ಜಿಂದಾಲ್ ಎನರ್ಜಿ ಪ್ಲಾಂಟ್ ನಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ,

0
31

ಸಂಡೂರು:ಜೂ:28:- ಜಿಂದಾಲ್‌ ಎನರ್ಜಿ ಪ್ಲಾಂಟ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೊಶ, ಜಿಲ್ಲಾ ಎನ್.ಸಿ.ಡಿ ವಿಭಾಗ ಬಳ್ಳಾರಿ, ಮತ್ತು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಅಂಗವಾಗಿ ಬಾಯಿ ಆರೋಗ್ಯ ಕುರಿತು ಜಾಗೃತಿ ಮತ್ತು ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು,

ಈ ಸಂದರ್ಭದಲ್ಲಿ ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ವಿಶಾಲಾಕ್ಷಿ ಅವರು ಮಾತನಾಡಿ ಬಾಯಿ ಆರೋಗ್ಯದ ಬಗ್ಗೆ ನಿಷ್ಕಾಳಜಿ ಒಳ್ಳೆಯದಲ್ಲ, ಬಾಯಿ ರೋಗಗಳನ್ನು ಆಹ್ವಾನಿಸುವ ದ್ವಾರ ಇದ್ದಹಾಗೆ, ಬಾಯಿಯನ್ನು ಸ್ವಚ್ಛವಾಗಿ ಇಟ್ಟು ಕೊಳ್ಳಬೇಕು, ನಾವು ಸೇವಿಸಿದ ಆಹಾರ ಪಚನವಾಗಲು ರಸಗ್ರಂಥಿಗಳ ಆರೋಗ್ಯವೂ ಅಷ್ಟೇ ಮುಖ್ಯ, ತಂಬಾಕು ಸೇವನೆ ಒಳ್ಳೆಯದಲ್ಲ, ಹಲವಾರು ರಾಸಾಯನಿಕಗಳು ಕ್ಯಾನ್ಸರ್ ಕಾರಕವಾಗಿವೆ, ಕಾರ್ಮಿಕರು ತಮ್ಮ ಎನರ್ಜಿಗಾಗಿ ತಂಬಾಕು ಜಗಿವುದು ಬೇಸರದ ಸಂಗತಿ, ಆಗಾಗ ಜಾಗೃತಿ ಕಾರ್ಯಕ್ರಮಗಳು ನಡೆಯಲಿ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಪ್ಲಾಂಟ್ ನ ಉಪ ನಿರ್ದೇಶಕ ಕಾರ್ತಿಕೇಯ ಮಿಶ್ರ ಮಾತನಾಡಿ ತಂಬಾಕು ಸೇವನೆಯಿಂದ ಆರೋಗ್ಯ ಹಾಳು, ಹಣವೂ ಹಾಳು, ಯಾರೂ ತಂಬಾಕು ಸೇವನೆ ಮಾಡಬೇಡಿ ಎಂದು ತಿಳಿಸಿದರು, ಹೆಚ್.ಆರ್ ಮತ್ತು ಆಡಳಿತವರ್ಗ ವಿಭಾಗದ ಜೆನರಲ್ ಮ್ಯಾನೇಜರ್ ಪರ್ವೀನ್ ಕಟ್ಚೊ ಅವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡುವಂತೆ ತಿಳಿಸಿದರು, ಶಿಬಿರದಲ್ಲಿ ಒಟ್ಟು 79 ಜನರಿಗೆ ಆರೋಗ್ಯ ಬಾಯಿ ತಪಾಸಣೆ ಮತ್ತು ಬಿ.ಪಿ ಹಾಗೂ ಶುಗರ್ ಹಾಗೂ ಉಸಿರಾಟದ ಸಿ.ಒ ತಪಾಸಣೆ ಮಾಡಲಾಯಿತು,

ಈ ಸಂದರ್ಭದಲ್ಲಿ ಎನ್.ಸಿ.ಡಿ ವೈದ್ಯೆ ಡಾ.ಪ್ರಿಯಾಂಕಾ, ಒ.ಹೆಚ್.ಸಿ ವೈದ್ಯೆ ಡಾ.ಪ್ರೀತಿ ಲತಾ, ಬಿ.ಹೆಚ್.ಇ.ಒ ಶಿವಪ್ಪ, ಜಿಲ್ಲಾ ತಂಬಾಕು ಕೋಶದ ಸೋಸಿಯಲ್ ವರ್ಕರ್ ಭೋಜರಾಜ, ಮನೋಸಾಸ್ತ್ರಜ್ಞ ಮಲ್ಲೇಶಪ್ಪ,ಮೀನಾಕ್ಷಿ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ವೆಂಕಪ್ಪ, ಸಮುದಾಯ ಆರೋಗ್ಯ ಅಧಿಕಾರಿ ವಿಜಯಲಕ್ಷ್ಮಿ, ಉಮಾ, ತಂತ್ರಜ್ಞ ಇಮ್ರಾನ್, ರೋಜಾ ಮತ್ತು ಸಿದ್ದೇಶ ಇತರರು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here