ಪರಿಸರ ರಕ್ಷಣೆಗೆ ಕರಾವೇ ಅದ್ಯತೆ ನೀಡಲಿ – ಪ್ರಭು ಮಹಾಸ್ವಾಮಿಗಳು

0
11

ಸಂಡೂರು: ಏ: 6 :ಸಂಡೂರು: ಕರ್ನಾಟಕ ರಕ್ಷಣಾ ವೇದಿಕೆ( ಶ್ರೀಯುತ ಟಿ ಎ ನಾರಾಯಣ ಗೌಡ ಬಣದ) ಸಂಡೂರು ತಾಲೂಕು ನೂತನ ಅಧ್ಯಕ್ಷರಾಗಿ ಸತ್ಯನಾರಾಯಣ ಮಾಸ್ತಿ ಯವರನ್ನು ಅವಿರೋಧವಾಗಿ ಮರು ಆಯ್ಕೆ ಅಗಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷ ಡಿ.ಕಗ್ಗಲ್ಲ ಶಂಕರ್ ತಿಳಿಸಿದರು.

ಅವರು ಪಟ್ಟಣದ ಅಲ್ಲಮಪ್ರಭು ತಫೋವನದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಹಾಗೂ ಕರವೇ ತಾಲೂಕು ಘಟಕದ ನೂತನ ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸಂಡೂರು ಘಟಕದ ನೂತನ ಪದಾಧಿಕಾರಿಗಳು ಈ ರೀತಿಯಾಗಿದ್ದು ಉಪಾಧ್ಯಕ್ಷರಾಗಿ ಪ್ರಕಾಶ್ ಎಂ, ಹನುಮೇಶ್, ಗೋಪಾಲ್ ಸಿಂಧೆ, ಮಂಜುನಾಥ್ ನಂದಿಹಳ್ಳಿ ಆಯ್ಕೆಯಾದರು ಮತ್ತು ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಕಾಶ್ 14 ನೇ ವಾರ್ಡ್, ಆಸಿಫ್, ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ ಕನ್ನಡ ನಾಡು ನುಡಿ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುವುದರ ಜೊತೆಗೆ ಕನ್ನಡ ಕಟ್ಟುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದಂತಹ ಚಾನಲ್ ಶೇಖರ್ ಅವರು ಮಾತನಾಡಿ ಡಿಸೆಂಬರ್‍ ನಲ್ಲಿ ಬೆಂಗಳೂರಿನಲ್ಲಿ ಕನ್ನಡ ಉಳುವಿಗಾಗಿ ನಾರಾಯಣಗೌಡ ಅವರ ಹೋರಾಟ ಬಹುದೊಡ್ಡ ಹೋರಾಟವಾಗಿದೆ ಇದರ ಪರಿಣಾಮ ಸರ್ಕಾರವೇ ಕಾನೂನು ಜಾರಿಗೊಳಿಸುವ ಮೂಲಕ ಕನ್ನಡದ ಫಲಕಗಳನ್ನು ಹಾಕಲು ಆದೇಶಿಸಿತು, ನಿರಂತರವಾಗಿ ಕನ್ನಡಕ್ಕಾಗಿ ಹೋರಾಟ ಅತಿ ಅಗತ್ಯವಾಗಿದೆ, ಸ್ಥಳೀಯರಿಗೆ ಉದ್ಯೋಗ, ಗಡಿ ರಕ್ಷಣೆ, ನೀರಿನ ಬಳಕೆ ಹೀಗೆ ಹತ್ತು ಹಲವು ರೀತಿಯಲ್ಲಿ ರಕ್ಷಣೆ ಮಾಡಬೇಕು, ಅಲ್ಲದೆ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿಯೂ ಸಹ ಕನ್ನಡ ವಿಭಾಗ, ಮತ್ತು ಪೀಠ ಉಳಿಸುವಂತಹ ಕಾರ್ಯವನ್ನು ಕನ್ನಡದ ಸ್ವಾಮಿಗಳೇ ಎಂದು ಕರೆಯುವ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳ ನೇತೃತ್ವದಲ್ಲಿ ಹೋರಾಡಿ ಉಳಿಸಲಾಗುವುದು ಎಂದರು.

ಸಾನಿಧ್ಯ ವಹಿಸಿದ್ದ ಪ್ರಭುಮಹಾಸ್ವಾಮಿಗಳು ಮಾತನಾಡಿ ಸಂಡೂರು ಐತಿಹಾಸಿಕವಾಗಿ, ಸಾಂಸ್ಕøತಿಕವಾಗಿ, ಎಲ್ಲಾ ರೀತಿಯಿಂದಲೂ ಬಹು ವಿಶೇಷ, ಇಲ್ಲಿಯ ಪರಿಸರ ಬಳ್ಳಾರಿ ಜಿಲ್ಲೆಯ ಕಾಶ್ಮೀರವೇ ಅಗಿದೆ, ಅದರೆ ಇದರ ನಾಶ ಹೆಚ್ಚುತ್ತಿರುವುದಕ್ಕೆ ಜ್ವಲಂತವಾಗಿ ಸಂಡೂರಿನ ಅರಾಧ್ಯ ದೈವ ಶ್ರೀ ಕುಮಾರಸ್ವಾಮಿ ದೇವಸ್ಥಾನದ ಸುತ್ತಲೂ 2 ಕಿ.ಲೋ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಲು ಹೋರಾಟ ಬರೀ ಹೋರಾಟವಾಯಿತು, ಫಲ ನೀಡಲಿಲ್ಲ, ಅದೇ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಾಯನ ಪೀಠವಿದೆ, 50 ವರ್ಷ ಮುಗಿಸಿದರೂ ಖಾಯಂ ಉಪನ್ಯಾಸಕರು ಇಲ್ಲದೇ ಇರುವುದು ಶೋಚನೀಯ ಸಂಗತಿ ಇಂತಹ ಸಮಸ್ಯೆಗಳಿಗೆ ಕರವೇ ಸಂಘಟನೆಗಳು ಹೋರಾಡಬೇಕು ಅದಕ್ಕೆ ಸದಾ ಬೆಂಬಲವಾಗಿ ಇರುವುದಾಗಿ ಸೂಚಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತ್ಯನಾರಾಯಣ ಮಾಸ್ತಿ ಮಾತನಾಡಿ ಕನ್ನಡ ನಾಡು ನುಡಿಗೆ ಶ್ರಮಿಸುವುದಾಗಿ ಕರೆ ನೀಡಿದರು, ಸಂಡೂರು ತಾಲೂಕಿನ ಗೌರವ ಅಧ್ಯಕ್ಷರಾಗಿ ಸಿ.ಡಿ.ಭಾಸ್ಕರ್, ಕಾರ್ಯಕರ್ತರಾದ ಸುದೀಪ್ ಲೋಹಿತ್ ಗಣೇಶ್ ಕರ್ತಿಕಾ ಮೋಹಮಧ್ ಗೌಸ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here