ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಚುನಾವಣಾ ರಣತಂತ್ರ

0
107

ಸಂಡೂರು: ಬಳ್ಳಾರಿಯ ಜಿಲ್ಲೆಯ ಸಂಡೂರಿನಲ್ಲಿ ಜರುಗಿದ ವಿಜಯ ಸಂಕಲ್ಪ ಸಮಾವೇಶದ ನಂತರ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಲು ರಣತಂತ್ರ ರೂಪಿಸಲು ಕರೆಯಲಾಗಿದ್ದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಕ್ಷದ ಮುಖಂಡರೊಡನೆ ಚರ್ಚೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಷಾ, ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಯಾಗಲು, 2-3 ಗ್ರಾಮಕ್ಕೊಂದು ಕ್ಲಸ್ಟರ್ ನಿರ್ಮಾಣ ಮಾಡಬೇಕು. ಶಾಸಕರು ಕ್ಲಸ್ಟರ್ ಮೂಲಕ ಜನರ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯುವ ಮೋರ್ಚ ಕಾರ್ಯಕರ್ತರು ಬೈಕ್ ಮೂಲಕ ಪ್ರಚಾರ ಮಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಕಲ್ಯಾಣ ಯೋಜನೆಗಳನ್ನು ಜನತೆಗೆ ತಿಳಿಸಬೇಕು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮೋರ್ಚ ತಂಡ ರಚನೆ ಮಾಡಬೇಕು. ಸ್ವಸಹಾಯ ಸಂಘ ಶ್ರೀಶಕ್ತಿ ಸಂಘಗಳನ್ನು ಭೇಟಿ ಮಾಡಿ ಸರ್ಕಾರ ಯೋಜನೆಗಳನ್ನು ತಿಳಿಸಬೇಕು ಎಂದರು.

ಕೋರ್ ಕಮಿಟಿ ಸಭೆಯಲ್ಲಿ ಕೆಆಗ್ನಿಪಿ ಪಕ್ಷದ ಬಗ್ಗೆ ಚರ್ಚೆ;

ಕೋರ್ ಕಮಿಟಿ ಸಭೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕುರಿತು ಚರ್ಚೆ ನಡೆಯಿತು. ಕೆ ಆರ್ ಪಿ ಪಕ್ಷದ ಬಗ್ಗೆ ಶಾಸಕ ಸೋಮಶೇಖರ್ ರೆಡ್ಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯಿಂದ ಪ್ರಸ್ತಾಪಿಸಿದರು. ಸೀರೆ ಹಾಗೂ ಹಣ ಹಂಚಿಕೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ತೊಂದರೆಯಾಗುತ್ತಿದೆ ಇದನ್ನು ಸರಿ ಪಡಿಸಿ ಅಂತಾ ಷಾ ಗೆ ಮನವಿ ಮಾಡಿದರು.

ಕೆಆರ್ ಪಿಪಿ ಪಕ್ಷದಿಂದ ನಮ್ಮ ಕ್ಷೇತ್ರದಲ್ಲಿ ಸಮಸ್ಯೆಯಾಗುತ್ತಿದೆ. ನನ್ನ ಸೊಸೆ ನನ್ನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅಮಿತ್ ಷಾಗೆ ತಿಳಿಸಿದರು. ಶಾಸಕರ ಮಾತನ್ನು ಸಮಾಧಾನದಿಂದ ಆಲಿಸಿದ ಷಾ, ಇದಕ್ಕೆ ನಾನಿರುವೆ ನಿಮ್ಮ ಸಮಸ್ಯೆ ಬಗೆಹರಿಸುವೆ. ನೀವು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಅಂತಾ ಅಮಿತ್ ಷಾ ತಿಳಿಸಿದರು.

ಅಮಿತ್ ಷಾ ಪಕ್ಷ ಸಂಘಟನೆ ಬಗ್ಗೆ ನಾಲ್ಕು ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬಳಿ ವಿಚಾರಿಸಿದರು. ಪ್ರತಿಯೊಬ್ಬರನ್ನು ಮಾತನಾಡಿಸಿ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಸಚಿವರಾದ ಆನಂದ್ ಸಿಂಗ್, ಶಶಿಕಲಾ ಜೊಲ್ಲೆ ರವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ತಿಳಿಸಿದರು. ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಚಿವರು,ಶಾಸಕರಿಗಳಿಗೆ ಈ ಸಂದರ್ಭದಲ್ಲಿ ಷಾ ತಾಖೀತು ಮಾಡಿದರು.

ಸಭೆಯಲ್ಲಿ ಅಮಿತ್ ಷಾ,ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ ಕರ್ನಾಟಕ ಉಸ್ತುವಾರಿ ಅರುಣ್, ಸಚಿವರುಗಳಾದ ಶ್ರೀರಾಮುಲು, ಆನಂದ್ ಸಿಂಗ್, ಸಂಸದರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here