ಎನ್ ಎಂ ಡಿ ಸಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನಿಯಮಬಾಹಿರವಾಗಿ ಕೆಲಸದಿಂದ ವಜಾ ಗೊಳಿಸಿರುವುದರ ಬಗ್ಗೆ, ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದಿಂದ ಸಂಡೂರು ತಹಶೀಲ್ದಾರ್ ಗೆ ಮನವಿ.

0
537

ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಅಪ್ ಇಂಡಿಯಾ (TUCI) ಹಾಗೂ ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕ ಸಂಘದಿಂದ ತಹಶೀಲ್ದಾರ್ ಹೆಚ್. ಜೆ. ರಶ್ಮಿ ಯವರಿಗೆ ದಿನಾಂಕ;01.07.2021 ರಂದು NMDC ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ಕೆಲಸದಿಂದ ನಿಯಮಬಾಹಿರವಾಗಿ ವಜಾ ಮಾಡಿರುವುದರ ಬಗ್ಗೆ ಮನವಿಪತ್ರವನ್ನು ಸಲ್ಲಿಸಲಾಯಿತು,

ತಾಲೂಕಿನ NMDC ಕಂಪನಿಯಲ್ಲಿ 2011ರಲ್ಲಿ 74 ಜನ ಸೆಕ್ಯೂರಿಟಿ ಗಾರ್ಡ್ ಗಳನ್ನು ಗುತ್ತಿಗೆ ಆಧಾರದಲ್ಲಿ ಟೌನ್ ಶಿಪ್, ಪೈಲಟ್ ಪ್ಲಾಂಟ್ ಹಾಗೂ ಲೋಡಿಂಗ್ ಪ್ಲಾಂಟ್ ಮತ್ತು ಇತರೆ ಜಾಗಗಳಲ್ಲಿ ನೇಮಿಸಿಕೊಂಡಿದ್ದರು, NMDC ಆಡಳಿತ ಮಂಡಳಿಯು ಧಿಡೀರನೇ 01.07.2021 ರಂದು ಕೆಲಸದಿಂದ ವಜಾ ಮಾಡಿದ್ದಾರೆ ಎಂದು ಸೂಚನೆ ನೀಡಿದ್ದಾರೆ

ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಂ ಸತೀಶ್ ತಹಶೀಲ್ದಾರ್ ರವರಿಗೆ ಮನವಿಪತ್ರವನ್ನು ಸಲ್ಲಿಸಿ ಮಾತನಾಡುತ್ತ…. NMDC ಯಲ್ಲಿನ ಕೆಲ ಕಾರ್ಮಿಕರ ಸಂಘದ ಮುಖ್ಯಸ್ಥರ ಲಾಭಕ್ಕಾಗಿ ಇವರುಗಳನ್ನು ವಜಾ ಮಾಡಿದೆ ಹಾಗೂ NMDC ಯು ಡಿ.ಜಿ.ಆರ್. ಹೋಮ್ ಗಾರ್ಡ್ ನೌಕರರ ಕೆಲಸವನ್ನು ರದ್ದುಗೊಳಿಸಬೇಕು,
ಆದ್ದರಿಂದ 2011 ರಿಂದ ಇಲ್ಲಿಯವರೆಗೆ ಸುಮಾರು 11 ವರ್ಷಗಳ ಕಾಲ 2019 ರ ಕರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿಯೂ ಇವರು ಉತ್ತಮ ಸೇವೆ ಸಲ್ಲಿಸಿರುತ್ತಾರೆ, ಇವರ ಮಕ್ಕಳ ಶಿಕ್ಷಣ ಮತ್ತು ಕುಟುಂಬದ ನಿರ್ವಹಣೆ ಇವರ ಮೇಲೆ ಅವಲಂಬಿತವಾಗಿದ್ದು ಕಾರ್ಮಿಕರನ್ನು ಧಿಡೀರನೇ ಯಾವುದೇ ಮೂನ್ಸೂಚನೆ ನೀಡದೇ ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದುಹಾಕಿದ್ದರೆ, ಕಾರ್ಮಿಕರ ಜೀವನ ಹಾಗೂ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತದೆ ಅದಕ್ಕಾಗಿ NMDC ಯ ಆಡಳಿತ ಮಂಡಳಿಯು ಕೂಡಲೇ ಮಾನ್ಯ ತಹಶೀಲ್ದಾರ್ ರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಕಾರ್ಮಿಕರ ಆಯುಕ್ತರನ್ನು 6 ದಿನಗಳ ಒಳಗೆ ತಾಲೂಕು ಕಚೇರಿಯಲ್ಲಿ ಸಂಧಾನ ಸಭೆಯ ಮೂಲಕ ಕೆಲಸವನ್ನು ಮುಂದುವರೆಸುವಂತೆ ಹಾಗೂ ಒಂದು ವೇಳೆ ಸಭೆ ಕರೆಯದಿದ್ದರೆ ಸಂಡೂರಿನ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಒಂದು ದಿನಗಳ ಕಾಲ ಬಂದ್ ಮಾಡಲಾಗುತ್ತದೆ ಎಂದು ಮನವಿಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸತೀಶ್, ಎ. ಆನಂದ್, ಹೆಚ್. ಬಿ.ಗಂಗಪ್ಪ ಪಂಪಾಪತಿ, ಸಿದ್ದಪ್ಪ, ಚೌಹಾಣ್, ಹಾಗೂ ಇತರಿರದ್ದರು

LEAVE A REPLY

Please enter your comment!
Please enter your name here