್ರಾರಂಭ, ಅಂದರೆ ಸೂರ್ಯ ನಮಗೆ ಸ್ವಲ್ಪ ಸಮೀಪವಾಗುವುದು. ಆಗ ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಎಳ್ಳು ಸಹಕಾರಿ. ಬೆಲ್ಲದಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶ ಇರುವುದರಿಂದ ರೋಗ ನಿರೋಧಕ ಶ್ತಿಯನ್ನು ವೃದ್ಧಿಸುತ್ತದೆ.

ಎಳ್ಳು ಬೆಲ್ಲ ತಿನ್ನುವುದರಿಂದ ಚಯಪಚಯ ಕ್ರಿಯೆಗೆ ಸಹಕಾರಿ

ಎಳ್ಳಿನಲ್ಲಿರುವ ಪ್ರೊಟೀನ್ ಹಾನಿಗೊಳಗಾದ ಸ್ನಾಯುಗಳನ್ನು ಸರಿಪಡಿಸುತ್ತದೆ, ಅಲ್ಲದೆ ಚಯಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತದೆ.

ರಕ್ತ ಸಂಚಾರಕ್ಕೆ ಸಹಕಾರಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯ ಸಮಸ್ಯೆ ಮತ್ತಿತರ ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ, ಆದರೆ ಎಳ್ಳು ತಿಂದರೆ ರಕ್ತವನ್ನು ಶುದ್ಧೀಕರಿಸಿ, ರಕ್ತ ಸಂಚಲನ ಚೆನ್ನಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಎಳ್ಳು
ಎಳ್ಳನ್ನು ಆಯುರ್ವೇದ ಚಿಕಿತ್ಸೆಯಲ್ಲಿ ತುಂಬಾ ಬಳಸಲಾಗುವುದು. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಎಳ್ಳೆಣ್ಣೆ ಬಳಸಲಾಗುವುದು. ಎಳ್ಳೆಣ್ಣೆಯಿಂದ ಅನೇಕ ಆಯುರ್ವೇದ ಔಷಧಗಳನ್ನು ಕೂಡ ತಯಾರಿಸಲಾಗುವುದು. ಮೊದಲೆಲ್ಲಾ ಹಸುವಿನ ಹಾಲು ತುಂಬಾ ಪೌಷ್ಠಿಕಾಂಶದಿಂದ ಕೂಡಿರಬೇಕು, ಆ ಹಾಲಿನಿಂದ ಮಾಡುವ ತುಂಬಾ ಸಮೃದ್ಧಿ ಪೋಷಕಾಂಶಗಳ ಜೊತೆಗೆ ತುಂಬಾ ರುಚಿಕರವಾಗಿರಬೇಕೆಂದು ಹಸುವಿನ ಹಿಂಡಿ ಜೊತೆಗೆ ಎಳ್ಳು ಹಿಂಡಿ ಕೂಡ ನೀಡಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಹಸುಗಳಿಗೆ ಕಡಲೆ ಕಾಯಿಯ ಹಿಂಡಿ ನೀಡಲಾಗುವುದು. ಇದರಿಂದಾಗಿ ಹಸುವಿನ ಹಾಲಿನ ಗುಣಮಟ್ಟ ಕೂಡ ಕಡಿಮೆಯಾಗುತ್ತಿದೆ.

ವಾತ ದೋಷ-ಕಫ ದೋಷ ನಿವಾರಣೆ ಮಾಡುತ್ತದೆ

ಎಳ್ಳೆಣ್ಣೆ ದೇಹವನ್ನು ಆರೈಕೆ ಮಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಎಳ್ಳೆಣ್ಣೆ ಬಳಸುವುದರಿಂದ ವಾತ ಹಾಗೂ ಪಿತ್ತ ದೋಷ ತಡೆಗಟ್ಟಬಹುದು. ಇದು ತ್ವಚೆಯನ್ನು ನುಣಪಾಗಿ ಹಾಗೂ ಕಾಂತಿಯುತದಿಂದ ಹೊಳೆಯುವಂತೆ ಮಾಡುತ್ತದೆ.

ಅನಿಯಮಿತ ಮುಟ್ಟಿನ ಸಮಸ್ಯೆ ಹೋಗಲಾಡಿಸುತ್ತೆ

ಆಯುರ್ವೇದದಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಹೋಗಲಾಡಿಸಲು ಎಳ್ಳು ಬಳಸಿ ಮಾಡಿದ ಪುಡಿ, ಕಷಾಯ ಇವುಗಳನ್ನು ನೀಡಲಾಗುವುದು. ಎಳ್ಳು ತಿನ್ನುವುದರಿಂದ ಅನಿಯಮಿತ ಮುಟ್ಟು ತಡೆಗಟ್ಟಿ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುತ್ತದೆ.

ಎಳ್ಳು ಜೊತೆ ಬೆಲ್ಲದ ಪಾತ್ರವೇನು? ಬೆಲ್ಲದ ಜೊತೆಗೆ ಎಳ್ಳು ತಿಂದಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಏನೇ ಆಗಲಿ ಬಿಸಿಯಾಗಬೇಕೆಂದರೆ ಇಂಧನ ಬೇಕು. ದೇಹದಲ್ಲಿ ಬೆಲ್ಲ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ, ಬೆಲ್ಲ ತಿಂದ ಎಳ್ಳನ್ನು ಶಕ್ತಿಯಾಗಿ ಪರಿವರ್ತಿಸಿ ದೇಹದ ಆರೋಗ್ಯ ವೃದ್ಧಿಸುತ್ತದೆ.

ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಮನೆಯಲ್ಲಿಯೇ ಮಾಡುವುದು ಆರೋಗ್ಯಕರ
ಈಗ ಎಲ್ಲಾ ಆಹಾರಗಳು ರೆಡಿಮೇಡ್‌ ಸಿಗುತ್ತದೆ. ಎಳ್ಳು-ಬೆಲ್ಲ ಕೂಡ ಮಾರ್ಕೆಟ್‌ನಲ್ಲಿ ಸಿಗುತ್ತದೆ. ಆದರೆ ಅವುಗಳಲ್ಲಿ ಕೃತಕ ಬಣ್ಣಗಳನ್ನು ಸೇರಿಸಿದ ಸಕ್ಕರೆಯ ಉಂಡೆಗಳು ಕೂಡ ಇರುತ್ತದೆ. ಆದರೆ ಅವುಗಳು ಆರೋಗ್ಯಕರವಲ್ಲ. ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲ ತಿನ್ನುವ ಪ್ರಮುಖ ಉದ್ದೇಶ ಆರೋಗ್ಯ ವೃದ್ಧಿಸುವುದು. ಆದ್ದರಿಂದ ಎಳ್ಳು ಬೆಲ್ಲವನ್ನು ಆರೋಗ್ಯವಾಗಿಯೇ ತಿನ್ನಿ.

ಎಳ್ಳು ಬೆಲ್ಲ ಮಾಡುವ ವಿಧಾನ

ಬಿಳಿ ಎಳ್ಳು, ಅಚ್ಚು ಬೆಲ್ಲ, ಕೊಬ್ಬರಿ, ಹುರಿಗಡಲೆ, ಕಡ್ಲೆಕಾಯಿ ಬೀಜ, ಜೀರಿಗೆ ಪೆಪ್ಪರ್‌ಮೆಂಟ್, ಬಿಳಿ ಬತಾಸು ಇವುಗಳನ್ನು ಮಿಶ್ರ ಮಾಡಿ ಒಂದು ಡಬ್ಬದಲ್ಲಿ ಹಾಕಿಟ್ಟರೆ ಒಂದು ತಿಂಗಳವರೆಗೆ ಬಳಸಬಹುದು.

ವಿಜಯಕರ್ನಾಟಕ.
ರೀನಾ . ಟಿ ‌.ಕೆ

LEAVE A REPLY

Please enter your comment!
Please enter your name here