ಕೈಗೆಟುಕುವ ಬೆಲೆಯಲ್ಲಿ ರೋಗಿಗಳಿಗೆ ಔಷಧಿ ಒದಗಿಸುತ್ತಿರುವ “ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಯೋಜನೆ” ಉತ್ತಮ ಯೋಜನೆಯಾಗಿದೆ: ಡಾ.ದೀಪಾ ಪಾಟೀಲ್,

0
750

ಸಂಡೂರು:ಮಾ:05:-ತಾಲೂಕಿನ ತೋರಣಗಲ್ಲು ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ “ಜನ ಔಷಧಿ ದಿನಾಚರಣೆಯ ಸಪ್ತಾಹ” ಅಂಗವಾಗಿ ಮಾತನಾಡಿದ ಅವರು ಬ್ರಾಂಡ್ ಹೆಸರಿಲ್ಲದೆ ಔಷಧಿಯ ಹೆಸರಿನ ಮೇಲೆ ಅತೀ ಕಡಿಮೆ ಧರದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ಸ್ಥಳೀಯ ಜನ ಔಷಧಿ ಕೇಂದ್ರಗಳಲ್ಲಿ ದೊರೆಯುತ್ತಿವೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಸದಿರುವ ಹಲವಾರು ಔಷಧಿಗಳನ್ನು ರೋಗಿಗಳು ಕಡಿಮೆ ದುಡ್ಡಿನಲ್ಲಿ ಖರೀದಿಸುವ ಅನುಕೂಲನ ಸರ್ಕಾರ ಮಾಡಿ ಕೊಡಲಾಗಿದೆ, ಜನರು ಇದರ ಸೌಲಭ್ಯ ಪಡೆದುಕೊಂಡು ಹಣ ಉಳಿತಾಯೊಂದಿಗೆ ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿ ಕೊಳ್ಳುವಂತೆ ಮನವಿ ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 2015 ರ 1ನೇ ಜುಲೈಯಿಂದ ಜಾರಿಯಲ್ಲಿರುವ ಜನ ಔಷಧಿ ಯೋಜನೆಯು ಕೋವಿಡ್ -19 ಸಮಯದ ಮೊದಲ ಲಾಕ್ ಡೌನ್ ಸಮಯದಲ್ಲಿ ರೋಗಿಗಳ ಮನೆ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸಿದ ಸಂದರ್ಭದಿಂದ ಈ ಜನ ಔಷಧಿ ಯೋಜನೆಯು ಹೆಚ್ಚು ಜನ ಪ್ರಿಯತೆಯನ್ನು ಪಡೆದು ಕೊಂಡಿದೆ, ಮಾರ್ಚ್ 1 ರಿಂದ 7 ರ ವರೆಗೆ ಜನ ಔಷಧಿ ದಿನಾಚರಣೆ ಯ ಸಪ್ತಾಹ ಆಚರಿಸಿ ಮಾಹಿತಿಯನ್ನು ಹೆಚ್ಚು ಜನರಿಗೆ ತಲುಪಿಸುವ ಕಾರ್ಯವನ್ನು ಇಲಾಖೆ ಹಮ್ಮಿಕೊಂಡಿದೆ ಜನರಿಗೆ ಜನ ಔಷಧಿ ಕೇಂದ್ರದ ಸೌಲಭ್ಯದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಡಾ.ದೀಪಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಕೇಂದ್ರದ ಸೂಪರಿಂಟೆಂಡೆಂಟ್ ಹರ್ಷ, ಲ್ಯಾಬ್ ತಂತ್ರಜ್ಞ ಅಧಿಕಾರಿ ವೆಂಕಟೇಶ್, ಆರೋಗ್ಯ ಸುರಕ್ಷಾಧಿಕಾರಿ ಬಸವರಾಜ, ಸಿಬ್ಬಂದಿ ಚಲುವರಾಜ, ಮಾಬುಸಾಬ್, ಮುಖಂಡರಾದ ಮಹಾರುದ್ರಪ್ಪ, ದೇವೇಂದ್ರಪ್ಪ, ರುದ್ರಯ್ಯ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here