ಆಕರ್ಷಿಸಿದ ಜಾನಪದ ಕಲಾ ವೈಭವ.

0
195

ಕೊಟ್ಟೂರು:ಜ:18:- ಪಟ್ಟಣದ ಹೆಮ್ಮೆಯ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸುವರ್ಣ ಸಂಭ್ರಮ ಮಹೋತ್ಸವದ ನಿಮಿತ್ತ ಜಾನಪದ ಸೊಗಡಿನ ಕಲಾ ತಂಡಗಳ ವೈಭವದ ಮೆರವಣಿಗೆ ಕೊಟ್ಟೂರು ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆಯಿಂದ ಆರಂಭಗೊಂಡು ನೋಡುಗರನ್ನು ಆಕರ್ಷಿಸಿತು.
ಸಮಾಳ ವಾದ್ಯದವರ ಆರ್ಭಟ, ಆಕರ್ಷಕ ನಂದಿಕೋಲು, ಮಹಿಳಾ ಡೊಳ್ಳು, ಕರಗ ಕುಣಿತದ ಕಲಾವಿದರುಗಳು ಹುಮ್ಮಸ್ಸಿನಿಂದ ಕುಣಿದಾಡುತ್ತಿರುವುದು ಪ್ರತಿಯೊಬ್ಬರಲ್ಲಿ ರೋಮಾಂಚನ ತರಿಸಿತು. ವೀರಗಾಸೆ, ಹುಲಿವೇಶ, ಚಂಡಿ ಮದ್ದಾಳೆ, ಗೊಂಬೆ ಕುಣಿತ, ಹುಲಿಕುಣಿತ ಮತ್ತಿತರ ಸುಮಾರು ಹತ್ತು ಜಾನಪದ ತಂಡಗಳು ತಮ್ಮ ನೈಪುಣ್ಯದ ಪ್ರತಿಭೆಯನ್ನು ಮೆರವಣಿಗೆಯುದ್ದಕ್ಕೂ ಆನಾವರಣಗೊಳಿಸಿ ಮೆರವಣಿಗೆಯಲ್ಲಿದ್ದ ಪ್ರತಿಯೊಬ್ಬರಲ್ಲಿ ಹುರುಪು ತಂದರು. ಇಲ್ಲಿನ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಜಾನಪದ ಸೊಗಡಿನ ಕಲಾ ವೈಭವ ಮೆರವಣಿಗೆ ಸುಮಾರು ನಾಲ್ಕು ತಾಸುಗಳವರೆಗೂ ನಡೆದು ಕೊಟ್ಟೂರೇಶ್ವರ ಮಹಾವಿದ್ಯಾಲಯವನ್ನು ತಲುಪಿತು.
ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ್, ಆಡಳಿತ ಮಂಡಳಿ ಸದಸ್ಯರಾದ, ಅಡಿಕಿ ಮಂಜುನಾಥ, ಹುಡೇದ್ ಮೃತ್ಯುಂಜಯ, ಕೋರಿಬಸವರಾಜ್, ಅವಂತಿ ಬಸವರಾಜ್, ಉತ್ತಂಗಿ ಕೊಟ್ರಗೌಡ, ಮಠಪತಿ ಮಂಜುನಾಥ, ಹಡಗಲಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಕ್ಕಿ ಶಿವಕುಮಾರ ಪ್ರಾಚಾರ್ಯರರುಗಳಾದ ಶಾಂತಮೂರ್ತಿ ಬಿ ಕುಲಕರ್ಣಿ, ಎಂ.ಹೆಚ್. ಪ್ರಶಾಂತ್ ಕುಮಾರ, ನಿವೃತ್ತ ಪ್ರಾಚಾರ್ಯ ಪರ್ವತೀಕರ್ ಎನ್.ಸಿ.ಸಿ ಅಧಿಕಾರಿ ಬಸವರಾಜ್, ಸೇರಿದಂತೆ ಉಪನ್ಯಾಸಕರು ಮತ್ತಿತರರು ಭರ್ಜರಿ ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here