ಉಜ್ಜಿನಿ ಗ್ರಾಮದ, 1 ಮತ್ತು 2 ನೇ ವಾರ್ಡ್ ನಲ್ಲಿ ”ನಿಗೂಢ” ಕಾಮಗಾರಿ ಪತ್ತೆ!

0
826

ವಿಜಯನಗರ/ಕೊಟ್ಟೂರು:ಮೇ:18:- ತಾಲೂಕಿನ ಉಜ್ಜಿನಿ ಗ್ರಾಮದ 1 ಮತ್ತು 2 ನೇ ವಾರ್ಡ್ ನಲ್ಲಿ ನಿಗೂಢ ಕಾಮಗಾರಿ ಪತ್ತೆಯಾಗಿದೆ ಸಾರ್ವಜನಿಕರಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲು ಕೈಗೊಳ್ಳಲಾದ ಕಾಮಗಾರಿಯ ನೀರಿನ ಪೈಪ್ ಗಳು ರಸ್ತೆ ಒಳಗಡೆಯಿಂದ ರಸ್ತೆ ಮೇಲೆ ಬಂದಿವೆ. ಇದರ ರಭಸಕ್ಕೆ ಅಲ್ಲಲ್ಲಿ ರಸ್ತೆ ಕೂಡಾ ಸಡಿಲಗೊಂಡಿದೆ. ಇದರಿಂದ ಗ್ರಾಮದ ಜನರು ಕೂಡಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪಿ.ಡಿ.ಓ ಕೂಡಾ ಪತ್ರಿಕೆ ಪ್ರಶ್ನೆಗೆ, ನಾನು ಪರಿಶೀಲಿಸಿದಾಗ ಪೈಪ್ ಗಳು ರಸ್ತೆ ಒಳಗಡೆಯೇ ಇದ್ದವು ಅವು ಹೇಗೆ ಮೇಲೆ ಬಂದವು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಅದು ಏನೇ! ಆಗಲಿ ಇಂತಹ ನಿಗೂಢ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಗ್ರಾಮದ ಜನರಿಗೆ ಸತ್ಯಾಂಶ ತಿಳಿಸುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡಲು ಮುಂದಾಗಬೇಕು ಎಂಬುದು ಗ್ರಾಮದ ಜನರ ಕಳಕಳಿಯಾಗಿದೆ.

ನಾನು ಕೂಡಾ ಈ ಕಾಮಗಾರಿ ಪರಿಶೀಲಿಸಿದ್ದೇನೆ. ಅದು ಹೇಗೆ? ರಸ್ತೆ ಒಳಗಡೆಯಿಂದ ಮೇಲಕ್ಕೆ ಬರಲು ಸಾಧ್ಯ ನಾನು ನೋಡಿದಾಗ ಆ ರೀತಿ ಏನೂ ಕಂಡು ಬಂದಿಲ್ಲ ಮತ್ತೊಮ್ಮೆ ಪರಿಶೀಲಿಸಿ ಅದು ಏನಾಗಿದೆ ಎಂದು ನೋಡ್ತೇವೆ. ನಂತರ ಈ ಗೊಂದಲವನ್ನು ಸರಿಪಡಿಸುತ್ತೇವೆ. ಎಂದು ತಸ್ಲಿಂ ಬಾನು ಉಜ್ಜಿನಿ ಗ್ರಾಮ ಪಂಚಾಯತಿ ಪಿ.ಡಿ.ಓ ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here