ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘ(TUCI) ದಿಂದ ಮುಷ್ಕರ; ತಹಸೀಲ್ದಾರ್ ಗೆ ಮನವಿ

0
394

ಸಂಡೂರು:28:ಮಾ:- ಪಟ್ಟಣದಲ್ಲಿ ಇಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಮಾರ್ಚ್ 28,29 ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಬಾಗವಾಗಿ ಟಿಯುಸಿಟಿ ಹಾಗೂ ಬಳ್ಳಾರಿ ಗಣಿ ಕಾರ್ಮಿಕ ಸಂಘ, ಹಾಗೂ ಎನ್ ಎಂ ಡಿ ಸಿ ಭದ್ರತಾ ಸಿಬ್ಬಂದಿ ಕಾರ್ಮಿಕರ ಸಂಘ ದೋಣಿಮಲೈ ಮುಷ್ಕರಕ್ಕೆ ಬೆಂಬಲ ಸೂಚಿಸುವುದರೊಂದಿಗೆ, ಕಾರ್ಮಿಕ ವಿರೋಧಿ, ಕಾರ್ಪೊರೇಟ್ ಪರವಾದಂತಹ 4 ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದಹಿಸುವುದರ ಮೂಲಕ ಹೋರಾಟದಲ್ಲಿ ಪಾಲ್ಗೊಂಡು ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆರಿದ ಕ್ಷಣಗಳಿಂದ ರೈತ, ಕಾರ್ಮಿಕರನ್ನೊಳಗೊಂಡು ಪ್ರತಿಯೊಬ್ಬ ನಾಗರಿಕರಿಕರಿಗೆ ಬಾರೀ ಸಂಕಷ್ಟದ ದಿನಗಳು ಎದುರಾಗುತ್ತಲಿವೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವುದರ ಮೂಲಕ ರೈತರ ಬಾಳಿಗೆ ಗೋರಿ ತೋಡಿದೆ, ಹಾಗೆಯೇ ಕಾರ್ಮಿಕರು ಹೋರಾಡಿ ಪಡೆದಂತಹ 44 ಕಾರ್ಮಿಕ ಕಾನೂನುಗಳನ್ನು ತಿರಸ್ಕರಿಸಿ ಕೇವಲ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಇದರಿಂದಾಗಿ ಕಾರ್ಪೊರೇಟ್ ಕಂಪನಿಗಳಿಗೆ 4 ಕಾರ್ಮಿಕ ಸಂಹಿತೆಗಳು ಪರವಾಗಿ ಪರಿಣಮಿಸಿದೆ. ಸಾರ್ವರ್ತಿಕ ವಲಯದ ಎಲ್ಲಾ ಕಂಪನಿ/ಸಂಸ್ಥೆ/ಪ್ಯಾಕ್ಟರಿ ಸೇರಿದಂತೆ ಸೇವಾ ವಲಯಗಳನ್ನು ಖಾಸಗೀಕರಣಗೊಳಿಸಲಾಗಿದೆ.12 ಗಂಟೆ ಕೆಲಸದ ಅವಧಿಯ ಮೂಲಕ ಕಾರ್ಮಿಕರನ್ನು ಜೀತಗಾರರನ್ನಾಗಿ ಮಾಡಲಾಗಿದೆ. ಬೆಳಗಾದರೆ ಸಾಕು ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಗಳು ಜನ ಸಾಮಾನ್ಯರ ಬದುಕಿನ ಮೇಲೆ ಪ್ರವಾಹದಂತೆ ಅಪ್ಪಳಿಸುತ್ತಿವೆ. ಇದರಿಂದ ಕಡುಬಡವರು ಸೇರಿದಂತೆ ಕಾರ್ಮಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ದಿನಗೂಲಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿಯು ಸಿಗದೆ, ಜೀವನ ನಡೆಸಲು ಕಣ್ಣೀರು ಹಾಕುತ್ತಿದ್ದಾರೆ. ಕಾರಣ ಮಾನ್ಯ ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ, ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಕಾರ್ಮಿಕರ ಬೇಡಿಕೆಗಳು:-
◆ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಕೇಂದ್ರ ಕಾರ್ಮಿಕ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ಕೂಡಲೇ ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಪರಿಹಾರ ಕೊಡಿಸಬೇಕು.
◆ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರಿಗೆ ಆರ್ ಅಂಡ್ ಆರ್ ಯೋಜನೆ ಅಭಿವೃದ್ಧಿ ನಿಗಮದಲ್ಲಿ ಪರಿಹಾರ ನೀಡಬೇಕು
◆ರಾಜ್ಯ ಸರ್ಕಾರ ಅಧೀನದಲ್ಲಿರುವ ಗಣಿ ಪುನಚ್ಚೆತನ ನಿಗಮಗಳನ್ನು ಕೂಡಲೇ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಬೇಕು.
◆ಬಳ್ಳಾರಿ ಜಿಲ್ಲೆಯಲ್ಲಿ ಪುನರ್ ಆರಂಭವಾದ ಗಣಿಯಲ್ಲಿ ಕೇಂದ್ರ ಕಾರ್ಮಿಕ ಕಾಯ್ದೆ ಪ್ರಕಾರ ಹಳೇ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು
◆ಎನ್ ಎಂ ಡಿ ಸಿ ಭದ್ರತಾ ಸಿಬ್ಬಂದಿಗಳನ್ನು ಕೂಡಲೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು
◆ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ನಿಲ್ಲಿಸಿ ಮತ್ತು ರಾಷ್ಟ್ರೀಯ ಹಣಗಳಿಕೆಯ ಪೈಪ್ ಲೈನ್ ನ್ನು ಹಿಂತೆಗೆದುಕೊಳ್ಳಬೇಕು.
◆ನಾಲ್ಕು ಲೇಬರ್ ಕೋಡ್ ಗಳನ್ನು ಮತ್ತು 12 ಗಂಟೆಗಳ ಕೆಲಸದ ದಿನವನ್ನು ರದ್ದುಗೊಳಿಸಬೇಕು
◆ಮುಚ್ಚಿದ ಕೈಗಾರಿಕೆಗಳನ್ನು ಪುನಾರಂಭಿಸಬೇಕು
◆ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಯೋಜನೆಗಳನ್ನು ಪುನಚ್ಚೆತನಗೊಳಿಸಬೇಕು.
◆ಸರಕು, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಳೆಗಳನ್ನು ನಿಯಂತ್ರಣದಲ್ಲಿಡಬೇಕು.
◆ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ ಮತ್ತು ಉದ್ಯೋಗ ಒದಗಿಸಬೇಕು.
◆ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು
◆ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ವೇತನ 26 ಸಾವಿರ ಹಾಗೂ ಕನಿಷ್ಠ ಪಿಂಚಣಿ 10 ಸಾವಿರ ರೂ ನೀಡಬೇಕು. ಹೊಸ ಪಿಂಚಣಿ ಯೋಜನೆಯನ್ನು ಹಿಂಪಡೆಯಬೇಕು
◆ 2020 ರ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು
◆ಮಹಾರಾಷ್ಟ್ರ ಮಾದರಿಯಂತೆ ಹಮಾಲರಿಗೆ ಪ್ರತ್ಯೇಕವಾಗಿ ಮಂಡಳಿಯನ್ನು ಸ್ಥಾಪನೆ ಮಾಡಬೇಕು.ಕಾರ್ಮಿಕರ ಮೇಲಿನ ದೇಶದ್ರೋಹ ಯುಎಪಿಎ ಇತ್ಯಾದಿ ಕಪ್ಪು ಕಾನೂನುಗಳನ್ನು ರದ್ದುಗೊಳಿಸಬೇಕು.

ಈ ಸಂಧರ್ಭದಲ್ಲಿ ಸತೀಶ್ ಎಂ, ಆನಂದ್, ಸಿದ್ದಪ್ಪ, ಗಂಗಪ್ಪ, ರಾಜಭಕ್ಷಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here