ಕೊಟ್ಟೂರು ಪೊಲೀಸರ ಭರ್ಜರಿ ಕಾರ್ಯಾಚರಣೆ., ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ, 18,905 ಕೆ.ಜಿ ಪಡಿತರ ಅಕ್ಕಿ ವಶಕ್ಕೆ

0
404

ದಿನಾಂಕ: 13/02/2023 ರಂದು, ಮಾನ್ಯ ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೊಟ್ಟೂರು ಠಾಣಾ ವ್ಯಾಪ್ತಿಯ ಲಾರಿ ಹಾಗೂ ಮಿನಿ ಲಗೇಜು ವಾಹನಗಳಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ, ಪಿ.ಎಸ್.ಐ ಕೊಟ್ಟೂರು ಹಾಗೂ ಸಿಬ್ಬಂದಿ ಮತ್ತು ಆಹಾರ ನಿರೀಕ್ಷಕರು ಕೊಟ್ಟೂರುರವರು ಕೊಟ್ಟೂರು ಪಟ್ಟಣದ ವಿವಿಧ ಕಡೆ (ಹನುಮಾನ್ ಸಾಮೀಲ್ ಹತ್ತಿರ ಹಾಗೂ ಈದ್ದಾ ಮೈದಾನದ ಹತ್ತಿರ) ದಾಳಿಮಾಡಿ, ಲಾರಿ, ಮಿನಿ ಲಗೇಜು ವಾಹನ ಮತ್ತು 18,905 ಕೆ.ಜಿ ಪಡಿತರ ಅಕ್ಕಿ (ಅಂದಾಜು ಬೆಲೆ 10,41,061/-ರೂಪಾಯಿಗಳು) ಯನ್ನು ಜಪ್ತಿ ಮಾಡಿರುತ್ತಾರೆ. ಆರೋಪಿತರನ್ನು ದಸ್ತಗಿರಿ ಮಾಡಿ ಕರ್ನಾಟಕ ಅಗತ್ಯ ವಸ್ತುಗಳ ಕಾಯಿದೆ (ಇಸಿ ಆಕ್ಟ್) ಅಡಿ ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡುದ್ದು, ತನಿಖೆ ಮುಂದುವರೆಸಲಾಗಿರುತ್ತದೆ ಎಂದು ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here