ಚಪ್ಪರದಹಳ್ಳಿ’ ಗ್ರಾಮಸ್ಥರ ಬಹುದಿನಗಳ ಬೇಡಿಕೆ: ಪತ್ರಕರ್ತರ ಹೋರಾಟದ ಪ್ರತಿಫಲ.

0
319

ಕೊಟ್ಟೂರು:ಜೂನ್:29:-ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಪ್ಪರದಹಳ್ಳಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಹಾಗೂ ಪತ್ರಕರ್ತರ ಹೋರಾಟದ ಪ್ರತಿಫಲವಾಗಿ 2.15 ಸೆಂಟ್ಸ್ ಎಕರೆ ಜಾಗವನ್ನು ಗ್ರಾಮಸ್ಥರಿಂದ ಸರ್ಕಾರ ಖರೀದಿ ಮಾಡಿ ಚಪ್ಪರದಹಳ್ಳಿ ಗ್ರಾಮದ ಸಾರ್ವಜನಿಕರಿಗೆ ಸ್ಮಶಾನಕ್ಕೆ ಹಸ್ತಾಂತರ ಮಾಡಲಾಯಿತು.

ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಮಂಗಳವಾರ ಸ್ಮಶಾನವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ದಂಡಧಿಕಾರಿ ಎಂ.ಕುಮಾರಸ್ವಾಮಿಯವರು ಗ್ರಾಮದ ಸಾರ್ವಜನಿಕರ ಒತ್ತಾಯ ಹಾಗೂ ಪತ್ರಕರ್ತರ ನಿರಂತರ ಹೋರಾಟದ ಫಲವಾಗಿ ಇಂದು ಸ್ಮಶಾನವನ್ನು ಉದ್ಘಾಟಿಸುವ ಭಾಗ್ಯ ದೊರೆತಂತಾಯಿತು ಹೆಚ್ಚಿನದಾಗಿ ಈ ಬೇಡಿಕೆ ಕಾರ್ಯ ರೂಪಕ್ಕೆ ಬರಲು ಮಾನ್ಯ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೆಚ್ಚಿನ ಕಾಳಜಿ ಹಾಗೂ ಇವರ ಇಚ್ಛೆಯ ಮೇರೆಗೆ ಇದು ಬೇಗನೆ ಕಾರ್ಯ ರೂಪಕ್ಕೆ ಬರಲು ತುಂಬಾನೇ ಅನುಕೂಲವಾಯಿತು ಇಂತಹ ಅಧಿಕಾರಿಗಳ ಜೊತೆ ಕಾರ್ಯ ನಿರ್ವಹಿಸಲು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಉಜ್ಜಿನಿ ರುದ್ರಪ್ಪ ಮಾತನಾಡಿ ಸ್ಮಶಾನದ ವಿಚಾರವಾಗಿ ಗ್ರಾಮದ ಜನರ ಸ್ಥಿತಿ ತುಂಬಾ ಚಿಂತಜನಕವಾಗಿತ್ತು ಹೆಣವನ್ನು ಹೂಳಲು ಅಗತ್ಯ ಕೇಂದ್ರಸ್ಥಾನವಿಲ್ಲದ ಕಾರಣ ಯಾವ ಜಗದಲ್ಲಿ ಹೂಳುವುದು ಎಂದು ಗೊಂದಲ ಉಂಟಾಗಿತ್ತು ಈ ಕೆಟ್ಟ ಪರಿಸ್ಥಿತಿ ನೋಡಲಾಗದೆ ನಾವು ನಮ್ಮ ಪತ್ರಿಕ ಬಳಗದವರು ಸೇರಿ ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರಲಾಯಿತು ಈ ವಿಚಾರವಾಗಿ ಸ್ಪಂದಿಸಿದ ತಾಲೂಕು ಆಡೆಳಿತ ಹಾಗೂ ಜಿಲ್ಲಾ ಆಡೆಳಿತ ಸತತ ಪ್ರಯತ್ನ ದಿಂದ ಕಾರ್ಯ ರೂಪಕ್ಕೆ ಬರಲು ಮುಖ್ಯ ಕಾರಣವಾಯಿತು ಈ ಇಲಾಖೆಗೆ ನಮ್ಮ ಪತ್ರಿಕ ಬಳಗದವರಿಂದ ಹಾಗೂ ಗ್ರಾಮಸ್ಥರ ಪರವಾಗಿ ಅಭಿನಂದನೆ ಹೇಳಲು ಬಯಸುತ್ತೇವೆ ಎಂದರು

ವಾಸ್ತವಿಕವಾಗಿ ಮಾತನಾಡಿದ ಸಿ.ಕೊಟ್ರೇಶ, ಪತ್ರಕರ್ತರು ರೂಪ ಸುರೇಶ್ ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ ಸದಸ್ಯ. ಕೊಟ್ರೇಶ್, ವೇದಿಕೆ ಮೇಲೆ ಇದ್ದರು ಪ್ರಾರ್ಥನೆ ವೀರೇಶ್, ಓಬಳೇಶ್ ಸ್ವಾಗತಿಸಿ ವಂದಿಸಿದರು,

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here