ಬಿಜೆಪಿ ಪಕ್ಷಕ್ಕೆ ದಕ್ಷಿಣ ರಾಜ್ಯದ ಮೇಲೆ ಪ್ರೀತಿ ಇಲ್ಲ

0
93

ಬಳ್ಳಾರಿ: ಪೆ:02: ಬಿಜೆಪಿಗೆ ದಕ್ಷಿಣ ರಾಜ್ಯದ ಮೇಲೆ ಪ್ರೀತಿ ಇಲ್ಲ ಒಂದಿಷ್ಟು ತೋರಿಕೆಯ ಕೊಡುಗೆ ಕೊಟ್ಟು, ಇನ್ನೊಂದಷ್ಟು ಕನ್ನಡಿ ಒಳಗಿನ ರೀತಿ ಮೂಗಿಗೆ ತುಪ್ಪ ಸವರಿದ ಹಾಗೆ ಕೇಂದ್ರ ಸರ್ಕಾರದ ಈ ಆರ್ಥಿಕ ವರ್ಷದ ಬಜೆಟ್ ಇದೆ, ಕೆಲವೇ ತಿಂಗಳುಗಳ ನಂತರ ರಾಜ್ಯದಲ್ಲಿ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ರಾಜ್ಯಕ್ಕೆ ಕೇಂದ್ರ ಸರ್ಕಾರ ಭರಪೂರ ಕೊಡುಗೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಜನರು ಇದ್ದರು. ಆದರೆ, ಕೇಂದ್ರದಿಂದ ನಯಾ ಪೈಸೆಯ ಕೊಡುಗೆ ರಾಜ್ಯಕ್ಕೆ ಸಿಕ್ಕಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೊಟಿ ರೂ. ಅನುದಾನ ಘೋಷಣೆಮಾಡಿದ್ದು ಬಿಟ್ಟರೆ ಇನ್ನೇನು ಕೊಡುಗೆ ರಾಜ್ಯಕ್ಕೆ ದೊರಕಿಲ್ಲ.

ಈ ಹಿಂದೆ ಬಿಹಾರ, ಉತ್ತರ ಪ್ರದೇಶ ಮುಂತಾದ ಚುನಾವಣೆಗಳ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮಂಡನೆ ಆದಾಗ ಬಿಜೆಪಿ ಸರ್ಕಾರದ ಬಜೆಟ್‌ನಲ್ಲಿ ಭರ್ಜರಿ ಅನುದಾನ ಒದಗಿಸುವ, ವಿಶೇಷ ಯೋಜನೆಗಳನ್ನು ಕೊಡಲಾಗುತ್ತಿತ್ತು. ಆದರೆ, ಕರ್ನಾಟಕದ ವಿಷಯದಲ್ಲಿ ಕೇಂದ್ರ ಇಂತಹ ನಿರೀಕ್ಷೆ ಹುಸಿ ಮಾಡಿದೆ. ಈ ಮೂಲಕ ಬಿಜೆಪಿಯ ಗಮನದಲ್ಲಿ ಕೇವಲ ಉತ್ತರ ಭಾರತದ ರಾಜ್ಯಗಳ ಅಭಿವೃದ್ಧಿ ಮಾತ್ರ ಇದೆ. ದಕ್ಷಿಣದ ರಾಜ್ಯಗಳು ಅಲ್ಲ ಎಂಬುದನ್ನು ಸಾಬೀತು ಮಾಡಿದೆ.

ಇನ್ನು ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ. ಇದು ಬಹು ದೊಡ್ಡ ಯೋಜನೆ ಆಗಿದೆ. ಇದರ ಯೋಜನಾ ವೆಚ್ಚ ಇರುವುದು 21 ಸಾವಿರದ 473 ಕೋಟಿ ರೂ. ಅನುದಾನ ಬೇಕು. ಬಿಜೆಪಿ ನಾಯಕರು ಈ ಹಿಂದೆ ಹೇಳಿಕೆ ನೀಡಿದ್ದರ ಆಧಾರದಲ್ಲಿ ಇಡೀ ಯೋಜನೆಗೆ ಬೇಕಾದ ಅನುದಾನವನ್ನು ನೀಡಲು ಮುಂದಾಗಬಹುದು ಎಂದು ಎಣಿಸಲಾಗಿತ್ತು. ಆದರೆ, ಹುಸಿಯಾಗಿದೆ.
ಇನ್ನು ಉಳಿದಂತೆ ಆದಾಯ ತೆರಿಗೆ ಮೇಲಿನ ವಿನಾಯಿತಿಯನ್ನು 7 ಲಕ್ಷ ರೂ.ಗೆ ಏರಿಸಿದ್ದರಿಂದ ಬಹು ದೊಡ್ಡ ಪ್ರಯೋಜನ ಏನೂ ಆಗದು. ಕೊರೊನಾ ನಂತರ ತಲಾ ಆದಾಯದಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಹೀಗಾಗಿ ಇದರ ಪ್ರಯೋಜನ ದೊಡ್ಡ ಪ್ರಮಾಣದ ಜನರಿಗೆ ಸಿಗದು.
ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಜಂಟಿ ಸಂಯೋಜಕರಾದ ವೆಂಕಟೇಶ್ ಹೆಗಡೆ, ವಕೀಲರು ಹೇಳಿದರು.

LEAVE A REPLY

Please enter your comment!
Please enter your name here