ವಿಧಾನಸಭಾ ಚುನಾವಣೆ-2023; ಪ್ರಥಮ ಹಂತದ ಪರಿಷ್ಕರಣೆ ಆರಂಭ; ಇವಿಎಂ, ವಿವಿಪ್ಯಾಟ್ ಮತಯಂತ್ರಗಳ ಪರಿಷ್ಕರಣೆ ಕೈಗೊಂಡ ಜಿಲ್ಲಾಧಿಕಾರಿ ಟಿ.ವೆಂಕಟೇಶ್

0
158

ಹೊಸಪೇಟೆ(ವಿಜಯನಗರ),ಜ.18: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಥಮ ಹಂತದ ಪರಿಷ್ಕರಣೆಯನ್ನು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಕೈಗೊಂಡರು.
ಬುಧವಾರದಂದು ಚುನಾವಣೆಗೆ ಸಂಬಂಧಿಸಿದ ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಒಟ್ಟು 1219 ಮತಕೇಂದ್ರಗಳಿಗೆ ಪೂರೈಸಲಾಗುವ ಇವಿಎಂ ಹಾಗೂ ವಿವಿಪ್ಯಾಟ್ ಮತಯಂತ್ರಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಕೆ. ಇದ್ದರು.
ಮತದಾರರ ಒಟ್ಟು ಅಂಕಿ ಅಂಶ
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10,68,913 ಮತದಾರರ ಪೈಕಿ 5,35,480 ಜನ ಪುರುಷ ಮತದಾರರು, 5,33,292 ಜನ ಮಹಿಳಾ ಮತದಾರರು ಹಾಗೂ 141 ಜನ ಇತರೆ ಮತದಾರರಿದ್ದಾರೆ.
ಯುವ ಮತದಾರರ ಅಂಕಿ ಅಂಶ:
ಮತದಾರರ ಸಂಕ್ಷಿಪ್ತ ಪರಿಷ್ಕರಣೆ ನಂತರ ಯುವ ಮತದಾರರ ನೋಂದಣಿಯ ವಿವರವನ್ನು ಬಿಡುಗಡೆ ಮಾಡಲಾಗಿದ್ದು, 5 ವಿಧಾನಸಭಾ ಕ್ಷೇತ್ರಗಳಲ್ಲಿ 11,693 ಯುವಕರು, 9567 ಯುವತಿಯರು ಹಾಗೂ ಇಬ್ಬರು ಇತರೆ ಯುವಮತದಾರರು ನೋಂದಣಿ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here