ಬಳ್ಳಾರಿ ಉತ್ಸವದಲ್ಲಿ ಆರೋಗ್ಯ ಸೇವೆಗಳ ಮಾಹಿತಿ ನೀಡುವ ಸ್ಟಾಲ್ ಸಿದ್ದತೆ,

0
385

ಬಳ್ಳಾರಿ:ಜ:21: ನಗರದಲ್ಲಿ 21 ರಿಂದ 22 ರವರೆಗೆ ಜರುಗಲಿರುವ ಪ್ರಪ್ರಥಮ ಬಳ್ಳಾರಿ ಉತ್ಸವದ ಸಿದ್ದತೆಗಳು ಬರದಿಂದ ಸಾಗಿವೆ, ಉತ್ಸವಕ್ಕೆ ಆಗಮಿಸುವ ಪ್ರೇಕ್ಷಕರಿಗೆ ಆರೋಗ್ಯ ಇಲಾಖೆಯಿಂದ ಸಿಗುವ ಸೇವಾ ಸೌಲಭ್ಯಗಳ ಮಾಹಿತಿಯನ್ನು ಒದಗಿಸುವ ಸ್ಟಾಲ್ ತೆರೆಯಲಾಗಿದೆ,

ಕ್ಷಯರೋಗ ಮುಕ್ತ ಭಾರತ, ನಿಕ್ಷಯಮಿತ್ರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಅಭಾಕಾರ್ಡ್, ಕುಟುಂಬ ಕಲ್ಯಾಣ ಯೊಜನೆಗಳು, ಸುರಕ್ಷಿತ ಮಾತೃತ್ವ ಅಭಿಯಾನ, ನಮ್ಮ ಕ್ಲಿನಿಕ್, ಪ್ಲೋರೋಸಿಸ್ ನಿಯಂತ್ರಣ, ತಾಯಿಯ ಎದೆ ಹಾಲಿನ ಮಹತ್ವ, ಶಾರೀರ ಶಾಸ್ತ್ರ ಮಾಹಿತಿ, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ, ಲಾರ್ವಾ ಉತ್ಪತ್ತಿ ನಿಯಂತ್ರಣ ಮತ್ತು ಇತರೆ ಕಾರ್ಯಕ್ರಮ ಮತ್ತು ತಂಬಾಕಿನ ಹಾನಿ ಮತ್ತು ಆರೋಗ್ಯ ಕೇಂದ್ರಗಳು ರಚನೆಯ ಮಾಡೆಲ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ, ಈ ಎಲ್ಲಾ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮಾಹಿತಿ ನೀಡಿದರು,
ಇದಲ್ಲದೆ ಎನ್.ಸಿ.ಡಿ ಕ್ಲಿನಿಕ್ ತೆರೆಯಲಾಗಿದೆ, ಇದರಲ್ಲಿ ಬಿ.ಪಿ ಮತ್ತು ಶುಗರ್ ಪರೀಕ್ಷೆ ಮಾಡಲಾಗುತ್ತಿದೆ, ಹೆಲ್ತ್ ಕಾರ್ಡ್ ನೊಂದಣಿ ಮಾಡಲಾಗುತ್ತಿದೆ, ಹಾಗೂ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕಾಕರಣವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು,

ಸ್ಟಾಲ್ ನಲ್ಲಿ ಜಿಲ್ಲೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಪ್ಪ, ಮೊಹಮ್ಮದ್ ರಫಿ, ರಾಘವೇಂದ್ರ, ಶಾಂತಮ್ಮ, ಕೋಳೂರು ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಾದ ಪರಿಮಳ, ಮತ್ತು ಹುಲಿಗೆಮ್ಮ,ಪ್ರತ್ಯುಷ, ಮಹಾಲಕ್ಷ್ಮಿ,ಜೆ.ಕೆ ಲಕ್ಷ್ಮಿ,ಶೋಭಾ ಇತರರು ಮಾಹಿತಿ ನೀಡಲು ಉಪಸ್ಥಿತರಿದ್ದಾರೆ ಎಂದು ಅವರು ತಿಳಿಸಿದರು,

ಆರೋಗ್ಯ ಮಾಹಿತಿ ಮಳಿಗೆಯನ್ನು ಆರೋಗ್ಯ ಉತ್ಸವದ ಅಧ್ಯಕ್ಷರಾದ ಬಳ್ಳಾರಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ ಅವರು ಉದ್ಘಾಟಿಸಿದರು, ನಗರ ಪಾಲಿಕೆಯ ಮಹ ಪೌರರಾದ ಪೂಜ್ಯ ಶ್ರೀಮತಿ ಎಂ. ರಾಜೇಶ್ವರಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here