ವಚನ ಸಾಹಿತ್ಯ 12ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದ ಬಹುಭಾಗ ಪ್ರದೇಶವನ್ನು ವ್ಯಾಪಿಸಿತ್ತು.

0
272

ಕೊಟ್ಟೂರು
12ನೇ ಶತಮಾನದಲ್ಲಿ ವಚನ ಸಾಹಿತ್ಯ ಅನುಭವ ಮಂಟಪದಲ್ಲಿ ಜನ್ಮತಾಳಿ ಮನುಕುಲದ ಬದುಕಿಗೆ ಬೆಳಕಾಗುವ ಮೂಲಕ ಕನ್ನಡ ಸಾಹಿತ್ಯದ ಬಹುಭಾಗ ಪ್ರದೇಶವನ್ನು ವ್ಯಾಪಿಸಿತ್ತು ಎಂಬುದನ್ನು ಸಾಹಿತ್ಯ ಚರಿತ್ರೆ ಬಲ್ಲವರು ಮರೆಯಬಾರದು ಎಂದು ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಹಂಪಿ, ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಪ್ರೋ.ಕೆ.ರವೀಂದ್ರನಾಥ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಿವೃತ ಸರ್ಕಾರಿ ನೌಕರರ ಭವನದಲ್ಲಿ ಕೊಟ್ಟೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಮಹಾಮನೆ ಏರ್ಪಡಿಸಿದ್ದ ಲಿಂಗೈಕ್ಯ ಕಾಮಶೆಟ್ಟಿ ತಿಪ್ಪೇಸ್ವಾಮಿ ದತ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಹಿಂದೆ ಶರಣರು ವೃತ್ತಿ ಆಧಾರಿತವಾಗಿ ಜಾತಿಯನ್ನು ವ್ಯವಸ್ಥೆ ಹೇಳುತ್ತಿದ್ದರು ಆದರೆ ಇಂದು ವಿದ್ಯಾವಂತರಲ್ಲಿಯೇ ಹೆಚ್ಚಾಗಿ ಜಾತಿವ್ಯವಸ್ಥೆ ತಾಂಡವಾಡುತ್ತಿದೆ ಇದು ದೂರವಾಗಬೇಕು ಎಂದರು.

ಕೊಟ್ಟೂರು ಶರಣರು ನಡೆದಾಡಿದ ಪುಣ್ಯ ಭೂಮಿ ಮತ್ತು ಸಮಸಮಾಜ ನಿರ್ಮಾಣ ಕಂಡ ಕ್ಷೇತ್ರ ಇಲ್ಲಿ ಸಂಸ್ಕಾರ, ಸಂಸ್ಕೃತಿ ಸದಾ ನೆಲೆಸಿದೆ ಹಾಗೆ ಅಖಂಡ ಕೂಡ್ಲಿಗಿ ತಾಲೂಕು ವಿದ್ವತ್ ಪರಂಪರೆಗೆ ಹೆಸರಾಗಿರುವಂತದ್ದು ಇಲ್ಲಿ ದತ್ತಿ ಕಾರ್ಯವಲ್ಲದೆ ಮುಂದಿನ ದಿನಗಳಲ್ಲಿ ವಚನ ಸಾಹಿತ್ಯ ಸಮ್ಮೇಳನ ನಡೆಸುವ ಚಿಂತನೆ ನಡೆಯಬೇಕು ಎಂದರು.

ಕೆ.ಮಂಜುನಾಥ ಅವರು ಲಿಂಗೈಕ್ಯ ಕಾಮಶೆಟ್ಟಿ ತಿಪ್ಪೇಸ್ವಾಮಿ ಅವರು ತಮ್ಮ ಜೀವಿತವದಯಲ್ಲಿ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಶರಣರ ನುಡಿಯಂತೆ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸದಾ ಸಮಾಜದ ಕಾಳಜಿ ಉಳ್ಳವರು ಮತ್ತು ಶಿಸ್ತಿನ ಶಿಕ್ಷಕರು ಆಗಿ ಕಾರ್ಯನಿರ್ವಹಿಸಿದರು ಎಂದು ಸ್ಮರಿಸುತ್ತ ಉಪನ್ಯಾಸ ನೀಡಿದರು.

ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸಿದ್ಧಲಿಂಗಪ್ಪ,ಕೊಟ್ಟೂರು ತಾಲೂಕು ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷರು ದೇವರ ಮನಿ ಕರಿಯಪ್ಪ, ಹಾಲಯ್ಯ ,ಎನ್.ಎಂ ರವಿಕುಮಾರ ಮುಂತಾದವರು ಮಾತನಾಡಿದರು.

ಚಂದ್ರಶೇಖರ ಪ್ರಾಸ್ತಾವಿಕ ನುಡಿಗಳನ್ನಾಡಿದರು,ಡಾ.ಕೆ.ಶಿವಪ್ರಸಾದ್ ಸ್ವಾಗತಿಸಿದರು,ಕೆ.ಟಿ.ಸಿದ್ದರಾಮೇಶ್ ನಿರೂಪಿಸಿದರು, ಡಾ.ಕೆ.ಮಲ್ಲಿಕಾರ್ಜುನ ವಂದಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣದ ಅನೇಕ ಶರಣ ಸಾಹಿತ್ಯ ಪರಿಷತ್ತ್ ಸದಸ್ಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here