ರಾಜ್ಯದ ಶಿಕ್ಷಣ ಇಲಾಖೆಗೆ ಮಾದರಿಯಾದ ಎಂ ತುಂಬರಗುದ್ದಿ ಸ.ಹಿ.ಪ್ರಾ.ಶಾಲೆ

0
1383

ಸಂಡೂರು:ಪೆ:15:ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಂ ತುಂಬರಗುದ್ದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಮತ್ತು ಇಚ್ಚಾಶಕ್ತಿಯಿಂದ ಜಿಲ್ಲೆ-ತಾಲೂಕು-ರಾಜ್ಯಕ್ಕೆ ಮಾದರಿಯಾಗಿ ಮಕ್ಕಳ ಹಾಗೂ ಪೋಷಕರ,ಸಾರ್ವಜನಿಕರ ಮತ್ತು ಇಲಾಖಾ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲೆಯಲ್ಲಿಮಕ್ಕಳಿಗೆ ಬಾಳೆಹಣ್ಣು ನೀಡುತ್ತಿರುವ ದೃಶ್ಯ

ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲು ಕಳೆದ ತಿಂಗಳಲ್ಲಿ ಆದೇಶ ನೀಡಿತ್ತು

ಅದರಂತೆ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಏಳು ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೂ ಹೌದು

ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಬಹುಪೋಷಕಾಂಶಗಳ ನ್ಯೂನತೆ ಕೊರತೆ ಇರುವುದು ಕಂಡುಬಂದಿದ್ದು. ಈ ಕಾರಣದಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಒಂದು ತಿಂಗಳಲ್ಲಿ 12 ಬೇಯಿಸಿದ ಮೊಟ್ಟೆ ಕೊಡುವ ಮೂಲಕ ಅವರಲ್ಲಿ ಪೌಷ್ಟಿಕತೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಮೊಟ್ಟೆ ತಿನ್ನಲು ನಿರಾಕರಿಸುವ ಮಕ್ಕಳಿಗೆ ಬಾಳೆಹಣ್ಣು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್. ವಿಶಾಲ್ ಆದೇಶ ಹೊರಡಿಸಿದ್ದಾರೆ.

ಆದೇಶದಂತೆ ವಾರದಲ್ಲಿ ಮೂರು ದಿನ ಪ್ರತಿಯೊಬ್ಬ ಮಗುವಿಗೂ 6 ರೂಪಾಯಿಯಂತೆ ನೀಡುತ್ತಿದ್ದು,ಮೊಟ್ಟೆ ತಿನ್ನುವವರಿಗೆ ಒಂದು ಮೊಟ್ಟೆ ಬಾಳೆಹಣ್ಣು ತಿನ್ನುವವರಿಗೆ ಒಂದು ಬಾಳೆಹಣ್ಣು ನೀಡುತ್ತಿದ್ದು, ಸಂಡೂರು ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಒಂದು ಮೊಟ್ಟೆ ಮತ್ತು ಒಂದು ಬಾಳೆಹಣ್ಣು ನೀಡುತ್ತಿದ್ದಾರೆ ಆದರೆ ತಾಲೂಕಿನ ಎಲ್ಲಾ ಶಾಲೆಗಳಿಗೆ ವಿಭಿನ್ನವಾಗಿ ಎಂ ತುಂಬರಗುದ್ದಿ ಶಾಲೆಯು ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಮೊತ್ತದಂತೆ ಮಕ್ಕಳಿಗೆ ಬಾಳೆಹಣ್ಣನ್ನು ನೀಡಲು ಮುಂದಾಗಿದ್ದಾರೆ, ಸ್ಥಳೀಯವಾಗಿ ಒಂದು ಬಾಳೆಹಣ್ಣು 2 ರಿಂದ 3 ರೂಪಾಯಿ ದರದಲ್ಲಿ ಸಿಗುತ್ತದೆ ಅದರಂತೆ ಸರ್ಕಾರ ಮಕ್ಕಳಿಗೆ ಕೊಡುವುದು 6 ರೂಪಾಯಿ, ಹಣವನ್ನು ಸಂಪೂರ್ಣವಾಗಿ ವಿನಿಯೋಗಿಕೊಳ್ಳುವಲ್ಲಿ ಎಂ ತುಂಬರಗುದ್ದಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ/ಕಿಯರು ಸೇರಿಕೊಂಡು ಸಫಲರಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ಸಿಬ್ಬಂದಿವರ್ಗದವರು ನಮ್ಮ ಶಾಲೆಯ ಮಕ್ಕಳು 2 ಬಾಳೆಹಣ್ಣು ತಿನ್ನಲಿ ಎಂದು ಒಬ್ಬ ಮಗುವಿಗೆ ಎರಡೆರಡು ಬಾಳೆಹಣ್ಣು ಕೊಡುತ್ತಿದ್ದಾರೆ,ಇದು ಜನಮೆಚ್ಚುವಂತಹ ಕೆಲಸ

ಇಂತಹ ಒಂದು ವಿನೂತನ ಕಾರ್ಯಕ್ಕೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ ಹಾಗೂ ಅಕ್ಷರ ದಾಸೋಹ ಮತ್ತು ಬಿಸಿಯೂಟ ಯೋಜನಾಧಿಕಾರಿ ತಿಪ್ಪೇಸ್ವಾಮಿ ಅವರುಗಳು ಎಂ ತುಂಬರಗುದ್ದಿ ಶಾಲೆಯ ಶಿಕ್ಷಕ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ಎಂ ತುಂಬರಗುದ್ದಿ ಶಾಲೆಯ ಸಿಬ್ಬಂದಿಯು ಮಾಡುತ್ತಿರುವ ಕೆಲಸ ಮಕ್ಕಳ ಹಾಗೂ ಜನಮೆಚ್ಚುಗೆಯನ್ನು ಪಡೆಯುತ್ತಿದ್ದೆ, ಇವರಂತೆ ತಾಲೂಕಿನ ಎಲ್ಲಾ ಶಾಲೆಗಳು ಸರ್ಕಾರ ಕೊಡುವ 6 ರುಪಾಯಿಯಲ್ಲಿ ಮಕ್ಕಳಿಗೆ 1 ಬಾಳೆಹಣ್ಣು ನೀಡಿ ಇನ್ನುಳಿದ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳದೆ ಮಕ್ಕಳಿಗಾಗಿ ಬಂಧತಹ 6 ರೂಪಾಯಿ ಹಣವನ್ನು ಮಕ್ಕಳಿಗಾಗಿ ಖರ್ಚು ಮಾಡಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಎರಡೆರಡು ಬಾಳೆಹಣ್ಣನ್ನು ನೀಡಿ ಮಕ್ಕಳ, ಪೋಷಕರ, ಮೆಚ್ಚುಗೆಗೆ ಪಾತ್ರವಾಗಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here