ಹೆಚ್ ಇ ಎಸ್ ಟಿಬಿ ಡ್ಯಾಮ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬಆಚರಣೆ

0
205

ಹೊಸಪೇಟೆ: ಪೆ:02:- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಚ್. ಇ.ಎಸ್. ಟಿಬಿ ಡ್ಯಾಮ್ ಶಾಲೆಯಲ್ಲಿ ತೆಲುಗು ಕ್ಲಸ್ಟರ್ ಮಟ್ಟದ ತೆಲುಗು ಮತ್ತು ತಮಿಳು ಮಾಧ್ಯಮದ ಕಲಿಕಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಕೊಟ್ರೇಶ್ ಜಿ ಚಾಲನೆಯನ್ನು ನೀಡಿದರು. ಮೆರವಣಿಗೆಯ ಮೂಲಕ ವಂಕಾ ಕ್ಯಾಂಪಿನಿಂದ ಶಾಲೆಗೆ ಆಗಮಿಸಿ ಉದ್ಘಾಟನಾ ಕಾರ್ಯಕ್ರಮವನ್ನು ಶಾಲೆಯಲ್ಲಿ ನೆರವೇರಿಸಲಾಯಿತು

ಈ ಸಂದರ್ಭದಲ್ಲಿ ಕಾರ್ಯಕ್ರಮದ ಹಿನ್ನೆಲೆ ಮತ್ತು ಕಾರ್ಯಕ್ರಮದ ಪರಿಣಾಮವನ್ನು ಮನಮುಟ್ಟುವಂತೆ ಉಪನಿರ್ದೇಶಕರು ತಿಳಿಸಿದರು ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಬಸಪ್ಪ ಮಾತನಾಡಿ ಶಾಲೆಗಳ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ಬಿಡುಗಡೆಯಾಗಿರುವ ಶುಭ ಸುದ್ದಿಯನ್ನ ಪ್ರಸ್ತಾಪಿಸಿದರು. ಈ ಕಾರ್ಯಕ್ರಮಕ್ಕೆ ಆಲಿ ಸಾಬ್, ಆರ್ ವೆಂಕಟರಾವ್, ಪ್ರಭಾಕರನ್, ಗೋವಿಂದರಾಜ ಮುಂತಾದ ಗಣ್ಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here